Author: Korgi Shankaranaryana Upadhyaya (Inspiration of his translation of Krishna Karnamarita's of Leelashuka) Dr Manorama B N (Padvarna structure composition) Vid.Rohini Subbaratnam, Kanchana and Vid Kanchana Shurtiranjini, Bengaluru ( Music Composition)
ಸಂಸ್ಕೃತ ಕವಿ ಲೀಲಾಶುಕನ ಕೃಷ್ಣ ಕರ್ಣಾಮೃತವನ್ನು ಕನ್ನಡ ಭಾಷೆಯ ನೃತ್ಯಪದವರ್ಣದ ಸೊಗಸಿಗೆ ಅನ್ವಯಿಸುವ ಪ್ರಯತ್ನದ ಹಾದಿಯಲ್ಲಿ ಇದು ಸರ್ವಪ್ರಥಮವೆನಿಸಿದ ರಚನೆ. ವಿದ್ವಾನ್ ಕೊರ್ಗಿ ಶಂಕರನಾರಾಯಣರು ಅನುವಾದಿಸಿದ ಲೀಲಾಶುಕ ಕವಿಯ ಕೃಷ್ಣಕರ್ಣಾಮೃತದ ಸಮಗ್ರ ಓದಿನ ಬಳಿಕ ಅದರ ಸಾಲುಗಳನ್ನು ಪ್ರೇರಣೆಯಾಗಿ ಪಡೆದು ಡಾ.ಮನೋರಮಾ ಬಿ.ಎನ್ ಅವರು ನೃತ್ಯಾಭಿನಯಕ್ಕೆ ಒಪ್ಪುವಂತೆ ವಿಭಾವಾನುಭಾವಸಾಮಗ್ರಿಗಳನ್ನು ಹೊಂದಿಸಿ, ಕೆಲವು ಸಾಲುಗಳನ್ನು ಹೊಸತಾಗಿ ಬರೆದು ಪದವರ್ಣದ ರೂಪಕ್ಕೆ ಒಳಪಡಿಸಿದ ಕೃತಿಯಿದು. ಸಾಹಿತ್ಯವನ್ನು ಗಮನಿಸಿ ನಾಡಿನ ಖ್ಯಾತ ಸಂಗೀತ ವಿದ್ವಾಂಸರಾದ ಕಾಂಚನ ರೋಹಿಣಿ ಸುಬ್ಬರತ್ನಂ ಮತ್ತು ಅವರ ಸುಪುತ್ರಿ ವಿದುಷಿ. ಕಾಂಚನ ಶ್ರುತಿ ರಂಜಿನಿ ಅವರು ಧಾತುಸಂಯೋಜನೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಲೀಲಾಶುಕನಿಂದ ಮೊದಲ್ಗೊಂಡು ಇವರೆಲ್ಲರೂ ಈ ಪದವರ್ಣ ಕೃತಿಗೆ ರಚನಾಕಾರರೇ ಆಗಿದ್ದಾರೆ.
ನಾಯಿಕಾ ಲಕ್ಷಣ : ಪ್ರಗಲ್ಭ ಸ್ವೀಯಾ ನಾಯಿಕೆಯ ವಿರಹೋತ್ಕಂಠಿತಾ ಸ್ಥಿತಿಯ ಅಭಿನಯದ ಪದವರ್ಣವಿದು. ಮುರಳಿಯನ್ನು ತೊರೆದುಹೋದ ಶ್ರೀಕೃಷ್ಣನ ಬರುವಿಕೆಯನ್ನು ನಿರೀಕ್ಷಿಸುತ್ತಿರುವ ನಾಯಿಕೆಯಿವಳು. ಇಲ್ಲಿ ವೇಣುವೇ ಆಕೆಯ ಆಪ್ತ ಸಖಿಯಂತೆ, ಗುರುವಂತೆ ತೋರಿಕೊಳ್ಳುವ ಈ ಕೃತಿಯ ನಾಯಿಕಾ ವಿರಹದ ಸ್ಥಿತಿಯೇ ವಿಶಿಷ್ಟ. ಸಾಹಿತ್ಯ ಕೆಳಕಂಡಂತಿದ್ದು ಸ್ವರಗಳನ್ನೂ ಮತ್ತು ಗಾನಕ್ರಮ, ನರ್ತನಕ್ರಮದ ರೀತಿಗಳನ್ನೂ ಮುಂದೆ ಕೊಡಲಾಗಿದೆ. ಕಲಾವಿದರು ಸದುಪಯೋಗಪಡಿಸಿಕೊಳ್ಳಬಹುದು.
