ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 21-ಮುಮ್ಮಡಿ ಚಿಕ್ಕಭೂಪಾಲನ ಅಭಿನವಭರತಸಾರಸಂಗ್ರಹ & ಸಂಗ್ರಹಗ್ರಂಥಗಳು

Posted On: Sunday, March 3rd, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೨೧- ಮುಮ್ಮಡಿ ಚಿಕ್ಕಭೂಪಾಲನ ಅಭಿನವಭರತಸಾರಸಂಗ್ರಹ ಮತ್ತು ವಿಜಯನಗರ ಕರ್ನಾಟ ಸಾಮ್ರಾಜ್ಯೋತ್ತರ ಕಾಲದ ಸಂಗೀತ ಸಂಗ್ರಹಗ್ರಂಥಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 21- Mummaḍi Cikkabhūpāla’s Abhinavabharatasārasangraha and Different Sangīta Sangraha Texts of post Vijayanagara Karnāṭa period

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಭಾಗಶಃ ಲೇಖನ

Authored by ಡಾ.ಮನೋರಮಾ ಬಿ.ಎನ್.

ತುಮಕೂರು ಬಳಿಯ ಬಿಜ್ಜಾವರ ಮತ್ತು ತದನಂತರದಲ್ಲಿ ಮಧುಗಿರಿಯನ್ನು ಕೇಂದ್ರವಾಗಿಸಿ ರಾಜ್ಯಭಾರ ಮಾಡಿದ ಅರಸ ಮುಮ್ಮಡಿ ಚಿಕ್ಕಭೂಪಾಲ ರಚಿತ ಗ್ರಂಥವೇ ಅಭಿನವಭರತಸಾರಸಂಗ್ರಹ. ಚಿಕ್ಕಭೂಪಾಲರ ವೃದ್ಧಾಪ್ಯ ಕಾಲದಲ್ಲಿ ಅಂದರೆ ೧೬೬೦ರಿಂದ ೧೬೭೦ನೇ ಇಸವಿಯ ಒಳಗಿನ ಅವಧಿ ಈ ಗ್ರಂಥದ ರಚನೆಯ ಕಾಲವೆಂದು ಅಂದಾಜಿಸಲಾಗಿದೆ.

