ಶಾಸ್ತ್ರರಂಗ ಭಾಗ 6 : ದಾಕ್ಷಿಣಾತ್ಯ (Video series)-ಸಂಚಿಕೆ 67 : ಬೃಹದ್ಭಾರತ ದರ್ಶನ ಮತ್ತು ಭಾರತದ ಕಲಾ ಪ್ರಕಾರಗಳು, ಗ್ರಂಥರಾಶಿಗಳ ಪ್ರಾಂತೀಯ ಪ್ರವೃತ್ತಿ ಮತ್ತು ನಾಟ್ಯಶಾಸ್ತ್ರದ ಮನೋಧರ್ಮ ಸಂಬಂಧ

Posted On: Sunday, January 19th, 2025
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 6 : ಬೃಹದ್ಭಾರತ ದರ್ಶನ

ಸಂಚಿಕೆ ೬೭ : ಬೃಹತ್/ ಪ್ರಾಚೀನ ಭಾರತದ ಭೌಗೋಳಿಕ ವ್ಯಾಪ್ತಿಯ ಕಲೆಗಳಲ್ಲಿರುವ ನಾಲ್ಕು ಪ್ರಧಾನ ವೃತ್ತಿ (ಭಾರತೀ, ಸಾತ್ತ್ವತೀ, ಕೈಶೀಕೀ, ಆರಭಟೀ ) ಮತ್ತು ಪ್ರವೃತ್ತಿಗಳ (ದಾಕ್ಷಿಣಾತ್ಯ, ಓಡ್ರಮಾಗಧೀ, ಪಾಂಚಾಲೀ, ಆವಂತೀ) ಅಂದರೆ ಭಾರತದ ಕಲಾ ಪ್ರಕಾರಗಳು ಹಾಗೂ ಗ್ರಂಥರಾಶಿಗಳು ಅಳವಡಿಸಿಕೊಂಡಿರುವ ವಿವಿಧ ಪ್ರಾಂತೀಯ ಶೈಲಿ- ಮನೋಧರ್ಮ ಸಂಬಂಧ ವಿಶೇಷಗಳನ್ನು ಚರ್ಚಿಸುವ ಸಮಾಪನ ಸಂಚಿಕೆ. ಈ ಸಂಚಿಕೆಯ ಮೂಲಕ ಸುಮಾರು ಒಂದು ವರುಷ ೪ ತಿಂಗಳ ಅಂದರೆ ಸತತವಾಗಿ ೬೭ ವಾರಗಳ ಪರ್ಯಂತ ಪ್ರತೀ ಭಾನುವಾರ ಬೆಳಗ್ಗೆ ೬ ಗಂಟೆಗೆ ತೆರೆಗಂಡ ಭಾರತದ ಶಾಸ್ತ್ರಗ್ರಂಥಗಳ ಮೊತ್ತಮೊದಲ ಬೃಹತ್ ಸರಣಿ ಕಾರ್ಯಕ್ರಮ ತನ್ನ ೬೭ ನೇ ಸಂಚಿಕೆಯಲ್ಲಿ ಮುಕ್ತಾಯ ಕಾಣುತ್ತಿದೆ. ಈ ವಿಶೇಷ ಕಾರ್ಯಕ್ರಮವು ೩೦೦ಕ್ಕೂ ಮಿಗಿಲು ಗ್ರಂಥಾಧ್ಯಯನ, ಅನೇಕಾನೇಕ ಗೀತ-ವಾದ್ಯ- ತಾಲ- ನೃತ್ಯ- ನಾಟ್ಯ ವಿಷಯಗಳ ಬಗ್ಗೆ ಬರೆದ ಗ್ರಂಥಕರ್ತರ, ವ್ಯಾಖ್ಯಾನಕಾರರ, ವಿದ್ವಾಂಸರ ಬರೆಹಗಳ ಪರಾಮರ್ಶನದ ಸಹಿತ ನಾಟ್ಯಶಾಸ್ತ್ರದಿಂದೀಚೆಗಿನ ಸುಮಾರು ೧೭೦ರಷ್ಟು ಗ್ರಂಥಗಳ ಉಲ್ಲೇಖವನ್ನೂ, ೮೫ ಮುಖ್ಯ ಗ್ರಂಥಗಳ ಸಂಚಿಕೆಗಳನ್ನೂ, ೨೦೦ರಷ್ಟು ಶಾಸ್ತ್ರ ವಿಚಕ್ಷಣರ ಕುರಿತು ಅಭೂತಪೂರ್ವವೆನಿಸುವ ಪರಾಮರ್ಶನವನ್ನೂ ಮಾಡಿದೆ.

 

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 6 : Brihad Bharata Darshana (Ancient Bhārata)

Episode 67: Through this series, the first-ever grand program on the Indian Shastric texts, spanning 1 year and 4 months, aired every Sunday at 6 a.m., concludes with its 67th edition. This special program has created an unprecedented series by studying over 300 texts, consulting numerous authors and articles, and mentioning approximately 170 treatises that followed the Nāṭyaśāstra. These 67 episodes has extensively covered 85 major treatises and analyzed over 200 Śāstrakāras (treatise authors) commentators and scholars of Sangita and Natya related Śāstra (Gita- Vadya-Nrtya- Tala), offering an unparalleled contribution to the field. This concluding episode also delves the vast geographical expanse of ancient India and it’s four major tendencies and regional styles with creative ethos adopted by Indian art forms and literary traditions; means four Vrtti- Bhāratī, Sātwatī, Kaishikī, Ārabhaṭī and Pravrtti’s – Dākshinātya, Odramāgadhi, Pāncāli, Āvantī which enhances the style and creative spirit (Manodharma) adopted by the art forms of India.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha &

Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Cross Fade studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಶಾಸ್ತ್ರಸಂಪತ್ತಿನೆಡೆಗೆ ಪಕ್ಷಿನೋಟವನ್ನು ಮಾಡುತ್ತಾ ನಾವು ಇಂದಿಗೆ ೬೭ ನೇ ಸಂಚಿಕೆಯತ್ತ ಮುನ್ನುಗ್ಗುತ್ತಿದ್ದೇವೆ. ಮಹಾಮುನಿ ಭರತನ ದರ್ಶನದ ನಾಲ್ಕು ಪ್ರಧಾನ ಪ್ರವೃತ್ತಿಗಳ ಪೈಕಿ ಸುಪ್ರಸಿದ್ಧವಾದ ದಾಕ್ಷಿಣಾತ್ಯದಿಂದ ಮೊದಲ್ಗೊಂಡು ಪೂರ್ವಕ್ಕೆ ಪಯಣಿಸುತ್ತಾ ಓಡ್ರಮಾಗಧೀಯನ್ನು ಸಂದರ್ಶಿಸಿ, ಅಲ್ಲಿಂದ ಉತ್ತರದ ಪಾಂಚಾಲೀಯನ್ನು ಪರಾಮರ್ಶಿಸುತ್ತಾ, ಪೂರ್ವದ ಆವಂತೀಯನ್ನೂ ಕ್ರಮಿಸಿ, ಕೊನೆಗೆ ದಕ್ಷಿಣಭಾರತದ ನಮ್ಮ ಆರಂಭಸ್ಥಾನವನ್ನೇ ಗಮ್ಯಸ್ಥಾನವಾಗಿಸಿ ಬಂದು ಸೇರಿದ್ದೇವೆ.