ಮರಳಿ ಬರುವನೇ ಮುರಳೀ ಮೋಹನ? ತೊರೆದ ಕೊಳಲ, ಜೀವ ಮರೆತ |ಪ|
ಅನುಪಲ್ಲವಿ 1:
ಖಾಲಿ ಒಡಲಿನಲಿ ಜೀವ ತಂದ ಸೊಗ ಬೆರಳಚಿಗುರು ತಾಗಿ
ಅನುಪಲ್ಲವಿ 2:
ಮೆಳೆಯ ಬಿದಿರಿನೊಳೆ ಬೀಸೆ ಗಾಳಿ, ಸುಳಿದನೇ, ಸನಿಹ ಸಾಗಿ?
ಚಿಟ್ಟೆಸಾಹಿತ್ಯ :
ಕಣ್ಣಿನ ನಗುದಾವರೆ ಮೊಗದುಸಿರಿನ ಸವಿಯನು ಉಂಡಿಹ ಓ ಕೊಳಲೇ
ರಂಗಿನ ಚೆಂದುಟಿ ಸನಿಹವ ಸಾಧಿಸಿ ತಾಗಿಸಿ ನಿಂದಿಹ ಓ ಕೊಳಲೇ
ನೀನು ಉಲಿಯುತಿರೆ ತನ್ನ ಮರೆವವವಗೆ ಬೇಡಿಕೆಯೊಂದನು ಸಲಿಸುವೆಯಾ
ನನ್ನೀ ವಿರಹವ ಉಸುರುತ ಉಸಿರನು ಕಾಯಲು ಪಿಸುನುಡಿಯಾಡುವೆಯಾ?
ಚರಣ :
ಶ್ವಾಸವೆ ವಿಶ್ವಾಸ | ವೇಣುಧ್ಯಾನದಿ ಆಶ್ವಾಸ
ಎತ್ತುಗಡೆ ಸಾಹಿತ್ಯ ೧:
ಮಾತಿಗೂ ಮೌನದ ಧ್ಯಾನವ ಕೊಡಿಸುವ
ಎತ್ತುಗಡೆ ಸಾಹಿತ್ಯ ೨:
ನಲ್ಲನ ಬಿಸಿ ಉಸಿರೇ ತಂಪಾಯಿತು ಮಾಮರ ಹಾಡಿದೆ ಮಲರರಳಿ
ಎತ್ತುಗಡೆ ಸಾಹಿತ್ಯ ೩:
ನವಿಲಿನ ಕೇಕೆಗೆ ಮೆಯ್ಯನು ಕೊಡವಿದ ಹಸುಹುಲ್ಲೆಗಳ ಮೈಮರೆಸಿ
ಹಂಸಾವಳಿಯಲಿ ಹುಮ್ಮಸ ಹೊಮ್ಮಿಸಿ ಗೋಪ ಜನರದೆಗೆ ಸಂತಸ ಚಿಮ್ಮಿಸಿ
ಎತ್ತುಗಡೆ ಸಾಹಿತ್ಯ ೪:
ಬಾಲಕಿಯರ ತಾಳದ ಲಯ ಮೆಚ್ಚುತ ಕುಡಿ ಹುಬ್ಬೇರಿಸಿ ನರ್ತಿಸಲು
ಗೌಳಿಗಿತ್ತಿಯರ ಹಾಡ ಸವಿಸವಿದು ಚೆನ್ನುಡಿಸಲು ವಂಶೀ ವನಿತೆ
ತೇಲಿಸಿ ಮರೆಸುತ ಗೋವಿಂದ ಕುಣಿಕುಣಿಯಲು ಆತ್ಮಾನಂದ
ನೇಹದಿ ತಾನೇ ತಾನನ ತನನನ ತಾನಳಿಯಲು ತಂದಾನಂದ
ಎತ್ತುಗಡೆ ಸಾಹಿತ್ಯ ೫:
ಪೋ ಪೋ ಎಂದರೆ ತಾತ್ಸಾರ ಪೋಗದಿರೆಂದರೆ ಅಧಿಕಾರ
ನಾನಿರೆನೆಂದರೆ ಅಪಶಕುನ, ಇರುವೆನೆಂತು? ತೋರಿಸು ಕರುಣ
ಕಲಿಸು ಬಾ, ವಿದಾಯದ ಬೋಧೆಯ ಯುಗಯುಗ ಕಳೆದರೂ ಬಿಡದೆಯೇ ಕಾಯುವ
ಕಳೆ ಒಡಲ ಬಿಸಿಯ, ಕೊಡು ಕೊಳಲ ಮೈಯ್ಯ, ಅಡಿಗಡಿಗೆ ಹಿಡಿದು, ನುಡಿ ಬಿಡದೆ ಜೀವ
—-
Kannada Padavarna Composition Penned by Dr Manorama B N; which is direct Influenced by Leelashuka’s Krishna Karnamrita’s Kannada Translation of Vid.Korgi Shanaranaryana Upadhyaya.