ಮುಮ್ಮಡಿ ಚಿಕ್ಕಭೂಪಾಲ- ವೈಯಕ್ತಿಕ ವಿವರಗಳು

ಮುಮ್ಮಡಿ ಚಿಕ್ಕಭೂಪಾಲನ ಅರಸೊತ್ತಿಗೆ ಮೂಲತಃ ವಿಜಯನಗರ ಕರ್ನಾಟ ಅರಸರಿಂದ ಸಹಾಯ ಪಡೆದ ಸಾಮಂತವರ್ಗ. ಮಾರೇಗೌಡ ಎಂಬುವನಿಂದ ೧೪ನೇ ಶತಮಾನದ ಹೊತ್ತಿಗಾಗಲೇ ಈ ವಂಶ ಬೆಳವಣಿಗೆ ಹೊಂದಿತ್ತು. ಆತನ ಉಳಿದ ಆರು ಮಂದಿ ಸೋದರರು ಅಂದಿನ ಮೈಸೂರು ರಾಜ್ಯದ ಏಳು ಭಿನ್ನ ಭಿನ್ನ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದ್ದರು. ಹಾಗೆಂದೇ ಏಳನಾಡ ಪ್ರಭುಗಳು, ಮಹಾನಾಡ ಪ್ರಭುಗಳು ಎಂದೇ ಖ್ಯಾತರಾದರು. ಮುಮ್ಮಡಿಯೆನ್ನುವುದು ಈ ವಂಶದವರು ಮೊದಲು ಸ್ಥಾಪಿಸಿದ ನಗರಿಯ ಹೆಸರು. ಅದೇ ಮುಂದುವರಿದು ಈ ವಂಶದ ಹಿರೇಚಿಕ್ಕಪ್ಪ ಗೌಡರು ಬಿಜ್ಜಾದೇವಿ ಮಾರಿದೇವಿಯ ಕೃಪೆಯಿಂದ ೧೫೨೪ರ ಹೊತ್ತಿಗೆ ಬಿಜ್ಜಾವರದಲ್ಲಿ ಆಳ್ವಿಕೆ ನಡೆಸಿದರು. ವಿಜಯನಗರದ ಅರಸರಾಗಿದ್ದ ಶ್ರೀಕೃಷ್ಣದೇವರಾಯರ ಒಲವು ಮತ್ತು ಸಹಕಾರ ಇವರಿಗೆ ದಕ್ಕಿತ್ತು. ಅಂತೆಯೇ ಈ ಸಪ್ತ ಸಹೋದರರು ವಿಜಯನಗರದ ಪರವಾಗಿ ಅನೇಕ ಯುದ್ಧಗಳಲ್ಲೂ ಪಾಲ್ಗೊಂಡಿದ್ದಾರೆ. ಮೈಸೂರು ಅರಸೊತ್ತಿಗೆಯಂತೆಯೇ ಗಂಡಭೇರುಂಡ ಲಾಂಛನದ ಸಹಿತ ಅನೇಕ ಬಹುಮಾನವನ್ನೂ ಪಡೆದಿದ್ದಾರೆ. ಬಿಜ್ಜಾವರವು ಸಂತರಾದ ವ್ಯಾಸರಾಯರ ಅನುಗ್ರಹಕ್ಕೆ ಕೂಡಾ ಪಾತ್ರವಾದ ನಗರಿ.

ಈ ರಾಜವಂಶದ ಮುಂದಿನ ತಲೆಮಾರು ಹಿರೇಚಿಕ್ಕಪ್ಪ ಗೌಡರ ಹೆಸರನ್ನೇ ಬಳಸಿಕೊಂಡು ಮುಂದುವರಿಯಿತು. ಆ ಸಾಲಿನಲ್ಲಿ ಇಮ್ಮಡಿ ಚಿಕ್ಕಪ್ಪ ಗೌಡರ ಮಗನಾಗಿ ನಮ್ಮ ಅಭಿನವಭರತಸಾರಸಂಗ್ರಹದ ರಚನಾಕಾರರಾದ ಮುಮ್ಮಡಿ ಚಿಕ್ಕಭೂಪಾಲರೂ ಇದ್ದಾರೆ. ಇವರ ಮೊದಲ ಹೆಸರು ಸಪ್ಪೆ ಗೌಡ. ತಂದೆ ಮತ್ತು ಇವರ ಅಣ್ಣ ಯುದ್ಧರಂಗದಲ್ಲಿ ಮಡಿದ ಬಳಿಕ ಇವರು ಮಧುಗಿರಿಯಲ್ಲಿ ಪಟ್ಟಕ್ಕೇರಿ ಮುಮ್ಮಡಿ ಚಿಕ್ಕಪ್ಪ ಗೌಡ ಎಂದೇ ಹೆಸರಾದರು. ಇವರ ಪುತ್ರರ ಕಾಲದಲ್ಲಿ ಮೈಸೂರು ಅರಸರಿಂದ ಪರಾಭವಗೊಂಡು ಮುಮ್ಮಡಿ ವಂಶದ ಆಳ್ವಿಕೆ ಕೊನೆಗಾಣುತ್ತದೆ.

