ಶರದ್ ಸಂಭ್ರಮದ ಒಳನೋಟ-09
Posted On: Saturday, October 10th, 2009
Loading...
Author: ಮನೋರಮಾ. ಬಿ.ಎನ್
- ಆಗಸ್ಟ್ ೩೦ : ೧. ಸಾಧನಾ ಸಂಗಮ ಟ್ರಸ್ಟ್‌ನ ಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆ ತನುಜಾ ಅವರ ‘ನೃತ್ಯ ನೀರಾಜನ’ ಭರತನಾಟ್ಯ ರಂಗಪ್ರವೇಶ. ಸ್ಥಳ : ಭಾರತೀಯ ವಿದ್ಯಾಭವನ.
೨. ಶ್ರೀಧರ್ ಮತ್ತು ಅನುರಾಧಾ ಶ್ರೀಧರ್ ಅವರಿಂದ ‘ಮಹಾವೀರ ಕರ್ಣ’ ರೂಪಕ. ಸ್ಥಳ : ನಾರದಾ ಗಾನಸಭಾ, ಚೆನ್ನೈ.
- ಸೆಪ್ಟೆಂಬರ್ ೦೯ : ಮೈಸೂರಿನ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಅವರ ಕಲಾಚಿಂತನ ಹಾಗು ಮಾಸದ ಮಾತು ಪುಸ್ತಕಗಳ ಅನಾವರಣ. ಸ್ಥಳ : ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯ ಭವನ.
- ಸೆಪ್ಟೆಂಬರ್ ೦೯ರಿಂದ ೧೩ : ಕರ್ನಾಟಕ ಗಾನ ಕಲಾ ಪರಿಷತ್‌ನ ಸಂಗೀತ ವಿದ್ವಾಂಸರ ೪೦ನೇ ಸಂಗೀತ ಸಮ್ಮೇಳನ ಮತ್ತು ಯುವ ಸಂಗೀತ ವಿದ್ವಾಂಸರ ಸಮ್ಮೇಳನ, ಗಾನ ಕಲಾ ಭೂಷಣ ದಿ. ವೀಣಾರಾಜಾರಾಯರ ಜನ್ಮಶತಾಬ್ದಿ ಸಮಾರಂಭ. ಈ ಪ್ರಯುಕ್ತ ಕಛೇರಿಗಳು ಮತ್ತು ಉಪನ್ಯಾಸಗಳು, ಏಳು ವಿದ್ವಾಂಸರಿಗೆ ಸನ್ಮಾನ ಮತ್ತು ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷ ವಿದ್ವಾನ್. ಎಂ. ಕೋದಂಡರಾಮ್ ಅವರಿಗೆ ಗಾನಕಲಾ ಭೂಷಣ ಮತ್ತು ಯುವ ಸಂಗೀತ ಸಮ್ಮೇಳನಾಧ್ಯಕ್ಷೆ ವಿದುಷಿ ಕಲಾವತಿ ಅವಧೂತ್ ಅವರಿಗೆ ಗಾನಕಲಾಶ್ರೀ ಬಿರುದು ಪ್ರದಾನ . ಸ್ಥಳ : ಮಲ್ಲೇಶ್ವರಂನ ಸೇವಾಸದನ ಸಭಾಂಗಣ.
- ಸೆಪ್ಟೆಂಬರ್ ೧೦ : ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಕರಾವಳಿ ಮಲೆನಾಡು ಪ್ರದೇಶದ ಆಯ್ದ ೨೦ ಸ್ಥಳಗಳಲ್ಲಿ ಯಕ್ಷಗಾನ ತಾಳಮದ್ದಳೆಯನ್ನಾಧರಿಸಿದ ಕಾರ್ಯಕ್ರಮ ‘ಪ್ರಸಂಗ ಪ್ರವಚನ ಪರ್ವ’ದ ಉದ್ಘಾಟನಾ ಸಮಾರಂಭ ಮತ್ತು ತಾಳಮದ್ದಳೆ ಕಾರ್ಯಕ್ರಮ. ಸ್ಥಳ : ಶ್ರೀಕೃಷ್ಣ ಕಲ್ಯಾಣ ಮಂದಿರ, ಮಂಗಳೂರು.
