ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ (Video series)-ಸಂಚಿಕೆ 55 : ಉಮಾಪತಿಯ ಔಮಾಪತ

Posted On: Sunday, October 27th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ

ಸಂಚಿಕೆ 55 : ಉಮಾಪತಿಯ ಔಮಾಪತ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 5 : Dākśinātya (Southern Region of Ancient Bhārata)

Episode 55 : Umapathi’s Aumāpatha

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಉಮಾಪತಿ ಎಂಬಾತನಿಂದ ರಚಿಸಲ್ಪಟ್ಟದ್ದು ಔಮಾಪತ. ಪರಶಿವನು ಪಾರ್ವತಿದೇವಿಗೆ ನೃತ್ಯ-ಗೀತಗಳ ಬಗ್ಗೆ ಹೇಳಿದನೆನ್ನಲಾದ ಲಕ್ಷಣಗಳನ್ನುಳ್ಳ ಗ್ರಂಥ ಎಂಬ ಅಭಿಧಾನವುಳ್ಳದ್ದು ಔಮಾಪತ. ಇದರ ಕಾಲವನ್ನು ೧೨೫೦-೧೪೫೦ನೇ ಇಸವಿ ಎಂದು ಅಂದಾಜಿಸಬಹುದು.

ನಂದಿಯ ಹೆಸರಿನಲ್ಲಿಯೂ ಔಮಾಪತವೆಂಬ ಗ್ರಂಥವಿದೆ. ಆದರೆ ಅದು ಇದುವೇ ಆಗಿದ್ದಂತಿಲ್ಲ. ಹಾಗೆಂದೇ ಔಮಾಪತವೆಂಬ ಹೆಸರಿನ ಮತ್ತೊಂದು ಗ್ರಂಥ ನಷ್ಟವಾಗಿದ್ದಿರಬೇಕು ಎನಿಸುತ್ತದೆ. ಈಗ ಲಭ್ಯವಿರುವ ಔಮಾಪತವನ್ನು ತಂಜಾವೂರಿನ ರಾಜ ರಘುನಾಥ ನಾಯಕ ಮತ್ತು ಕವಿ ಗೋವಿಂದದೀಕ್ಷಿತರು ‘ಉಮಾಪತೇರಾಧುನಿಕಸ್ಯ ತಂತ್ರಂ ವಿಲೋಕ್ಯ ನಂದೀಶಮತಾನುಸಾರಿ ’ ಎಂದಿದ್ದಾರೆ. ವಿಚಿತ್ರವೆಂದರೆ ಈ ಔಮಾಪತದ ಲಕ್ಷಣಕ್ರಮ ನಂದಿಯ ಭರತಾರ್ಣವ ಗ್ರಂಥದ ಮಾದರಿಯನ್ನು ಕೆಲವೆಡೆ ಹೋಲುತ್ತದೆ.

ಔಮಾಪತ – ವೈಶಿಷ್ಟ್ಯ, ಲಕ್ಷಣ ಕ್ರಮ

ಔಮಾಪತ ಬಹಳ ಸಣ್ಣ ಗ್ರಂಥ. ಹೆಚ್ಚಿನ ವಿವರಣೆಗಳಿಲ್ಲ. ರಾಗ, ದೇಶೀತಾಳ, ವಾದ್ಯ, ಧ್ರುವಾ, ನೃತ್ಯ, ದೇಶೀ ಗೀತ ಮತ್ತು ತಾಲ ಪ್ರಬಂಧಗಳ ಎಲ್ಲ ಲಕ್ಷಣಗಳನ್ನೂ ಸೂಕ್ಷ್ಮವಾಗಿ ವ್ಯವಹರಿಸಿದೆ. ಹಾಗಿದ್ದೂ ೩೮ ಅಧ್ಯಾಯಗಳಾಗಿ ಔಮಾಪತವನ್ನು ರಚಿಸಲಾಗಿದೆ. ಗ್ರಂಥವು ಶಿವಸ್ತುತಿಯಿಂದ ಆರಂಭಗೊಳ್ಳುತ್ತದೆ ಮತ್ತು ನಾದಜ್ಯೋತಿರ್‌ಬ್ರಹ್ಮ ಎಂಬುದಾಗಿ ಸಹಸ್ರಾರ ಚಕ್ರದ ಸಮಾಧಿಸ್ಥಿತಿಯ ಉದ್ದೇಶವನ್ನು ಹೇಳಿ ಕೊನೆಗೊಳ್ಳುತ್ತದೆ. ಈಶ್ವರನು ಹೇಳಿದ ಎಂಬಂತೆಯೇ ಶ್ಲೋಕಗಳನ್ನು ರಚಿಸಲಾಗಿದೆ.