ಹೀಗೆ ಭರತಭೂಮಿಯ ಚತುರ್ದಿಕ್ಕುಗಳಲ್ಲಿ ರಚಿಸಲ್ಪಟ್ಟು ಉಳಿದು ಬೆಳೆದು ಬಂದ ಒಂದುಸಾವಿರ ವರ್ಷದ ಅಂದರೆ ೧೦ನೇ ಶತಮಾನದ ಅನಂತರದಲ್ಲಿ ರಚಿಸಲ್ಪಟ್ಟ ಅನೇಕಾನೇಕ ಗ್ರಂಥಗಳ ಪರಿಚಯವನ್ನು ಮಾಡಿದ್ದೇವೆ. ಅದೂ ಸುಮ್ಮನೆ ಅಲ್ಲ; ಸಂಗೀತವೆನ್ನುವ ಬೃಹತ್ ಕಲಾಶಾಖೆಯ ಗೀತ-ವಾದ್ಯ-ತಾಲ-ಪ್ರಬಂಧಗಳೆಂಬ ರಚನೆಗಳು-ನೃತ್ಯ-ನಾಟಕಾದಿ ದಶರೂಪಕಗಳು-ದೇಶೀನೃತ್ಯಗಳು, ನೃತ್ತದ ಅಂಗೋಪಾಂಗ ಅಭಿನಯಗಳು, ಗಾಯನಕ್ರಮ, ರಸತತ್ತ್ವ, ನಾಯಿಕಾ ನಾಯಕಭೇದ, ಕಾವ್ಯ, ಕಲಾಕಛೇರಿಯ ಪದ್ಧತಿ- ಲಕ್ಷಣಕಾರರ ಕುರಿತ ಐತಿಹಾಸಿಕವಾದ ಮೇಲ್ಪಂಕ್ತಿ ಮತ್ತು ವೈಯಕ್ತಿಕ ವಿವರಗಳನ್ನೂ ಸೇರಿದಂತೆ ಹಲವು ಆಯಾಮದೆಡೆಗೆ. ಒಟ್ಟಿನಲ್ಲ್ಲಿ ನಾಟ್ಯಶಾಸ್ತ್ರದಿಂದೀಚೆಗಿನ ಬಹುತೇಕ ಎಲ್ಲ ನಾಟ್ಯ-ನೃತ್ಯವಿಷಯಕವಾದ ಎಲ್ಲ ಲಾಕ್ಷಣಿಕರು, ಗ್ರಂಥಗಳ ಬಗ್ಗೆ ಒಂದೊಂದು ಸಾಲಾದರೂ ಎಂದು ಯೋಚನೆ ಮಾಡಹೊರಟರೂ ಸುಮಾರು ೮೫ ಕ್ಕಿಂತಲೂ ಹೆಚ್ಚಿನ ಮುಖ್ಯ ಗ್ರಂಥಗಳ ಕುರಿತು ಸಂಚಿಕೆಗಳು, ಅವುಗಳಲ್ಲಿ ಸುಮಾರು ೨೦೦ರಷ್ಟು ಲಕ್ಷಣಶಾಸ್ತ್ರಜ್ಞರ ವಿಚಾರ ವಿಮರ್ಶೆಯಾಗಿವೆ. ಮತ್ತು ೮೫ರಷ್ಟು ಗ್ರಂಥಗಳು ಮುಖ್ಯ ಗ್ರಂಥಗಳಿಗೆ ಹೊಂದಿಕೊಂಡ ಅಥವಾ ಸಂಬಂಧಿತವಾದ ಗ್ರಂಥಗಳು/ವ್ಯಾಖ್ಯಾನಗಳಾಗಿವೆ. ಅಂದರೆ ಒಟ್ಟು ೧೭೦ರಷ್ಟು ಗ್ರಂಥಗಳ ಉಲ್ಲೇಖವನ್ನು ಕಾಣಬಹುದು. ಇನ್ನೂ ಪ್ರವೃತ್ತಿಗಳ ಆಧಾರದಲ್ಲಿ ವಿಂಗಡಿಸಲ್ಪಟ್ಟ ರೀತಿಗಳಲ್ಲಿ ಹೇಳುವುದಾದರೆ

ದಾಕ್ಷಿಣಾತ್ಯ ಪ್ರವೃತ್ತಿಯನ್ನು ಸೂಚಿಸುವಂತೆ ತೋರುವ ದಕ್ಷಿಣ ಭಾಗದ ಭಾರತದಲ್ಲಿ ರಚನೆಯಾದ ಗ್ರಂಥಗಳಲ್ಲಿ ಸುಮಾರು ೩೬ ಮುಖ್ಯಗ್ರಂಥಗಳನ್ನು, ಹಾಗೂ ೫೪ರಷ್ಟು ಸಂಖ್ಯೆಯಲ್ಲಿ ಬೇರೆ ಸಂಬಂಧಿತ ಗ್ರಂಥಗಳನ್ನೂ;

ಓಡ್ರಮಾಗಧೀ ಪ್ರವೃತ್ತಿಯನ್ನು ಸೂಚಿಸುವ ಭಾರತದ ಪೂರ್ವ ಪ್ರಾಂತ್ಯಗಳಲ್ಲಿ ರಚಿಸಲ್ಪಟ್ಟ ಗ್ರಂಥಗಳಲ್ಲಿ ೧೪  ಮುಖ್ಯಗ್ರಂಥಗಳನ್ನು, ೬ ಸಂಖ್ಯೆಯಲ್ಲಿ ಬೇರೆ ಸಂಬಂಧಿತ ಗ್ರಂಥಗಳನ್ನೂ;

ಪಾಂಚಾಲೀ ಪ್ರವೃತ್ತಿಯನ್ನು ಸೂಚಿಸುವ ಭಾರತದ ಉತ್ತರ ಪ್ರಾಂತ್ಯಗಳಲ್ಲಿ ರಚಿಸಲ್ಪಟ್ಟ ಗ್ರಂಥಗಳಲ್ಲಿ ೪  ಮುಖ್ಯಗ್ರಂಥಗಳನ್ನು, ೨ ಸಂಖ್ಯೆಯಲ್ಲಿ ಬೇರೆ ಸಂಬಂಧಿತ ಗ್ರಂಥಗಳನ್ನೂ;

ಆವಂತೀ ಪ್ರವೃತ್ತಿಯನ್ನು ಸೂಚಿಸುವ ಭಾರತದ ಪಶ್ಚಿಮ ಪ್ರಾಂತ್ಯಗಳಲ್ಲಿ ರಚಿಸಲ್ಪಟ್ಟ ಗ್ರಂಥಗಳಲ್ಲಿ ೮  ಮುಖ್ಯಗ್ರಂಥಗಳನ್ನು, ೨೩ ಸಂಖ್ಯೆಯಲ್ಲಿ ಬೇರೆ ಸಂಬಂಧಿತ ಗ್ರಂಥಗಳನ್ನೂ ನಾವು ಪರಿಶೀಲಿಸಿ, ವಿಮರ್ಶಿಸಿ, ಅಧಿಕೃತವಾಗಿ ದಾಖಲೆ, ಇತಿಹಾಸ, ಅಧ್ಯಯನ ಸಹಿತವಾಗಿ ಪ್ರಸ್ತುತಿಯನ್ನು ಸುಮಾರು ಮುಖ್ಯಗ್ರಂಥಗಳನ್ನು, ಸಂಖ್ಯೆಯಲ್ಲಿ ಬೇರೆ ಸಂಬಂಧಿತ ಗ್ರಂಥಗಳನ್ನೂ ಶಾಸ್ತ್ರರಂಗದಲ್ಲಿ ವಿವೇಚಿಸಿದ್ದೇವೆ. ಅದಲ್ಲದೆ ಆರಂಭಿಕ ಮತ್ತು ಮುಕ್ತಾಯ ಈ ಸಂಚಿಕೆಗಳೂ ಸೇರಿ ಒಟ್ಟು ೬೭ ಸಂಚಿಕೆಗಳನ್ನು ರೂಪಿಸಲಾಗಿದೆ.

