Author: ಶ್ರೀಕಂಠ ಫಾಟಕ್, ಕಾರ್ಕಳ
(ಯಕ್ಷಗಾನ ಅಕಾಡೆಮಿಯ ಸಾರಥ್ಯದಲ್ಲಿ ಪ್ರಾರಂಭಗೊಂಡಿರುವ ಯಕ್ಷಗಾನದ ಪಾಠಪಟ್ಟಿ ಮತ್ತು ಪರೀಕ್ಷೆಗಳ ರಚನೆಗೆ ಕುರಿತಂತೆ ನಡೆಯುತ್ತಿರುವ ಚರ್ಚೆಯ ಮುಂದುವರಿದ ಭಾಗ, ಕಾರ್ಯಾಗಾರದ ಪ್ರತಿಕ್ರಿಯೆಗೆ ಪ್ರತಿಕ್ರಿಯೆಗಳಿಲ್ಲಿವೆ.)
ಈ ವಿಚಾರವು ತುಂಬಾ ಕ್ಲಿಷ್ಟಕರವಾಗಿದ್ದು ಇದನ್ನು ತಯಾರಿಸುವವರು ಲಯಬದ್ಧತೆ, ಅರ್ಥಜ್ಞಾನ, ಭಾವಕ್ಕೆ ಹೊಂದುವ, ರಾಗಜ್ಞಾನವಿರುವ ಭಾಗವತಿಕೆ, ಅದೇರೀತಿಯಲ್ಲಿ ಮದ್ದಳೆ, ಚಂಡೆ, ಕುಣಿತ, ವೇಷಭೂಷಣ, ಅರ್ಥಗಾರಿಕೆ ಮುಂತಾದ ಎಲ್ಲವನ್ನೂ ಬಲ್ಲವರಿಂದ ಮಾತ್ರ ರಚಿಸಲು ಸಾಧ್ಯವಾದೀತು. ಇಲ್ಲವಾದಲ್ಲಿ ಕಲಿಯುವ ವಿದ್ಯಾರ್ಥಿಗೆ ಕುಣಿತ, ವೇಷ, ಅರ್ಥ ಇವುಗಳಲ್ಲಿ ಹೊಂದಾಣಿಕೆಯಾಗದೆ ಗೊಂದಲವಾದೀತು. ಹಾಗೆ ನೋಡಿದಲ್ಲಿ ಪಾಠಪಟ್ಟಿಯನ್ನು ತಯಾರಿಸುವ ಯೋಗ್ಯರು ಯಕ್ಷಗಾನ ಕ್ಷೇತ್ರದಲ್ಲಿ ಅನೇಕರಿದ್ದಾರೆ. ಯಕ್ಷಗಾನ ಅಕಾಡೆಮಿಯವರು ಶಾಲೆಗಳಲ್ಲಿ ಯಕ್ಷಗಾನ ಪಠ್ಯವನ್ನು ಅಳವಡಿಸಲು ವಿದ್ಯಾ ಇಲಾಖೆಯನ್ನು ಒಪ್ಪಿಸಬೇಕು.