- ಸೆಪ್ಟೆಂಬರ್ ೦೯-೧೨, ೧೭-೧೯ : ದ ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಇಂಟರ್ ನ್ಯಾಶನಲ್ ಆರ್ಟ್ಸ್ ಫೆಸ್ಟಿವಲ್. ಸ್ಥಳ : ಶೀಷ್ ಮಹಲ್, ಬೆಂಗಳೂರು ಅರಮನೆ, ಓಪಸ್ ಮತ್ತು ಸುಚಿತ್ರಾ ಸಿನೆಮಾ ಮತ್ತು ಸಂಸ್ಕೃತಿ ಅಕಾಡೆಮಿ, ಆರ್.ವಿ.ಡೆಂಟಲ್ ಕಾಲೇಜು, ಚೌಡಯ್ಯ ಮೆಮೋರಿಯಲ್ ಹಾಲ್.
- ಸೆಪ್ಟೆಂಬರ್ ೧೬ : ರೇಚಿತ ನೃತ್ಯಾಲಯ ಮತ್ತು ಎಸ್ ಆರ್ ಎಸ್ ಮ್ಯೂಸಿಕ್ ಸಿಂಡಿಕೇಟ್ ಪ್ರೈ.ಲಿ ಸಹಭಾಗಿತ್ವದಲಿ ಕುತ್ತೂರ್ ಆರ್. ವೆಂಕಟಸುಬ್ರಹ್ಮಣ್ಯಂ ಅವರ ಭರತನಾಟ್ಯ. ಸ್ಥಳ :ಪದ್ಮ ಶೇಷಾದ್ರಿ ಬಾಲಭವನ ಸ್ಕೂಲ್, ಚೆನ್ನೈ.
- ಮೈಸೂರಿನ ಬದರೀ ದಿವ್ಯಭೂಷಣ್ ಮತ್ತು ಅಂಜನಾ ಭೂಷಣ್ ಅವರ ನೃತ್ಯಪ್ರದರ್ಶನ. ಸೆಪ್ಟೆಂಬರ್ ೧೪ : ಸೆಪ್ಟೆಂಬರ್ ೧೮ : ಕಟಕ್‌ನ ಕಲಾವಿಕಾಸ ಕೇಂದ್ರ ಆಡಿಟೋರಿಯಂ. ಮತ್ತು ಮೈಸೂರು ಮತ್ತು ಮಡಿಕೇರಿ ದಸರಾದಲ್ಲಿ ನೃತ್ಯಪ್ರದರ್ಶನ.
- ಸೆಪ್ಟೆಂಬರ್ ೨೭: ಗರುಡ ನಾಟ್ಯ ಸಂಘ ಉದ್ಘಾಟನೆ, ಸ್ಥಳ : ಕುಮಾರಸ್ವಾಮಿ ಲೇಔಟ್‌ನ ಶ್ರೀ ಅಂಬಾ ಭವಾನಿ ದೇವಸ್ಥಾನ, ಬೆಂಗಳೂರು.
- ಅಕ್ಟೋಬರ್ ೧ : ಸಾಯಿ ನೃತ್ಯೋತ್ಸವ. ಸ್ಥಳ : ಮಲ್ಲೇಶ್ವರಂನ ಸೇವಾ ಸದನ
- ಅಕ್ಟೋಬರ್ ೧೧ : ಭರತನೃತ್ಯ ಸಭಾ ಆಶ್ರಯದಲ್ಲಿ ಸನಾತನ ನಾಟ್ಯಸಂಸ್ಥೆಯ ಗುರು ವಿದುಷಿ ಶಾರದಾಮಣಿ ಶೇಖರ್ ಅವರ ಶಿಷ್ಯೆ ಬೆಂಗಳೂರಿನ ಮೃದುಲಾ ವೇಣುಗೋಪಾಲ್ ಅವರಿಂದ ಭರತನಾಟ್ಯ. ಸ್ಥಳ : ಪುರಭವನ, ಮಂಗಳೂರು.