Music Composed by Vid Kanchana Rohini Subbaratnam and Kanchana Shrutiranjani)
Raga Hamsanandi; Aditala
Notation Pages in Pdf Vamshi vilasa Notations
& Vocal by : Vid. Kanchana Shrutiranjani available here.
ಇದನ್ನು ಪ್ರಪ್ರಥಮ ನೃತ್ಯಸಂಯೋಜನೆಗೆ ಒಳಪಡಿಸಿದವರು- ಡಾ.ಶೋಭಾ ಶಶಿಕುಮಾರ್ ಅವರ ಶಿಷ್ಯೆ ಮಧುಲಿಕಾ ಶ್ರೀವತ್ಸ(ಕೊನೆಯ ಚರಣವೊಂದನ್ನು ಬಿಟ್ಟು). ಈ ನೃತ್ಯಪ್ರದರ್ಶನವು ಬೆಂಗಳೂರಿನ ಕಲಾಗೌರಿಯಲ್ಲಿ ನೂಪುರ ಭ್ರಮರಿಯು ಏರ್ಪಡಿಸಿದ ರಾಜ್ಯಮಟ್ಟದ ನೃತ್ಯಸಂಶೋಧನ ವಿಚಾರಸಂಕಿರಣ ಆಗಸ್ಟ್ 12, 2018 ರಲ್ಲಿ ನಡೆದಿತ್ತು. ಆ ಕಾರ್ಯಕ್ರಮದ ಫೇಸ್ಭುಕ್ ಲೈವ್ ಲಿಂಕ್ ನ್ನು ಕೂಡಾ ಆಸಕ್ತರಿಗೆ ಇಲ್ಲಿ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹಾಡಿದವರು ವಿದುಷಿ ನಾಗಶ್ರೀ ನಾರಾಯಣ್, ಬೆಂಗಳೂರು.
This live stream by #Danceresearchsymposium grand evening recital #Kalagowri sandhyeA first Kannada #Padavarna (on the concept of #Flute and a #Virahotkalntita #nayika) based on great poet #Leelashuka's #KrishnaKarnamrita. Written by KS Upadhyaya and Dr Manorama B N together. Music direction by Rohini Kanchana Subbarathnam and Shrutiranjini kanchana. Performed by Madhulika Srivatsa as a part of her research work Krishna as #Shringaranayakahttps://youtu.be/hq6c6dTUSJIThis is YouTube link#ಸಾಹಿತ್ಯ #ವಂಶೀವಿಲಾಸ #ಪದವರ್ಣ- ಆದಿತಾಳ- #ವಿರಹೋತ್ಕಂಠಿತಾ #ನಾಯಿಕ, #ಧೀರಲಲಿತ #ನಾಯಕಮರಳಿ ಬರುವನೇ #ಮುರಳೀ #ಮೋಹನ? ತೊರೆದ #ಕೊಳಲ, ಜೀವ ಮರೆತ#ಅನುಪಲ್ಲವಿ 1:ಬರಿದೆ/ಖಾಲಿ ಒಡಲಿನಲಿ ಜೀವ ತಂದ ಸೊಗ ಬೆರಳಚಿಗುರು ತಾಗಿ ಅನುಪಲ್ಲವಿ 2:ಮೆಳೆಯ ಬಿದಿರಿನೊಳೆ ಬೀಸೆ ಗಾಳಿ, ಸುಳಿದನೇ, ಸನಿಹ ಸಾಗಿ?