ಇವೆಲ್ಲವೂ ಒಂದೆರಡು ದಿನದ ಕೆಲಸವಲ್ಲ. ಇದಕ್ಕಾಗಿ ನಾವು ವ್ಯಯಿಸಿದ ಸಮಯ, ಶ್ರಮಗಳು ಕೂಡಾ ಅಷ್ಟೇ ದೀರ್ಘ ಮತ್ತು ಹಿರಿದು. ಹಸ್ತಪ್ರತಿ, ಪ್ರಕಟಿತ ಗ್ರಂಥಗಳನ್ನು ಓದಿ, ಪರಾಮರ್ಶಿಸಿ, ತೌಲನಿಕವಾದ ಅಧ್ಯಯನಗಳನ್ನು ನಡೆಸಿ, ಹಿರಿಯರ ಎಷ್ಟೋ ಪ್ರಬಂಧ, ಗ್ರಂಥಗಳನ್ನು ಓದಿ ನೋಡಿ ಮಾಡಿದ ಕೆಲಸ. ಇದಕ್ಕಾಗಿ ಸುಮಾರು ೩೦೦ಕ್ಕೂ ಮಿಗಿಲು ಗ್ರಂಥಾಧ್ಯಯನ, ಅನೇಕಾನೇಕ ಲೇಖನಗಳ ಪರಾಮರ್ಶನವೇ ನಡೆದಿದೆ. ನಾಟ್ಯಶಾಸ್ತ್ರದಿಂದೀಚೆಗಿನ ಸಾವಿರಾರು ವರ್ಷಗಳ ಪ್ರಯೋಗ ಪರಂಪರೆಯ ಏಳು ಬೀಳು- ವೈವಿಧ್ಯ- ವ್ಯತ್ಯಾಸ, ಹಿನ್ನಡೆ ಮುನ್ನಡೆ, ಕಾಲ, ಭಾಷೆ, ಪದ್ಧತಿ, ಶಿಕ್ಷಣ, ಸಂಸ್ಕೃತಿ, ಪ್ರೇರಣೆ, ಪರಿಣಾಮ ಹೀಗೆ ಹತ್ತಾರು ಕೋನಗಳಿಂದ ವಿಮರ್ಶೆ ಮಾಡಲು ಸಾಧ್ಯವಾಗಿದೆ. ಇವುಗಳಲ್ಲಿ ಸಂಸ್ಕೃತ ಗ್ರಂಥಗಳೇ ಹೆಚ್ಚು. ಕೆಲವೊಂದಷ್ಟು ಕನ್ನಡ, ತಮಿಳು, ಮರಾಠೀ, ತೆಲುಗು ರಚನೆಯವೂ ಇವೆ. ಜೊತೆಗೆ ದಾಕ್ಷಿಣಾತ್ಯದ ಪ್ರಭಾವ ಪರಿಣಾಮಗಳೇ ಗ್ರಂಥಲೋಕದಲ್ಲಿ ಹೆಚ್ಚು; ಅದರಲ್ಲೂ ಕರ್ನಾಟಕದ ಕೊಡುಗೆ ಬಹಳ ಉನ್ನತಮಟ್ಟದ್ದು ಎನ್ನುವುದನ್ನೂ ಅರಿತಿದ್ದೇವೆ. ಭಾರತೀಯ ಜ್ಞಾನಪರಂಪರೆಗಳ ಅಧ್ಯಯನಕ್ಕೆ ನೂಪುರ ಭ್ರಮರಿಯ ಕರ್ತವ್ಯವಾಗಿ ನಮ್ಮ ಭವಿತವ್ಯದ ಪೀಳಿಗೆಗೆ ಪರಿಚಯಿಸಿ ಕೊಡುವ ಕಾಯಕವಾಗಿ, ಗ್ರಂಥಾಧ್ಯಯನದ ಆವಶ್ಯಕತೆ, ಶಾಸ್ತ್ರದ ಮಾದರಿಗಳ ಸ್ಮರಣೆ, ಪ್ರಕಟಣೆಯ ಆಸರೆ ಇತ್ಯಾದಿಗಳ ಬಗೆಗೆ ಕಳಕಳಿಯನ್ನು ಹೊತ್ತು ನಡೆದ ಋಷಿ ಋಣಸಂದಾಯದ ಕೆಲಸ. ಈ ಸರಸ್ವತೀಸೇವೆಯ ಮೂಲಕ ಭಾರತವನ್ನು ಕುಳಿತಲ್ಲಿಂದಲೇ ಕ್ರಮಿಸಲು ಸಾಧ್ಯವಾಗಿದೆ ಎನ್ನುವುದು ದೈವಾನುಗ್ರಹವೂ ಹೌದು ಹಾಗೆಯೇ ನಮ್ಮ ಹೆಮ್ಮೆಯೂ ಹೌದು. ಇದಕ್ಕೆ ಯಾವುದು ಆಸರೆ ಅಂತೀರಿ..? ಸ್ವತಃ ಈ ಭಾರತದ ಸನಾತನ ಸಂಪ್ರದಾಯ-ಪರಂಪರೆಯೇ ಆಗಿದೆ.

ಭರತನ ನಾಟ್ಯಶಾಸ್ತ್ರ ಹೇಳುವಂತೆ ಕಲಾಪ್ರಪಂಚದ ಮುಖ್ಯ ಸ್ವಭಾವಗಳನ್ನು ನಾಲ್ಕು ’ವೃತ್ತಿ’ಗಳ ರೂಪದಲ್ಲಿ ನಿವೇದಿಸಲಾಗಿದೆ. ಈ ಜಗತ್ತಿನ ಬೇರೆಬೇರೆ ದೇಶ, ಅಲ್ಲಿಯ ಜನರ ವೇಷ, ಭಾಷೆ, ಆಚಾರ, ಘಟನೆಗಳನ್ನು ಗಮನಿಸಿಕೊಂಡು ಕಲೆಯ ಮೂಲಕವಾಗಿ ಅವು ತೋರಿಕೊಳ್ಳುವಾಗ ಸುಲಭದಲ್ಲಿ ಅರಿತು ಅಳವಡಿಸಿಕೊಳ್ಳುವಂತೆ ಸಂಕ್ಷಿಪ್ತವಾಗಿ ಮಾಡಲಾದ ವಿಭಾಗೀಕರಣವೇ ಈ ವೃತ್ತಿಗಳು ಎಂದೂ ಹೇಳಬಹುದು. ಅವುಗಳೇ ಭಾರತೀ- ಮಾತಿನ ರೂಪದ್ದು; ಆರಭಟೀ- ಉದ್ಧತವಾದ ಅಂಗಚಲನೆ, ಬಿರುಸಿನ ರೂಪದ್ದು; ಸಾತ್ತ್ವತೀ- ಸಾತ್ತ್ವಿಕವಾದ ಅಭಿನಯಗಳಿಂದ ಒಡಗೂಡಿದ್ದು; ಕೈಶಿಕೀ- ಲಾಲಿತ್ಯ, ಸುಮಧುರವೂ, ಶೃಂಗಾರಮಯವೂ ಆದದ್ದು. ಇವೆಲ್ಲವನ್ನೂ ಅಳವಡಿಸಿಕೊಂಡಿರುವುದು ದಶರೂಪಕಗಳು ಎಂಬ ನಾಟ್ಯ ಅಂದರೆ ಸಾಂಪ್ರದಾಯಿಕ ರಂಗಭೂಮಿ.

ಇವುಗಳನ್ನು ಪ್ರಾತಿನಿಧಿಕವಾಗಿ ಎಲ್ಲ ಅಭಿಜಾತ ಕಲೆಗಳೂ ಅಳವಡಿಸಿಕೊಂಡಿವೆ. ಹಾಗೆಂದು ಒಂದೊಂದು ದೇಶ- ಕಾಲಗಳಲ್ಲಿ ಒಂದೊಂದು ಅಭಿಪ್ರಾಯ, ಆಸ್ವಾದ, ಕ್ರಮ, ರೀತಿ ನೀತಿಗಳು ಇರಬಹುದಲ್ಲವೇ? ವೈಯಕ್ತಿಕ ಸ್ವಾತಂತ್ರ್ಯ ಎಂಬ ವಲಯಕ್ಕೂ ಅವಕಾಶ ಬೇಡವೇ? ಎಷ್ಟಾದರೂ ‘ಲೋಕೋಭಿನ್ನರುಚಿಃ’ ತಾನೇ? ಚಿಂತೆ ಬೇಕಿಲ್ಲ. ಅದಕ್ಕೂ ನಮ್ಮ ಶಾಸ್ತ್ರಗಳು ಅವಕಾಶ ಕೊಟ್ಟಿವೆ. ಅದಕ್ಕಾಗಿಯೇ ಒಟ್ಟಾಗಿ ತತ್ತ್ವದ ರೂಪದಲ್ಲಿ ವೃತ್ತಿಯೆಂಬುದಾಗಿ ಹೇಳಿದ ಭರತನೇ ಜಗತ್ತಿನ ವೇಷ-ಭಾಷೆ-ಆಚಾರ-ಮನೋಭಾವನೆಗಳನ್ನು ಮತ್ತೆ ಪುನಾ ವಿಂಗಡಿಸಿ ಕಾಣಲು ಕೊಟ್ಟ ವಿಭಾಗ ಪ್ರವೃತ್ತಿಗಳು. ಅವೂ ನಾಲ್ಕು ಇವೆ ದಕ್ಷಿಣಕ್ಕೆ ದಾಕ್ಷಿಣಾತ್ಯ, ಪೂರ್ವಕ್ಕೆ ಔಡ್ರಮಾಗಧೀ, ಪಶ್ಚಿಮಕ್ಕೆ ಆವಂತೀ, ಉತ್ತರಕ್ಕೆ ಪಾಂಚಾಲೀ ಎಂಬುದಾಗಿ.

