ಅಂಕಣಗಳು

Subscribe


 

ಒಳನೋಟ -ಮಾರ್ಚ್ ಏಪ್ರಿಲ್ ೨೦೧೦

Posted On: Thursday, April 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಪ್ರತೀ ತಿಂಗಳ ೧ನೇ ತಾರೀಕು : ಸಾಯಿ ನೃತ್ಯೋತ್ಸವ. ವಿವಿಧ ಕಲಾವಿದರಿಂದ ಭರತನಾಟ್ಯ, ಕೂಚಿಪುಡಿ, ಕಥಕ್ ನೃತ್ಯ ಪ್ರದರ್ಶನ. ಸ್ಥಳ : ಸೇವಾ ಸದನ, ಬೆಂಗಳೂರು.

ಮಾರ್ಚ್ ೫ :  ಭರತ ನೃತ್ಯ ಸಭಾ ಪ್ರಸ್ತುತಪಡಿಸುವ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ ಕಾರ್ಯಕ್ರಮ ; ಒಂಟಿಕಾಲಿನ ನಾಟ್ಯರಾಣಿ ಕು. ವಂದನಾ ಅವರಿಂದ. ಸ್ಥಳ : ಪುರಭವನ, ಮಂಗಳೂರು.

ಮಾರ್ಚ್ ೬ :  ಭರತ ನೃತ್ಯ ಸಭಾ ಪ್ರಸ್ತುತಪಡಿಸುವ ಭರತನಾಟ್ಯ ; ವಿದುಷಿ ಸುಮನಾ ಸುರೇಶ್ ಕಾರಂತ್ ಅವರಿಂದ. ಸ್ಥಳ : ಪುರಭವನ, ಮಂಗಳೂರು.

ಹೆಸರಾಂತ ಕೂಚಿಪುಡಿ ನೃತ್ಯ ತಾರೆ ವೈಜಯಂತಿ ಕಾಶಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ.

ಮಾರ್ಚ್ ಎರಡನೇ ವಾರದಿಂದ ಪ್ರತೀ ಭಾನುವಾರ : ಭರತನೃತ್ಯ ಸಭಾ ಪ್ರಾಯೋಜಿಸುವ ನಾಯಿಕಾ-ನಾಯಕಾ ಭಾವ, ನವರಸಾಭಿನಯ, ವಿದ್ವತ್ ಶ್ರೇಣಿಯ ಪರೀಕ್ಷಾ ಥಿಯರಿ ಕುರಿತು ಪ್ರಾತ್ಯಕ್ಷಿಕೆ ಸಹಿತ ತರಬೇತಿ ಕಾರ್ಯಾಗಾರ ಹೆಸರಾಂತ ಹಿರಿಯ ನೃತ್ಯಗುರು ನಾಟ್ಯಾಚಾರ್ಯ ಕೆ. ಮುರಳೀಧರ ರಾವ್ ಅವರಿಂದ.

ಮಾರ್ಚ್ ೨೦ : ನಾಟ್ಯ ಸರಸ್ವತಿ ಸಂಸ್ಥೆ ಪ್ರಾಯೋಜಿಸುವ ನೃತ್ಯ ಭಾರತಿ ಉತ್ಸವ. ವಿವಿಧ ಕಲಾವಿದರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ. ಸ್ಥಳ : ರವೀಂದ್ರ ಭಾರತಿ ಆಡಿಟೋರಿಯಂ, ಹೈದರಾಬಾದ್.

ಏಪ್ರಿಲ್ ೨ : ನೂಪುರ ಭ್ರಮರಿಯ ಬಳಗದ ಹಿರಿಯರಲ್ಲೊಬ್ಬರಾದ ಏಕವ್ಯಕ್ತಿ ಯಕ್ಷಗಾನದ ಸಾಮ್ರಾಟ ಮಂಟಪ ಪ್ರಭಾಕರ ಉಪಾಧ್ಯಾಯ ಅವರ ಏಕವ್ಯಕ್ತಿ ಯಕ್ಷಗಾನ ಸಾವಿರ ಪ್ರದರ್ಶನದ ಸಂಭ್ರಮ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಅನಾವರಣ, ಸಂಮಾನ, ಕಾರ್ಯಾಗಾರ. ಕಲಾಪ್ರಯೋಗವೊಂದು ಅದ್ಭುತ ದಾಖಲೆ ಬರೆಯುತ್ತಿರುವುದು ನಿಜಕ್ಕೂ ಕಲಾರಸಿಕರಿಗೆ ಹೆಮ್ಮೆಯ ಕ್ಷಣ. ಕಳೆದ ವರ್ಷದ ವಾರ್ಷಿಕ ಸಂಚಿಕೆ ಮಂಟಪರ ಮುಖಪುಟ ಮತ್ತು ಸಂದರ್ಶನವನ್ನು ಒಳಗೊಂಡು ವಿಸ್ತೃತ ಅಭಿಮಾನಕ್ಕೆ ಪಾತ್ರವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸ್ಥಳ : ವಿದ್ಯಾಗಿರಿ, ಮೂಡಬಿದಿರೆ.

ಏಪ್ರಿಲ್ ೨೯ : ಭೂಷಣ್ ಅಕಾಡೆಮಿಯ ವತಿಯಿಂದ ವಿಶ್ವ ನೃತ್ಯ ದಿನದ ಪ್ರಯುಕ್ತ ವಿವಿಧ ನೃತ್ಯ ಕಲಾವಿದರಿಂದ ನೃತ್ಯ ವೈಭವ. ನೃತ್ಯ ಕಲಾವಿದ ಆಸಕ್ತರು ಸಂಬಧಿಸಿದವರನ್ನು ಸಂಪರ್ಕಿಸಬಹುದು. ಸ್ಥಳ : ವಾಸುದೇವಾಚಾರ್ಯ ಭವನ, ಮೈಸೂರು.

Leave a Reply

*

code