ಚಿಟ್ಟೆಸಾಹಿತ್ಯ : ಕಣ್ಣಿನ ನಗುದಾವರೆ ಮೊಗದುಸಿರಿನ ಸವಿಯನು ಉಂಡಿಹ ಓ ಕೊಳಲೇರಂಗಿನ ಚೆಂದುಟಿ ಸನಿಹವ ಸಾಧಿಸಿ ತಾಗಿಸಿ ನಿಂದಿಹ ಓ ಕೊಳಲೇನೀನು ಉಲಿಯುತಿರೆ ತನ್ನ ಮರೆವವವಗೆ ಬೇಡಿಕೆಯೊಂದನು ಸಲಿಸುವೆಯಾನನ್ನೀ ವಿರಹವ ಉಸುರುತ ಉಸಿರನು ಕಾಯಲು ಪಿಸುನುಡಿಯಾಡುವೆಯಾ?ಚರಣ : ಶ್ವಾಸವೆ ವಿಶ್ವಾಸ | ವೇಣುಧ್ಯಾನದಿ ಆಶ್ವಾಸಎತ್ತುಗಡೆ ಸಾಹಿತ್ಯ ೧: ಮಾತಿಗೂ ಮೌನದ ಧ್ಯಾನವ ಕೊಡಿಸುವಎತ್ತುಗಡೆ ಸಾಹಿತ್ಯ ೨: ನಲ್ಲನ ಬಿಸಿ ಉಸಿರೇ ತಂಪಾಯಿತು ಮಾಮರ ಹಾಡಿದೆ ಮಲರರಳಿಎತ್ತುಗಡೆ ಸಾಹಿತ್ಯ ೩: ನವಿಲಿನ ಕೇಕೆಗೆ ಮೆಯ್ಯನು ಕೊಡವಿದ ಹಸುಹುಲ್ಲೆಗಳ ಮೈಮರೆಸಿಹಂಸಾವಳಿಯಲಿ ಹುಮ್ಮಸ ಹೊಮ್ಮಿಸಿ ಗೋಪ ಜನರದೆಗೆ ಸಂತಸ ಚಿಮ್ಮಿಸಿಎತ್ತುಗಡೆ ಸಾಹಿತ್ಯ ೪: ಬಾಲಕಿಯರ ತಾಳದ ಲಯ ಮೆಚ್ಚುತ ಕುಡಿ ಹುಬ್ಬೇರಿಸಿ ನರ್ತಿಸಲುಗೌಳಿಗಿತ್ತಿಯರ ಹಾಡ ಸವಿಸವಿದು ಚೆನ್ನುಡಿಸಲು ವಂಶೀ ವನಿತೆತೇಲಿಸಿ ಮರೆಸುತ #ಗೋವಿಂದ ಕುಣಿಕುಣಿಯಲು ಆತ್ಮಾನಂದನೇಹದಿ ತಾನೇ ತಾನನ ತನನನ ತಾನಳಿಯಲು ತಂದಾನಂದFollowed by exquisite performance by Dr Shobha shashikumar for the lyrics of Korgi Shankaranarayana Upadhyaya. On the new and special theme on playfulness and Leela of #Krishna.
Posted by Manorama BN on Sunday, August 12, 2018
ಈ ವರ್ಣ,ದೊಂದಿಗೇ ಡಾ.ಮನೋರಮಾ ಅವರು ಲೀಲಾಶುಕನ ಕೃಷ್ಣಕರ್ಣಾಮೃತದ ಕೊರ್ಗಿ ಉಪಾಧ್ಯಾಯರ ಅನುವಾದವನ್ನು ಆಧರಿಸಿ ಒಂಭತ್ತು ವರ್ಣಗಳ ಸಾಹಿತ್ಯವನ್ನು ಸಂಯೋಜಿಸಿದ್ದು; ಶಾಸ್ತ್ರೋಚಿತವಾದ ಸಂಗೀತ ಸಂಯೋಜನೆಯು ಜರುಗುತ್ತಲಿದೆ. ಭವಿಷ್ಯದಲ್ಲಿ ಅವನ್ನೂ ನಿರೀಕ್ಷಿಸಬಹುದಾಗಿದ್ದು; ಆಸಕ್ತಿಯಿರುವ ಕಲಾವಿದರು ಸಂಪರ್ಕಿಸಬಹುದು. ಅವುಗಳು ಹೀಗಿವೆ.