ಇದರಿಂದ ನಾಲ್ಕು ಪ್ರವೃತ್ತಿಗಳು ಆ ನಾಲ್ಕು ವೃತ್ತಿಗಳನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ಅಳವಡಿಸಿಕೊಂಡಿವೆ ಎಂಬುದಕ್ಕೆ ಸೂಚನೆಯೂ ದೊರೆಯುತ್ತದೆ. ಯಾವು ಯಾವುದರ ಅಭಿರುಚಿಗೆ ಹತ್ತಿರವಾಗಿವೆ ಎಂಬುದು ತಿಳಿಯುತ್ತದೆ. ಉದಾಹರಣೆಗೆ – ದಕ್ಷಿಣ ಭಾರತದವರಿಗೆ ಅಂದರೆ ದಾಕ್ಷಿಣಾತ್ಯರಿಗೆ ನೃತ್ತ-ಗೀತ-ವಾದ್ಯಗಳೂ, ಚತುರವಾದ, ಮಧುರವಾದ, ಲಲಿತವಾದ ಆಂಗಿಕ ಚಲನವಲನಗಳ ಅಭಿನಯವಿರುವ ಕೈಶಿಕೀ ವೃತ್ತಿ ಇಷ್ಟ ಎನ್ನುತ್ತಾನೆ ಮಹಾಮುನಿ ಭರತ.

ವೃತ್ತಿ ಮತ್ತು ಪ್ರವೃತ್ತಿ ಎಂಬ ಈ ಎರಡು ಶಾಖೆಗಳಲ್ಲಿ ಸ್ಥೂಲದಿಂದ ಸೂಕ್ಷ್ಮಕ್ಕೂ ಸೂಕ್ಷ್ಮದಿಂದ ಸ್ಥೂಲಕ್ಕೂ ನೋಡಬಹುದಾದ ಸಾಂಸ್ಕೃತಿಕ ದರ್ಶನವಿದೆ. ಮನುಷ್ಯನ ಭಾವ-ಬದುಕು ಹೇಗೆ ಏಕಕಾಲಕ್ಕೆ ವಿಶ್ವವ್ಯಾಪಕವೂ, ವೈಯಕ್ತಿಕವೂ ಆಗಬಲ್ಲುದು ಎಂಬುದನ್ನು ತಿಳಿಯಪಡಿಸುವ ಭಾರತ ದರ್ಶನ ಇದು. ವೈವಿಧ್ಯಮಯವಾದ ಕಲಾಪ್ರಪಂಚಕ್ಕೆ ವೃತ್ತಿ ಮತ್ತು ಪ್ರವೃತ್ತಿಗಳು ಮುನ್ನುಡಿಗಳಾಗಿವೆ. ಹೀಗೆ ಆಯಾ ದೇಶ-ಪ್ರದೇಶಗಳ ಮನೋಭಾವನೆಯನ್ನು ಪ್ರತಿಬಿಂಬಿಸುವ ಕಲೆಯ ಮೂಲಕ ಹಾಗೂ ಕಲೆಯ ಲಕ್ಷಣಗಳನ್ನು ಬರೆದು ಕಾಪಾಡಿದ ಕಲಾಗ್ರಂಥಗಳ ಮೂಲಕ ಅರಿಯುವ ಕಾಯಕವನ್ನು ನಾವು ಶಾಸ್ತ್ರರಂಗದ ಸಂಚಿಕೆಗಳಲ್ಲಿ ಈವರೆಗೆ ಮಾಡುತ್ತಾ ಬಂದಿದ್ದೇವೆ. ಇದು ನಮ್ಮ ಭಾಗ್ಯ ಮತ್ತು ಹೆಮ್ಮೆ ಕೂಡಾ.

ಸರಿ., ಈ ಪ್ರವೃತ್ತಿಗಳಲ್ಲಿ ಪ್ರಾಚೀನದ ಯಾವುದೆಲ್ಲ ದೇಶ- ಪ್ರದೇಶಗಳು ಭರತಖಂಡದ ಭಾಗವಾಗಿ ಇದ್ದವು? ಅವನ್ನು ತಿಳಿಯಬೇಕೆಂಬ ಬಯಕೆಯೇ? ಹಾಗಾದರೆ ನನ್ನ ಮಿತಿಯಲ್ಲಿ ಅರಿತುಕೊಂಡ ವಿವರವನು ಕೇಳಿ. ಎಲ್ಲ ರೀತಿಯ ಛಪ್ಪನ್ನಾರು ಎಂಬ ಖ್ಯಾತಿಯ ೫೬ ದೇಶಗಳು, ಮಹಾಜನಪದಗಳೂ, ಬುಡಕಟ್ಟುಗಳೂ ಈ ಪ್ರವೃತ್ತಿಗಳೊಳಗೆ ಸೇರಿದ್ದವು. ಉದಾಹರಣೆಗೆ – ಮಹೇಂದ್ರ, ಮಲಯ, ಸಹ್ಯಾ, ಮೇಕಲ, ಪಾಲಪಂಜರ ಈ ಪರ್ವತಗಳ ಒಳಗೆ ಇದ್ದ ದೇಶಗಳ ಭಾಗವೇ ದಕ್ಷಿಣಾಪಥ. ವಿಂಧ್ಯ ಮತ್ತು ದಕ್ಷಿಣ ಸಮುದ್ರಗಳ ನಡುವಿದ್ದ ಕರ್ನಾಟ, ಕೇರಲ, ದ್ರವಿಡ, ಆಂಧ್ರ, ಮಹಾರಾಷ್ಟ್ರ, ಕೃಷ್ಣಾ ಪಿನಾಕಿ ನದೀತೀರಗಳ ವೈಷ್ಣಾ ಪ್ರದೇಶ ಮೊದಲಾದ ಭಾಗಗಗಳಲ್ಲಿ ವಾಸಿಸುವವರು ದಾಕ್ಷಿಣಾತ್ಯರು ಎನ್ನಲಾಗುತ್ತಿತ್ತು. ಅದೇ ಇಂದಿನ ಕಾಲದ ಗಡಿವಿಭಜನೆಯ ರೇಖೆಗಳನ್ನು ಹೊಂದಿಸಿ ಯೋಚಿಸುವುದಾದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಕೆಲವು ಮಹಾರಾಷ್ಟ್ರದ ಪ್ರಾಂತ್ಯಗಳು ದಾಕ್ಷಿಣಾತ್ಯ ವಲಯಕ್ಕೆ ಹೊಂದುತ್ತವೆ.

