Author: ಸಂಪಾದಕರು
ತೆಂಕುತಿಟ್ಟಿನ ಖ್ಯಾತ ಹಿಮ್ಮೇಳ ಕಲಾವಿದ, ಚೆಂಡೆ ಮದ್ದಳೆವಾದಕರಾದ ಅಡೂರು ಗಣೇಶ ರಾವ್(೫೦)
ಜನನ ೧೯೬೮ರ ಮಾರ್ಚ್ ೨೩; ಹೃದಯಾಘಾತಕ್ಕೀಡಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಡಿಸೆಂಬರ್ ೧೧ ನಿಧನ
ತಂದೆತಾಯಿ : ಕೆ.ಕೃಷ್ಣರಾವ್ ಹಾಗೂ ಪಾರ್ವತಿ
ಕುಟುಂಬ : ಪತ್ನಿ , ಪುತ್ರ ಹಾಗೂ ಪುತ್ರಿ
ತಂದೆಯಿಂದಲೇ ಮೊದಲ ಶಿಕ್ಷಣ ಪಡೆದು, ಬಳಿಕ ಯಕ್ಷಗಾನದ ಮೇರು ಶಿಖರಪ್ರಾಯರಲ್ಲಿ ಒಬ್ಬರಾದ ದಿ.ನೆಡ್ಲೆ ನರಸಿಂಹ ಭಟ್ಟರಲ್ಲಿ ಶಿಷ್ಯತ್ವ ಹೆಗ್ಗಳಿಕೆ : ಧರ್ಮಸ್ಥಳ ಮೇಳದಲ್ಲಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸ್ಥಾನವನ್ನು ತುಂಬಿದ್ದರು. ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಜೊತೆಗೆ ಅತ್ಯುತ್ತಮ ಹೊಂದಾಣಿಕೆಯೊಂದಿಗೆ, ಪ್ರಧಾನ ಮದ್ದಳೆಗಾರರು, ಚೆಂಡೆವಾದಕರು.
ಅನುಭವ : ಸುರತ್ಕಲ್, ಕಟೀಲು, ಪುತ್ತೂರು, ಕದ್ರಿ ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಸುಮಾರು ೩೦ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ತಿರುಗಾಟ. ಭಾಗವತಿಕೆಯನ್ನೂ ಮಾಡಬಲ್ಲವರಾಗಿದ್ದರು. ವೇಷಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದ ಅವರು, ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಪುಂಡು-ಕಿರೀಟ ವೇಷವನ್ನು ಮಾಡುತ್ತಿದ್ದರು. ಈ ಕಾರಣದಿಂದಾಗಿಯೇ ರಂಗದಲ್ಲಿ ವೇಷಗಳನ್ನು ವಿಜೃಂಭಿಸುವಂತೆ ಮಾಡುವಲ್ಲಿ ನಿಪುಣರಾಗಿದ್ದರು.
೨೦೧೮ರಲ್ಲಿ ಅಪಘಾತದಲ್ಲಿ ನಿಧನರಾದ ಕುಮಟಾದ ಯುವ ಭರತನಾಟ್ಯ ಕಲಾವಿದೆ ಸೌಮ್ಯಾ ಭಟ್ ಕಡತೋಕ, ಯಕ್ಷಗಾನ ಕಲಾವಿದರಾದ ದಿನೇಶ್ ಹೆನ್ನಬೈಲ್, ಪ್ರಸನ್ನ ಆಚಾರ್ ಅವರಿಗೆ ಪತ್ರಿಕೆಯು ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದೆ. ಅಂತೆಯೇ ಕಣ್ಮರೆಯಾದ ಅನೇಕ ಕಲಾಚೇತನಗಳ ಆತ್ಮಕ್ಕೂ ಸದ್ಗತಿ ಕೋರುತ್ತಾ ಈ ನುಡಿನಮನ ಅಂಜಲಿಯನ್ನು ಅರ್ಚಿಸುತ್ತಿದೆ. ಅವರ ಪುಣ್ಯವಿಶೇಷಗಳು, ನಡೆದು ನುಡಿದ ದಾರಿಯ ಮೈಲಿಗಲ್ಲುಗಳು ವರ್ತಮಾನದ ಕಲೆ ಮತ್ತು ಕಲಾವಿದರ ಮನಸ್ಸುಗಳನ್ನು ಬೆಳಗಿಸುತ್ತಿರಲಿ ಎಂಬುದೇ ನಮ್ಮ ಆಶಯ.