೧. ಬಾಲಲೀಲಾ ವರ್ಣ- ತಾಯಿ ಮತ್ತು ಶೈಶವದ ಮಗುವಿನ ಆಟಪಾಟಗಳನ್ನಾಧರಿಸಿ ಯಶೋದೆ ಹಾಗೂ ಕೃಷ್ಣನನ್ನೂ ಸಮೀಕರಿಸಿದ ವಸ್ತು
೨. ಕಿಶೋರ ಕೃಷ್ಣ- ಭಕ್ತ್ಯಾವಲಂಬನ – ಕಿಶೋರ ವಯಸ್ಕ ಕೃಷ್ಣನ ಲೀಲಾವಿನೋದಗಳನ್ನು ಸಮಗ್ರವಾಗಿ ವಿವೇಚಿಸಿದ ವಸ್ತು
೩. ಪ್ರೌಢನಾಯಿಕಾ – ಪ್ರೌಢ ಕೃಷ್ಣ- ಪ್ರಜ್ಞಾ ಸುಷುಪ್ತಿಗಳಲ್ಲಿ ಕೃಷ್ಣನನ್ನು ಕಂಡೂ ಕಾಣದ ಗೊಂದಲದಲ್ಲಿರುವ ನಾಯಿಕೆಯ ವಸ್ತು
೪. ವಿಪ್ರಲಂಭ ಶೃಂಗಾರ-ವಿರಹಾಭಿಸಾರಿಕಾ ನಾಯಿಕಾ- ತೊಳಲಾಟ ಮತ್ತು ಹುಡುಕಾಟದ ನಾಯಿಕೆ
೫. ವ್ರಜವಿಶ್ವಾಸ – ಪ್ರೋಷಿತಪತಿಕಾ ಸಮೂಹ- ಧೀರಲಲಿತ ನಾಯಕ- ವ್ರಜಸಮೂಹವೇ ನಾಯಿಕೆಯಂತಾದ ಭಾವಾಭಿವ್ಯಕ್ತಿಚಿತ್ರಣ
೬. ಉತ್ತಮ ಖಂಡಿತಾ ನಾಯಿಕ- ನಿರಾಶೆ, ಹತಾಶೆ, ಬೇಗುದಿ, ಸಿಟ್ಟಿನಿಂದ ಬಿಸುಸುಯ್ದ ನಾಯಿಕೆ
೭. ಖಂಡಿತೆಸಂವಾದ- ಯುಗಳ ಅಭಿವ್ಯಕ್ತಿಗೆ ಒಪ್ಪುವ ವಸ್ತು- ಕೃಷ್ಣ ಮತ್ತು ಮಧ್ಯಮ ಖಂಡಿತೆ ನಾಯಿಕೆಯರ ಹೃದಯಂಗಮ ಸಂವಾದ
೮. ಬಂಧನಾಸಕ್ತೆ- ಕೃಷ್ಣನನ್ನು ತನ್ನೊಳಗೆ ಬಂಧಿಸಿಕೊಳ್ಳಲು ಸುಲಭೋಪಾಯದ ಹುಡುಕಾಟದಲ್ಲಿರುವ ನಾಯಿಕೆ
೯. ಮುಗ್ಧಾ ನಾಯಿಕೆ- ರಂಗಾಂತರಂಗ- ರಂಗನ ಒಳಗನ್ನು ತಿಳಿಯಪೇಕ್ಷಿಸುವ ಮುಗ್ಧೆ ಈ ನಾಯಿಕೆ.
Announcement in English on Padavarna compisiton on Krishna Karnamrita –
http://www.noopurabhramari.com/new-kannada-varna-composition-on-leelashukas-krishna-karnamrita/
ಇವಿಷ್ಟೂ ಕೃಷ್ಣಾಧಾರಿತ ಪದವರ್ಣಗಳಾದರೆ ಡಾ.ಮನೋರಮಾ ಅವರೇ ರಚಿಸಿದ
ರಾಮಾಯಣಾಧರಿತ ಪದವರ್ಣ ( ಭರತನಿರೀಕ್ಷೆಯ ನಾಯಕಾಭಾವ, ಮೃಗಮನ -ಮಾನವನ ಮನಸ್ಸು ಮತ್ತು ರಾಮಾಯಣ ಮೃಗವೃತ್ತಿಗಳನ್ನು ಸಮೀಕರಿಸಿದ)ಗಳೂ,
ಬಾದಾಮಿಯ ನರ್ತನಶಿವ- ಮಹಾನಟ ಶಿಲ್ಪವನ್ನಾಧರಿಸಿದ ತಾಂಡವಶಿವನ ಪದವರ್ಣವೂ ಲಭ್ಯವಿದೆ. ಇವಿಷ್ಟೂ ನೃತ್ಯಾಭಿವ್ಯಕ್ತಿಗೆ ನೂಪುರ ಭ್ರಮರಿಯ ಬಳಗದ ಪದವರ್ಣ ಕೊಡುಗೆಗಳು. ಇವಲ್ಲದೆ ಕೌತ, ಜಾವಳಿ, ಪದ ಮೊದಲಾದ ರಚನೆಗಳೂ ಲಭ್ಯವಿವೆ. ಆಸಕ್ತರು ಗಮನಹರಿಸಬಹುದು.