ಪ್ರಾಚೀನ ಭಾರತದ ಆವಂತೀ ಅಂದರೆ ಉಜ್ಜೈನಿ ಆಸುಪಾಸಿನ ಪ್ರದೇಶಗಳಿಗೆ ಹೊಂದುವ ಪಶ್ಚಿಮ ಭಾರತದ ಪ್ರದೇಶಗಳು. ಇವುಗಳಲ್ಲಿ ಆವಂತಿಕ, ವೈದೇಶಿಕ, ಸೌರಾಷ್ಟ್ರ, ಮಾಲವ, ಸೈಂಧವ, ಸೌವೀರ, ಆನರ್ತ, ಆರ್ಬುದೇಯ, ದಶಾರ್ಣ, ತ್ರಿಪುರಾ ಮತ್ತು ಮೃತ್ತಿಕಾವತ ಮೊದಲಾದ ಹೆಸರುಗಳು ಕಂಡುಬರುತ್ತವೆ. ಇಂದಿಗೆ ಮಧ್ಯಪ್ರದೇಶದ ಕೆಲವು ಭಾಗಗಳು, ರಾಜಸ್ಥಾನ, ಗುಜರಾತ್ ಮೊದಲಾದ ವ್ಯಾಪ್ತಿಯನ್ನು ಸೂಚಿಸಬಹುದು. ಉಳಿದಂತೆ ಸಿಂಧುನದಿಯ ಪ್ರದೇಶಗಳು ನಮ್ಮಿಂದ ಕೈತಪ್ಪಿ ಪಾಕಿಸ್ತಾನಕ್ಕೆ ಸೇರಿಹೋಗಿವೆ.

ಇನ್ನು ಪ್ರಾಚೀನ ಭಾರತದಲ್ಲಿ ಪ್ರಾಚ್ಯ ಎನ್ನಲಾಗಿದೆಯೋ ಅವೆಲ್ಲ ಔಡ್ರಮಾಗಧೀ ಪ್ರವೃತ್ತಿಗೆ ಸೇರಿದ್ದು. ದಕ್ಷಿಣ ತಟಕ್ಕೆ ಉಡ್ರ ಮತ್ತು ಉತ್ತರಕ್ಕೆ ಮಗಧ ಎಂಬ ಪ್ರದೇಶಗಳ ನಡುವಿನ ವ್ಯಾಪ್ತಿಗೆ ಹೊಂದಿಕೊಂಡಂತೆ ಇರುವ ದೇಶಗಳನ್ನು ಔಡ್ರಮಾಗಧೀ ಅಥವಾ ಓಡ್ರಮಾಗಧೀ ಪ್ರವೃತ್ತಿಗೆ ಸಂಬಂಧಿಸಿದವು ಎಂದು ಹೇಳಲಾಗುತ್ತದೆ. ಪ್ರಾಚೀನದಲ್ಲಿ ಅಂಗ, ವಂಗ, ಕಲಿಂಗ, ವತ್ಸ, ಉಡ್ರ, ಮಗಧ, ಪೌಂಡ್ರ, ನೇಪಾಲಕ ಹಾಗೂ ಅದರ ಪರ್ವತದ ಕೆಳಗೆ ಮತ್ತು ಮೇಲೆ, ಪ್ಲವಂಗಮ, ಮಲದ, ಮಲ್ಲವರ್ತಕ, ಕಾಮರೂಪ, ಪ್ರಾಗ್‌ಜ್ಯೋತಿಷ, ಪುಲಿಂದ, ವೈದೇಹ, ತಾಮ್ರಲಿಪ್ತಕ, ಮತ್ತು ಯಾವ ಎಂಬ ದೇಶಗಳು ಈ ಪ್ರವೃತ್ತಿಗೆ ಸೇರುತ್ತಿತ್ತು. ಇಂದಿಗೆ ಓಡಿಶಾ, ಬಂಗಾಲ, ಛತ್ತೀಸಗಢ, ಬಿಹಾರ, ಝಾರ್ಖಂಡ್, ಅಸ್ಸಾಂ, ಮಣಿಪುರ, ತ್ರಿಪುರ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮುಂತಾದ ಈಶಾನ್ಯ ಭಾಗಗಳನ್ನು ಓಡ್ರಮಾಗಧಿಗೆ ಸೇರಿಸಬಹುದು ಎಂಬಂತಾಗಿದೆ. ಉಳಿದಂತೆ ನೇಪಾಳ, ಭೂತಾನ್, ಬರ್ಮಾ, ಮಯನ್ಮಾರನ್ನೂ ಸೇರಿದಂತೆ ಬಾಲಿ, ಕಾಂಬೋಡಿಯಾ, ಥೈಲ್ಯಾಂಡ್, ಮಲೇಶಿಯಾ ಇಂಡೋನೇಷಿಯಾ ದ್ವೀಪಗಳವರೆಗೆ ವಿಸ್ತರಿಸಿದ್ದ ಪ್ರದೇಶಗಳ್ಯಾವುವೂ ಇಂದಿಗೆ ನಮ್ಮದಲ್ಲ. ಹಾಗಿದ್ದೂ ಭಾರತೀಯವಾದ ಕಲೆ-ಪುರಾಣಗಳ ಆಚಣೆಗಳಿಂದ ಅವು ನಮ್ಮ ಭಾರತೀಯತೆಗೆ ಹತ್ತಿರವಾಗಿವೆ.

ಇನ್ನು ಭಾರತದ ಉತ್ತರದ ಭಾಗ. ಪ್ರಾಚೀನಭಾರತದಲ್ಲಿ ಪಾಂಚಾಲ, ಶೌರಸೇನ, ಕಾಶ್ಮೀರ, ಹಸ್ತಿನಾಪುರ, ಬಾಹ್ಲೀಕ, ಶಾಕಲ, ಮದ್ರಕ, ಉಶೀನರ, ಹಿಮಾಲಯದ ಮೇಲೆ ಮತ್ತು ಗಂಗಾ ನದಿಯ ಉತ್ತರದಿಕ್ಕಿನ ನಡುವೆ ಇದ್ದ ಜನಪದಗಳು ಪಾಂಚಾಲೀ ಪ್ರವೃತ್ತಿಗೆ ಸೇರಿದವು. ಇಂದಿಗೆ ಇವುಗಳ ಪೈಕಿ ಜಮ್ಮು- ಕಾಶ್ಮೀರದ ಕೆಲಭಾಗಗಳು, ಪಂಜಾಬ್, ಉತ್ತರಪ್ರದೇಶ, ಹರ್ಯಾಣ, ಉತ್ತರಾಖಂಡವನ್ನು ಗುರುತಿಸಬಹುದು. ಉಳಿದಂತೆ ಗಾಂಧಾರದ ವರೆಗಿನ ಅಂದರೆ ಇಂದಿನ ಉತ್ತರ ಪಾಕಿಸ್ಥಾನ, ಅಪಘಾನಿಸ್ತಾನದ ವರೆಗಿನ ಪ್ರದೇಶಗಳು ನಮ್ಮ ಆಡಳಿತ ವ್ಯಾಪ್ತಿಯಿಂದ ಕಳಚಿ ದೂರಹೋಗಿವೆ. ಅಂತೆಯೇ ಪಶ್ಚಿಮ ಮತ್ತು ಉತ್ತರಭಾರತದ ಪ್ರಾಂತ್ಯಗಳಲ್ಲಿ ಪ್ರಸಿದ್ಧವಾಗಿದ್ದ ತಕ್ಷಶಿಲೆ, ವಿಕ್ರಮಶಿಲಾ, ನಳಂದಾ, ವಲ್ಲಭಿ, ಶಾರದಾ, ತೆಲ್ಹಾರಾ, ಓದಂತಪುರಿ, ಸೋಮಪುರ ಎಂಬಿತ್ಯಾದಿ ಜ್ಞಾನಪ್ರಸರಣಕೆಂದೇ ಇದ್ದ ಪ್ರಾಚೀನ ವಿಶ್ವವಿದ್ಯಾನಿಲಯಗಳೆಲ್ಲ ದಾಳಿಗೆ ತುತ್ತಾಗಿ ಅಳಿದುಹೋಗಿವೆ. ಹೀಗೆಯೇ ಮತಾಂಧರ ಆಕ್ರಮಣಕ್ಕೆ ನಮ್ಮ ಅಪಾರ ಗ್ರಂಥಶ್ರೀಮಂತಿಕೆಗಳು ನಷ್ಟವಾಗಿ ಹೋಗಿರುವುದನ್ನು ಈಗಾಗಲೇ ನಾವು ಶಾಸ್ತ್ರರಂಗದ ಸಂಚಿಕೆಗಳಲ್ಲಿ ವಿವೇಚಿಸಿದ್ದೇವೆ. ಹೀಗಿದ್ದೂ ಆಯಾ ಪ್ರಾಂತ್ಯಗಳಲ್ಲಿ ಇಂದಿಗೂ ಉಳಿದುಬಂದ ಕಲೆಗಳಲ್ಲಿ ಈ ನಾಟ್ಯಶಾಸ್ತ್ರದ ಪರಂಪರೆಗಳ ಛಾಯೆಯನ್ನು ಗುರುತಿಸಬಹುದು. ಅಬ್ಬಾ… ಬಗೆದಷ್ಟೂ ಮುಗಿಯುವುದಿಲ್ಲ ಭಾರತ.