ಅಭಿನವಭರತಸಾರಸಂಗ್ರಹ- ಗ್ರಂಥವಿಶೇಷ

ಅಭಿನವಭರತಸಾರಸಂಗ್ರಹ- ಹೆಸರೇ ಹೇಳುವಂತೆ ಇದೊಂದು ಸಂಗ್ರಹ ಗ್ರಂಥ. ಭರತನ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು, ಮತಂಗನ ಬೃಹದ್ದೇಶಿ, ನಾರದನ ಸಂಗೀತಮಕರಂದ, ಹರಿಪಾಲನ ಸಂಗೀತಸುಧಾಕರ, ಶಾರ್ಙ್ಗದೇವನ ಸಂಗೀತರತ್ನಾಕರ, ರಾಮಾಮಾತ್ಯನ ಸ್ವರಮೇಳಕಲಾನಿಧಿ, ಸೋಮನಾರ್ಯನ ನಾಟ್ಯಚೂಡಾಮಣಿ ಮೊದಲಾದ ಇನ್ನೂ ಹಲವು ಗ್ರಂಥಗಳ ಲಕ್ಷಣಗಳನ್ನು ಸಂಗ್ರಹಿಸಿಯೇ ಈ ಗ್ರಂಥವನ್ನು ಬರೆಯಲಾಗಿದೆ. ಆಯಾ ಪೂರ್ವಸೂರಿ ಗ್ರಂಥಕರ್ತರನ್ನು ಉಲ್ಲೇಖಿಸಿಯೇ ಲಕ್ಷಣಗಳನ್ನು ಸೂಚಿಸಲಾಗಿದೆ.

ಅಭಿನವಭರತಸಾರಸಂಗ್ರಹ ಗ್ರಂಥವು ವಾದ್ಯಾಧ್ಯಾಯದಿಂದ ಆರಂಭಗೊಳ್ಳುತ್ತದೆ. ಸ್ತುತಿವಾಕ್ಯಗಳು ಅಷ್ಟಾಗಿ ಕಾಣಸಿಗುವುದಿಲ್ಲ. ತದನಂತರದಲ್ಲಿ ಗೀತಾಧ್ಯಾಯ ಇದೆ. ವಾದ್ಯಾಧ್ಯಾಯವು ಚತುರ್ವಿಧ ವಾದ್ಯವರ್ಗೀಕರಣಗಳು, ಅವುಗಳನ್ನು ನುಡಿಸುವ ಪದ್ಧತಿ, ವಾದಕರ ಗುಣದೋಷಗಳನ್ನು ಹೇಳಿದೆ. ಗೀತಾಧ್ಯಾಯವು ಸ್ವರ- ರಾಗ- ಗಮಕ- ಪ್ರಬಂಧ ಮೊದಲಾದ ಗೀತಕ್ಕೆ ಸಂಬಂಧಿಸಿದ ಲಕ್ಷಣಸಂಗತಿಗಳನ್ನು ಹೇಳಿದೆ. ತಾಲಾಧ್ಯಾಯ, ನರ್ತನಾಧ್ಯಾಯಗಳು ದೊರೆತಿಲ್ಲ. ಮೈಸೂರಿನ ಪ್ರಾಚ್ಯವಸ್ತು ಹಸ್ತಪ್ರತಿ ಸಂಗ್ರಹಾಲಯದಲ್ಲಿದ್ದ ಇದರ ಹಸ್ತಪ್ರತಿಯನ್ನು ಸಂಪಾದಿಸಿ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರು ಪ್ರಕಟಿಸಿದ್ದಾರೆ.

 

ಪರಾಮರ್ಶನ ಗ್ರಂಥಗಳು

Satyanarayana (1960).Abhinava Bharatasarasangraha by Mummadi ChikkaBhupala. Mysore : Varalakshmi academy. https://ia801407.us.archive.org/6/items/Mus-SourceTexts/TxtSkt-abhinava-bharata-sAra-sangraha-mummaDiCikkabhUpAla-0001.pdf

ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೧: ದಾಕ್ಷಿಣಾತ್ಯ (Video series)-ಸಂಚಿಕೆ ೨೧- www.noopurabhramari.com / https://www.youtube.com/channel/UCzsvThi5o-5X1-5kp7jaxVQ

Leave a Reply

*

code