- ಅಕ್ಟೋಬರ್ ೧೫-೨೩ : ಸ್ವಿಟ್ಜರ್ಲ್ಯಾಂಡ್‌ನ ನೃತ್ಯಗುರು ವಿದ್ವಾನ್ ಡಿ. ಕೇಶವ ಅವರ ಕಲಾಶ್ರೀ ಸಂಸ್ಥೆಯಿಂದ ದೀಪಾವಳೀ ಪ್ರಯುಕ್ತ ‘ಪಂಚ ಭೂತ-ದಿ ಫೈವ್ ಎಲಿಮೆಂಟ್ಸ್’ ಪ್ರಯೋಗ. ಸ್ಥಳ : ಬಾಸೆಲ್.
- ಅಕ್ಟೋಬರ್ ೧೭ : ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶಯದಲ್ಲಿ ಈ ವರ್ಷದ ಡಾ. ಕೀಲಾರು ಗೋಪಾಲಕೃಷ್ಣಯ್ಯನವರ ಸಂಸ್ಮರಣೆ, ಪ್ರತಿಭಾ ಪುರಸ್ಕಾರ ಮತ್ತು ಪ್ರಸಿದ್ಧ ಸಂಪಾಜೆ ಯಕ್ಷೋತ್ಸವ. ತೆಂಕು-ಬಡಗಿನ ಸುಮಾರು ನೂರಿಪ್ಪತ್ತು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಐದು ಪ್ರಸಂಗಗಳ ಯಕ್ಷಗಾನ ಬಯಲಾಟ ಮತ್ತು ಏಕವ್ಯಕ್ತಿ ಯಕ್ಷಗಾನ. ಪ್ರಸಿದ್ಧ ಅರ್ಥಧಾರಿ, ಚಿಂತಕ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ಅವರಿಗೆ ಶೇಣಿ ಪ್ರಶಸ್ತಿ. ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರಿಗೆ ಸನ್ಮಾನ. ದಿವಂಗತ ಕುಕ್ಕಿಲ ಕೃಷ್ಣ ಭಟ್ ಅವರ ಸಂಪಾದಕತ್ವದ ‘ಪಾರ್ತಿಸುಬ್ಬನ ಯಕ್ಷಗಾನಗಳು’ ಪುಸ್ತಕ ಅನಾವರಣ. ಸ್ಥಳ : ಸಂಪಾಜೆ ಕಲ್ಲುಗುಂಡಿ ಶಾಲಾ ವಠಾರ.
- ಅಕ್ಟೋಬರ್ ೨೫ : ಕಲ್ಪತರು ಕಲಾವಿಹಾರದ ನಿರ್ದೇಶಕಿ ಪದ್ಮಜಾ ಸುರೇಶ್ ಅವರ ಶಿಷ್ಯೆ ವಿಜಯಲಕ್ಷ್ಮಿ ಅವರ ಭರತನಾಟ್ಯ ರಂಗಪ್ರವೇಶ. ಸ್ಥಳ : ಜೆಎಸ್‌ಎಸ್ ಆಡಿಟೋರಿಯಂ, ಬೆಂಗಳೂರು.
- ನವೆಂಬರ್ ೩, ೪, ೬, ೭, ೮ : ಮಂಗಳೂರಿನ ಭರತನೃತ್ಯ ಸಭಾ ಮತ್ತು ಮಣಿಕೃಷ್ಣಸ್ವಾಮಿ ಅಕಾಡೆಮಿಯ ಸಹಭಾಗಿತ್ವದಲ್ಲಿ ಭರತಮಣಿ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ. ದೇಶದ ಪ್ರಸಿದ್ಧ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು. ಸಮಾರೋಪದಲ್ಲಿ ರಂಜನಿ ಗುರುಪ್ರಸಾದ್, ಮತ್ತು ಚೆನ್ನೈಯ ಹೆಸರಾಂತ ನೃತ್ಯಪಟು ಶೀಜಿತ್ ಕೃಷ್ಣ- ಇವರುಗಳಿಗೆ ಭರತಮಣಿ ರಾಷ್ಟ್ರೀಯ ಯುವಪ್ರಶಸ್ತಿ ಪ್ರದಾನ. ಸ್ಥಳ : ಪುರಭವನ, ಮಂಗಳೂರು.