ಒಟ್ಟಿನಲ್ಲಿ ನಾಟ್ಯಶಾಸ್ತ್ರದ ವೃತ್ತಿ ಪ್ರವೃತ್ತಿಗಳನ್ನು ಅಧ್ಯಯನ ನಡೆಸುವುದೆಂದರೆ ಇಡಿಯ ಭಾರತವನ್ನೇ ಸುತ್ತಿಬಂದಂತೆ; ಅವಿಚ್ಛಿನ್ನ ಭಾರತದ ಕಾಲವನ್ನು ನೋಡಿಬಂದಂತೆಯೇ ಸರಿ. ಅದರಲ್ಲೂ ಸುಮಾರು ಹತ್ತನೇ ಶತಮಾನದಿಂದ ೨೦ನೇ ಶತಮಾನದ ವರೆಗೂ ಕಂಡುಬಂದ ಬಹುತೇಕ ಎಲ್ಲ ನೃತ್ಯ-ನಾಟ್ಯ-ಗೀತ-ವಾದ್ಯ-ರಸ-ತಾಲ ಶಾಸ್ತ್ರಗ್ರಂಥಗಳನ್ನೂ ಅವಲೋಕಿಸಿದ್ದೇವೆ. ಹೀಗಿದ್ದೂ ೧೦ ನೇಶತಮಾನದ ಮೊದಲಿಗೆ ಬರೆದ ಇನ್ನೂ ಹಲವು ಅಂದರೆ  ನಾಟ್ಯಶಾಸ್ತ್ರ, ಬೃಹದ್ದೇಶೀ, ಕೋಹಲ ಮತ ಮೊದಲಾಗಿ ಅಂದಾಜು ೨೦ಕ್ಕೂ ಅಧಿಕ ಮುಖ್ಯ ಗ್ರಂಥ ಮತ್ತು ವ್ಯಾಖ್ಯಾನಗಳನ್ನು ಬಳಸಿ ಉಳಿಸಿದ ರೀತಿಯನ್ನು ಸಮಗ್ರವಾಗಿ ಮತ್ತು ತೌಲನಿಕ ದೃಷ್ಟಿಯ ಸಹಿತ ಸಂಚಿಕೆಗಳು ಹೊಂದಿವೆ. ಆ ಪೈಕಿ ಶಾಸ್ತ್ರರಂಗದ ಪರಿಚಯಕ್ಕೆ ಅನುಕೂಲವಾಗುವಂತೆ ಅಧ್ಯಯನಕ್ಕೆ ದೊರಕಿದ ಗ್ರಂಥಗಳು ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಓಡಿಶಾ, ಮತ್ತು ಕೆಲಮಟ್ಟಿಗೆ ಬಂಗಾಲ, ಕಾಶ್ಮೀರ, ಮತ್ತು ಉತ್ತರಪ್ರದೇಶಕ್ಕೆ ಸಲ್ಲುವವು ಮಾತ್ರ. ಅವುಗಳಲ್ಲೂ ಬಹಳಷ್ಟನ್ನು ಉಳಿಸಿಕೊಳ್ಳಹೊರಟರೆ ಈಗಾಗಲೇ ಅಳಿವಿನಂಚಿನಲ್ಲಿರುವ ಕೆಲವು ಗ್ರಂಥರಾಶಿಗಳು ಉಳಿದಾವು. ಇಲ್ಲವಾದರೆ ಮುಂದೊಮ್ಮೆ ಅವನ್ನೂ ನಷ್ಟವಾದ ಗ್ರಂಥಗಳ ಸಾಲಿಗೇ ಸೇರಿಸಬೇಕಾದೀತು.

ಶೋಭಕೃತ್ ಸಂವತ್ಸರದ ನವರಾತ್ರ ಪರ್ವದಿಂದ ಮೊದಲ್ಗೊಂಡು ಅಂದರೆ ೨೦೨೩ರ ಅಕ್ಟೋಬರ್‌ನಿಂದ ಸುಮಾರು ಒಂದೂವರೆ ವರುಷದಷ್ಟು ದೀರ್ಘ ಕಾಲದಲ್ಲಿ ಹಲವು ಸವಾಲುಗಳ ನಡುವೆಯೂ ಪ್ರತಿ ಭಾನುವಾರವೂ ಮುಂಜಾನೆ ಸೂರ್ಯೋದಯದ ಹೊತ್ತಿಗೆ ವ್ರತದಂತೆ ನಮ್ಮ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡುತ್ತಲೇ ಬಂದಿದ್ದೇವೆ. ಅಂತೆಯೇ ಇದರ ಲೇಖನರೂಪವೂ ನೂಪುರ ಭ್ರಮರಿ ಡಾಟ್ ಕಾಮ್‌ನಲ್ಲಿ ಸತತವಾಗಿ ಪ್ರಕಟವಾಗುತ್ತಲೂ ಬಂದಿದೆ. ಅವು ಐಕೆ‌ಎಸ್ ವಿಕಿಪೀಡಿಯಾದಲ್ಲೂ ಪ್ರಕಟವಾಗಿವೆ.

ಇದಕ್ಕೆ ನಿಮ್ಮ ತುಂಬು ಹಾರೈಕೆಗಳು, ಆಶೀರ್ವಾದಗಳು ಒತ್ತಾಸೆಯಾಗಿ ನಮಗೆ ಬಲ ನೀಡಿವೆ. ಇಂಥ ಶಾಸ್ತ್ರಶೋಧದ ವ್ರತ ಈವರೆಗೂ ಭಾರತದೇಶದ ಅಂತರ್ಜಾಲವಷ್ಟೇ ಅಲ್ಲ ಯಾವುದೇ ವಿಚಾರಸಂಕಿರಣ, ಕಾರ್ಯಾಗಾರಗಳಲ್ಲಿ ಹೀಗೆ ಸತತವಾಗಿ ಆದ ಉಲ್ಲೇಖವಿಲ್ಲ. ಈವರೆಗೂ ಇಂಥ ಶಾಸ್ತ್ರಪರಿಚಯ ಆಗಿರಲಿಲ್ಲ; ಇದು ಸಮಕಾಲೀನರಿಗಷ್ಟೇ ಅಲ್ಲ; ಎಷ್ಟೋ ತಲೆಮಾರಿಗೂ ಪ್ರೇರಣೆ ನೀಡುವ ಪಥಪ್ರದರ್ಶಕವಾದ ಹೆಜ್ಜೆ. ಇದು ವಿಸ್ಮಯದ ಮತ್ತು ಸ್ತುತ್ಯರ್ಹ ಕಾರ್ಯ, ಇದಕ್ಕಾಗಿ ಆಭಾರಿಗಳಾಗಿದ್ದೇವೆ; ನಿಮ್ಮೊಂದಿಗೆ ನಾವಿದ್ದೇವೆ, ಇಂಥ ಗ್ರಂಥ, ಸಂಸ್ಕೃತಿ, ರಾಜಪರಂಪರೆ, ಪಂಡಿತ ಪಾಮರರ ರೀತಿನೀತಿ ವಿದ್ಯೆಗಳನ್ನು ಅರಿಯುವುದೇ ಸುಯೋಗ. ಇದು ಇಂದಿನ ‘ವೈರಲ್’ ಆಗುವ ಪಡಿಪಾಟದ್ದಲ್ಲ; ಆದರೆ ‘ವೈಟಲ್’ ಅಂದರೆ ಪ್ರಮುಖವಾದದ್ದು; ಭಾರತದ ವಿದ್ಯೆಯ ಕಲಿಕೆ ಹೇಗಿರಬೇಕು ಎಂದರೆ ಹೀಗಿರಬೇಕು; ಇದು ಭಾರತದ ಆತ್ಮವನ್ನು ದರ್ಶಿಸುವ ಜಾಗೃತಿಯ ಪ್ರಯತ್ನ, ಕಲೆಯನ್ನೂ ಕಲೆಯ ಶಾಸ್ತ್ರವನ್ನೂ ಹೊಗುವವರು ಮಾಡಿಕೊಳ್ಳಬೇಕೆನಿಸುವ ಅನುಸಂಧಾನ – ಎಂಬಿತ್ಯಾದಿ ಮೆಚ್ಚುಗೆ, ಹಾರೈಕೆ, ಆಶೀರ್ವಾದದ ನುಡಿಗಳಿಂದ ನಮ್ಮ ಬೆನ್ನು ತಟ್ಟಿದ್ದೀರಿ. ನಮ್ಮೊಂದಿಗೆ ವೀಕ್ಷಕ ಸಹೃದಯರಾಗಿ ಕೇಳುಗರಾಗಿ ನಿಮ್ಮ ಈ ಪ್ರಯಾಣಕ್ಕೆ ನಾವೆಲ್ಲರೂ ಅಂದರೆ ನೂಪುರ ಭ್ರಮರಿ ಸಮಸ್ತ ಬಳಗ ಸದಾ ಕೃತಜ್ಞರು.