ನಂದಿಕೇಶ್ವರನ ಗ್ರಂಥಗಳಲ್ಲೊಂದಾದ ಅಭಿನಯದರ್ಪಣವನ್ನೂ ಹೊಂದಿಕೊಂಡಂತೆ ಭರತಚಾತ್ತಿರಂ, ಪಂಚಮರಬು, ಸದಾಶಿವಭರತ ಮೊದಲಾದ ಇನ್ನೂ ಅನೇಕ ಗ್ರಂಥಗಳಲ್ಲಿ ಶಿವ-ಪಾರ್ವತಿ ಮೊದಲಾದ ಪುರಾಣಪರಿಪಾಠವನ್ನು ಔಮಾಪತದಲ್ಲೂ ಗುರುತಿಸಬಹುದು. ಜೊತೆಗೆ ಎಂಟು ವಿಧವಾದ ನರ್ತನಗಳನ್ನು ತಾಂಡವ ಮತ್ತು ಲಾಸ್ಯಗಳ ವಿಧಗಳಾಗಿ ವರ್ಗೀಕರಿಸಲಾಗಿದೆ. ಚಿತ್ರ-ವಿಚಿತ್ರ-ಸ್ಥಾನ-ವಿಮುಖ-ಏಕಪಾದಗಳೆಂಬ ಐದು ಭ್ರಮರಿಗಳ ಹೆಸರು ಸೂಚಿಸಿದೆ. ಕುಂಡಲಿನೃತ್ಯಕ್ಕೆ ಅಳವಡುವಂಥ ಕೆಲವೊಂದಷ್ಟು ಶಬ್ದಪ್ರಬಂಧಗಳೆಂಬ ರಚನೆಗಳನ್ನೂ ಸೂಕ್ಷ್ಮವಾಗಿ ಚರ್ಚಿಸಿದೆ ಈ ಗ್ರಂಥ.

ಔಮಾಪತವು ಉಳಿದ ಗ್ರಂಥಗಳಂತೆಯೇ ಅಂಗೋಪಾಂಗ ಅಭಿನಯ, ದೃಷ್ಟಿಭೇದ, ರಸ-ಭಾವಗಳ ಪಟ್ಟಿಯನು ಮಾಡಿದೆ. ಆದರೆ ಉಳಿದ ಎಷ್ಟೋ ಗ್ರಂಥಗಳ ಪರಿಭಾಷೆಗಳಿಂದ ಭಿನ್ನವಾಗಿ ಲಕ್ಷಣಗಳನ್ನು ಬರೆಯುತ್ತದೆ. ಉದಾಹರಣೆಗೆ – ಗತಿಸಹಿತವಾದ ೧೭ ಬಗೆಯ ಪಾದಭಂಗಿಯ ಭೇದಗಳು, ಸ್ಥಿತಿಶೀಲ ಭಂಗಿಯನ್ನು ಪ್ರತಿಪಾದಿಸುವ ೧೭ ಬಗೆಯ ಸ್ಥಾನ/ಪಾದಭೇದಗಳು, ಕೋಮಲ, ಕೋಪ, ವಿಷಣ್ಣ, ನಾಚಿಕೆ ಹೀಗೆ ಅನೇಕ ಭಾವಗಳನ್ನಾಶ್ರಯಿಸಿ ೨೮ ಶಿರೋಭೇದಗಳು, ೩೮ ಭಾವಾಧರಿತವಾದ ದೃಷ್ಟಿಭೇದಗಳು, ೧೭ ಸಂಚರ ದೃಷ್ಟಿಭೇದಗಳು, ೮ ಪ್ರಮಾಣದೃಷ್ಟಿಭೇದಗಳು. ಒಟ್ಟಿನಲ್ಲಿ ಲಕ್ಷಣಗಳ ಕ್ರಮವನ್ನು ಆಧಿಭೌತಿಕ, ಆಧಿದೈವಿಕ, ಅಧ್ಯಾತ್ಮದ ಆಯಾಮಗಳು ದೊರೆಯುತ್ತದೆ.

ಸಮಾಪನ

ಎಷ್ಟೋ ಕಡೆ ಅಸ್ಪಷ್ಟ ಮತ್ತು ಭಿನ್ನವೆನಿಸುವ ಲಕ್ಷಣಗಳಿದ್ದರೂ ನಾಟ್ಯಶಾಸ್ತ್ರದ ಲಕ್ಷಣಗಳಿಂದ ಇವು ಹೊರತಾದುದಲ್ಲ. ಈ ಕುರಿತಾದ ಹೆಚ್ಚಿನ ವಿವರಗಳಿಗೆ ಲೇಖಿಕೆಯ ಸಂಶೋಧನ ಗ್ರಂಥ ಯಕ್ಷಮಾರ್ಗಮುಕುರವನ್ನು ಪರಿಶೀಲಿಸಬಹುದು.[1]

ಪುಣೆ ಮತ್ತು ಕಲ್ಲಿಕೋಟೆಯಲ್ಲಿ ದೊರೆತ ಈ ಗ್ರಂಥ ಹಸ್ತಪ್ರತಿಗಳನ್ನು ಸಂಪಾದಿಸಿರುವ ವಿದ್ವಾನ್ ವಾಸುದೇವ ಶಾಸ್ತ್ರಿಗಳು ಅದರ ಭಾವಾರ್ಥವನ್ನು ಅರಿತು ವಿವರಣೆ ನೀಡಲು ಪ್ರವೇಶಿಕೆಯಲ್ಲಿ ಪ್ರಯತ್ನಿಸಿದ್ದಾರೆ. ೧೯೫೭ರಲ್ಲೇ ಮದ್ರಾಸ್ ಹಸ್ತಪ್ರತಿ ಗ್ರಂಥಾಲಯದಿಂದ ಪ್ರಕಟಗೊಂಡಿದೆ.

ಪರಾಮರ್ಶನ ಗ್ರಂಥಗಳು

Vasudeva Sastri, “Aumapatam of Umapati, edited by K Vasudeva Sastri,” MusicResearchLibrary, accessed October 30, 2024, http://musicresearchlibrary.net/omeka/items/show/775.

Leave a Reply

*

code