ಹಾಂ.., ಈ ಸರಣಿ ಇಲ್ಲಿಗೆ ಮುಗಿಯಿತೇ ಎಂದು ಅಂದುಕೊಳ್ಳಬೇಡಿ. ಇಂಥ ಮತ್ತೊಂದಷ್ಟು ವಿನೂತನವಾದ ಮತ್ತು ಅಷ್ಟೇ ಸನಾತನವೂ ಆದ ಸರಣಿಗಳನ್ನು ಯೋಜಿಸಿ ಮತ್ತೊಮ್ಮೆ ನಿಮ್ಮನ್ನು ನಾವು ಸಂಧಿಸುತ್ತೇವೆ. ಈಗಾಗಲೇ ಅದಕ್ಕೆ ತಯಾರಿಯೂ ನಡೆದಿದೆ. ಇವೆಲ್ಲವನ್ನೂ ಯಾವುದೇ ತಡೆಯಿಲ್ಲದೆ ನೀವು ಕಾಣಬೇಕೇ? – ಅದಕ್ಕಾಗಿ ನಮ್ಮ ಯೂಟ್ಯೂಬ್ ಚಾನಲ್ ನೂಪುರ ಭ್ರಮರಿಗೆ ಸಬ್ಸ್ಕ್ರೈಬ್ ಮಾಡಿ. ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಾಕಲು ಮರೆಯದಿರಿ. ಇಂಥ ಅನೇಕ ಗ್ರಂಥಗಳ ಬಗೆಗೆ ವಿವರವಾದ ಓದು, ಅಧ್ಯಯನ, ತಿಳಿವಳಿಕೆ ಬೇಕೆಂದವರು ನಮ್ಮ ಶಾಸ್ತ್ರರಂಗ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳಿ. ಹಾಗೂ ನೂಪುರ ಭ್ರಮರಿಯ ವಿವಿಧ ಶಾಸ್ತ್ರಶೋಧ ಪುಸ್ತಕಗಳನ್ನು ಓದಲು ಮರೆಯದಿರಿ. ನೂಪುರಭ್ರಮರಿಯ ಸರ್ವ ಸದಸ್ಯರ ಪರವಾಗಿ, ಅದರಲ್ಲೂ ನನ್ನೊಂದಿಗೆ ಸಂಚಿಕೆಗಳನ್ನು ನಡೆಸಿಕೊಟ್ಟ ಸಂಶೋಧನ ಸಂಗಾತಿಗಳಾದ ಡಾ. ದ್ವರಿತಾ ವಿಶ್ವನಾಥ, ಡಾ. ಶಾಲಿನಿ ವಿಠಲ್, ರೋಹಿಣೀ ಮಂಜುನಾಥ್ ಇವರೆಲ್ಲರ ವತಿಯಿಂದ, ಹಾಗೂ ನಮಗೆಲ್ಲರಿಗೂ ಪೋಷಣೆ ನೀಡುತ್ತಿರುವ ದೆಹಲಿಯ ಐಕೆ ಎಸ್ ಡಿವಿಷನ್‌ನ ಸರ್ವ ಅಧಿಕಾರಿಗಳ ಪರವಾಗಿ ನಾನು ನಿಮ್ಮ ಡಾ. ಮನೋರಮಾ ಮಾಡುವ ಅಭಿವಾದನೆಗಳು. ನಮಸ್ಕಾರ.

 

English Version/Translation of this episode

Taking a bird’s-eye view of such a wealth of ancient treatises, we have now progressed to the 67th episode.

Beginning with the famous Dākṣiṇātya style, one of the four major traditions outlined by Sage Bharata, we journeyed eastward to explore the Odramagadhi style.

From there, we examined the northern Panchali style, proceeded westward to the Avanti tradition, and finally returned to our starting point in southern India.

In this way, we have introduced numerous treatises composed over a thousand years, from the 10th century onward, spanning across the four corners of Bharatavarsha.

These include vast artistic disciplines like music, comprising gīta (song), vādya (instrumental music), tāla (rhythm), and prabandha compositions; dance; theatre; folk dances; components of nrtta (pure dance); abhinaya (expressive acting); vocal techniques; rasa theory; hero-heroine classifications; poetry; and artistic assembly traditions.

Alongside these, we have also delved into the historical context, personal details of prominent composers, and other dimensions.

In total, we have covered over 85 major treatises, discussing the ideas of more than 200 scholars, and referenced 85 auxiliary or related works, amounting to a comprehensive analysis of 170 texts.

Based on regional traditions:

Southern India (Dākṣiṇātya tradition): 36 main texts and 54 related texts.

Eastern India (Odramagadhi tradition): 14 main texts and 6 related texts.

Northern India (Panchali tradition): 4 main texts and 2 related texts.

Western India (Avanti tradition): 8 main texts and 23 related texts.

Through meticulous study, critical analysis, and official documentation, we have presented these findings in Śāstraranga.

Including the introduction and conclusion, a total of 67 episodes have been designed.

All this is not the work of just a day or two. The time and effort we have dedicated to this are extensive and significant.

This involved reading manuscripts, reviewing published treatises, conducting comparative studies, and going through numerous essays and works by senior scholars.

For this, more than 300 treatises and countless articles were reviewed.

The rise and fall, diversity, variations, setbacks, progress, time, language, traditions, education, culture, inspirations, and impacts of the thousand-year-old experimentation tradition from the Nāṭyaśāstra onwards have been analyzed from multiple perspectives.

Among these, most are Sanskrit texts, along with a few Kannada, Tamil, Marathi, and Telugu compositions.

It became evident that southern influences dominate the literary domain, especially the significant contributions from Karnataka.

As part of Noopura Bhramari’s responsibility towards Indian knowledge traditions, this initiative introduced treatise studies to future generations, emphasizing the importance of śāstras, their models, and the need for publications.

This work, inspired by the idea of repaying the debt to ancient sages, aims to familiarize and connect future generations with these treasures.

Through this service to Goddess Saraswati, it is indeed divine grace, as well as our pride, that we could traverse India while seated in one place.

What has supported this endeavor, you ask? It is India’s eternal tradition itself.

According to Bharata’s Nāṭyaśāstra, the primary characteristics of the artistic world have been categorized into four “vṛttis” or styles.

These divisions are based on observing the attire, language, customs, and events of different regions and their people, simplifying their portrayal through art.

These vṛttis are:

Bhāratī: Characterized by speech and dialogue.

Ārabhāṭī: Representing vigorous and dynamic physical movements.

Sāttvatī: Highlighted by sattvic (pure and emotional) expressions.

Kaisikī: Graceful, melodious, and imbued with aesthetic and romantic elements.

These styles are integrated into the ten dramatic forms (daśarūpakas) of traditional theater.

All classical art forms have incorporated these styles representatively.

However, each region or era might have its own opinions, preferences, methods, and approaches.

Doesn’t personal freedom also need room for expression? After all, “Lokobhinna Ruchih” (people’s tastes differ), don’t they?

No need to worry, as our śāstras have provided space for that as well.

Sage Bharata, while categorizing the world’s attire, language, customs, and emotions, introduced the divisions of “pravṛttis.”

These are four in number, corresponding to the four directions:

Dākṣiṇātya for the South.

Odramagadhī for the East.

Avanti for the West.

Panchālī for the North.

This categorization indicates how the four pravṛttis have integrated the four vṛttis in varying proportions.

It also reveals which style aligns closely with specific regional preferences.

For instance, Sage Bharata mentions that the people of South India, i.e., the Dākṣiṇātyas, prefer Kaisikī Vṛtti, characterized by nrtta (pure dance), melodious singing, instrumental music, graceful expressions, and refined, elegant movements.

The concepts of Vṛtti (style) and Pravṛtti (regional influence) reveal a cultural perspective that ranges from the macro to the micro and vice versa.

They demonstrate how human emotions and life can simultaneously be universal and personal, showcasing the Indian worldview.

Vṛtti and Pravṛtti serve as prefaces to the diverse world of arts.

Through art that reflects the emotions of various regions and through the preservation of artistic treatises, we have carried out this task in the Śāstraranga issues so far. This is both our fortune and pride.

Now, are you curious to know which ancient regions were part of Bharata’s Pravṛtti system?

Listen to the details I have gathered within my limitations.

A total of fifty-six countries (Chhappanna Khandas), major Mahājanapadas, and tribes were part of these Pravṛttis.

For instance, regions within the mountain ranges of Mahendra, Malaya, Sahya, Mekala, and Palapanchara belonged to the southern path (Dakṣiṇāpatha).

Those living in areas between the Vindhya mountains and the southern seas, such as Karnataka, Kerala, Dravida, Andhra, Maharashtra, and the banks of rivers like Krishna and Pinaki, were referred to as the Dākṣiṇātyas.

In today’s terms, states like Karnataka, Kerala, Tamil Nadu, Andhra Pradesh, Telangana, and parts of Maharashtra belong to the Dākṣiṇātya region.

Ancient India’s Avantī region corresponds to western India, around Ujjain.

The names Avantika, Vaideśika, Saurāṣṭra, Mālava, Saindhava, Sauvīra, Ānarta, Arbuda, Daśārṇa, Tripurā, and Mṛttikāvata are associated with these areas.

Today, these regions would include parts of Madhya Pradesh, Rajasthan, and Gujarat.

Unfortunately, areas along the Sindhu river now lie within Pakistan.

In ancient India, regions classified as Prāchya belonged to the Odramagadhī Pravṛtti.

This encompasses areas between Uḍra in the south and Magadha in the north.

In the ancient past, regions such as Aṅga, Vaṅga, Kaliṅga, Vatsa, Uḍra, Magadha, Pauṇḍra, Nepal (and areas beneath and atop its mountains), Plavaṅgama, Malada, Mallavartaka, Kāmarūpa, Prāgjyotiṣa, Pulinda, Vaideha, Tāmralipta, and Yava were part of this Pravṛtti.

Today, this would include Odisha, Bengal, Chhattisgarh, Bihar, Jharkhand, Assam, Manipur, Tripura, Mizoram, Sikkim, Nagaland, and Arunachal Pradesh, along with the northeastern regions of India.

Additionally, Nepal, Bhutan, Burma (Myanmar), and parts of Bali, Cambodia, Thailand, Malaysia, and Indonesia were once influenced by Indian culture, though they are no longer part of India.

Even today, their arts, myths, and rituals maintain a connection to Indian heritage.

Northern India in ancient times was part of the Pāñcālī Pravṛtti.

Regions like Pāñcāla, Śaurasena, Kashmir, Hastināpura, Bāhlīka, Śākala, Madraka, Uśīnara, and areas between the Himalayas and the northern banks of the Ganga were part of this Pravṛtti.

Today, this corresponds to parts of Jammu and Kashmir, Punjab, Uttar Pradesh, Haryana, and Uttarakhand.

Regions like Gandhāra, which today lie in northern Pakistan and Afghanistan, have slipped away from Indian influence.

Western and northern India were also home to renowned ancient universities like Takṣaśilā, Vikramaśilā, Nālandā, Vallabhī, Śāradā, Telhāra, Odantapuri, and Somapura.

These centers of knowledge were destroyed during invasions, and with them, an enormous wealth of manuscripts was lost.

Despite these losses, traces of Nāṭyaśāstra’s traditions can still be found in the art forms that survive in these regions today.

Studying the vṛtti-pravṛttis of the Nāṭyaśāstra is equivalent to traveling across India and witnessing its uninterrupted timeline. Moreover, it feels as if we have explored the essence of the entire nation. Between the 10th and 20th centuries, we have reviewed nearly all treatises on dance, drama, music, rhythm, and aesthetic theory. Despite this, we mainly focused on about 20 key foundational texts, such as the Nāṭyaśāstra, Bṛhaddēśī, and Kohala Mata. These works, composed before the 10th century, have been studied and preserved with a holistic and comparative approach.

The texts primarily accessible to us for Śāstra research belonged to regions such as Karnataka, Tamil Nadu, Kerala, Maharashtra, Rajasthan, Gujarat, Madhya Pradesh, Odisha, and to some extent, Bengal, Kashmir, and Uttar Pradesh. Among these, many texts are already on the verge of extinction. Though some have been preserved, if efforts are not made, they may eventually join the list of lost manuscripts.

Starting with the Navarātri festival of the Śōbhakṛt year (October 2023), we have continued this project for about one and a half years. Despite various challenges, we have diligently uploaded videos on YouTube every Sunday at sunrise, treating it as a sacred ritual. At the same time, articles have been published regularly on nūpura bhramari.com and also featured on the IKS Wikipedia.

Your wholehearted support, blessings, and encouragement have strengthened us throughout this journey. A rigorous project of this nature, centered on Śāstra research, has never been attempted before—not in India’s digital realm, nor in any intellectual forums, seminars, or workshops. Until now, such an introduction to the Śāstras has not done. This effort is not only relevant for contemporary audiences but will also inspire many generations to come.

This is an extraordinary and commendable endeavor. We are deeply grateful to be involved in understanding India’s treasure trove of manuscripts, cultural traditions, royal legacies, and the lives and practices of both scholars and common people.

This initiative is not something aimed at becoming “viral”; rather, it is “vital.” It reflects the essence of how Indian knowledge systems and artistic traditions should be studied. It is an effort to awaken India’s soul, showcasing its heritage while building a bridge between art and the Śāstra that guides it.

Your words of encouragement, blessings, and admiration have strengthened our resolve and patted us on the back. As viewers, listeners, and supporters, your companionship in this journey has been invaluable. We, the Noopura Bhṛmari team, remain forever grateful for your unwavering support in this endeavor.

Hmm…, don’t think this series ends here. We are already planning more such innovative and equally eternal series, and we will meet you again soon. Preparations for that have already begun.

Do you want to watch all of this without any interruptions? – Then subscribe to our YouTube channel, Noopura Bhramari. Don’t forget to leave your invaluable feedback in the comment box.

For those who wish to explore, study, and gain detailed insights into such numerous treatises, enroll in our Śāstraranga Certificate Courses. Also, don’t forget to read the various Śāstra research books by Noopura Bhramari.

On behalf of all the members of Noopura Bhramari, especially my research companions who collaborated with me on these episodes – Dr. Dwarita Vishwanath, Dr. Shalini Vithal, and Rohini Manjunath – and on behalf of all the officials of the IKS Division in Delhi who have supported us, I, your Dr. Manorama, extend my salutations to you all. Namaskara.”

 

 

 

Leave a Reply

*

code