ಅಂಕಣಗಳು

Subscribe


 

ನೂಪುರವೆಂದರೆ ಓದುಗರಿಗೆ ಮೃಷ್ಠಾನ್ನ ಭೋಜನ

Posted On: Wednesday, May 28th, 2014
1 Star2 Stars3 Stars4 Stars5 Stars (No Ratings Yet)
Loading...

Author: - ಮಾಸ್ಟರ್ ವಿಠಲ್, ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ

ಮಾನ್ಯರೇ, ಗೆಜ್ಜೆಯ ಗಿಣಿಗಿಣಿಯನ್ನು ಯಾರಿಗೂ ಮೋಹಿಸುವಂತೆ ಮಾಡಿ ನೃತ್ಯ ಕಲಿಯದವರನ್ನೂ ಕಲಿಯುವಂತೆ ಪ್ರೋತ್ಸಾಹಿಸುವುದು, ಅವರಿಂದ ಅಪಾರ ಪ್ರೀತಿ ಸಂಪಾದಿಸುವುದು ಮಹೋನ್ನತ ಗುಣವಾಗಿದೆ. ಇದು ಊಟಕ್ಕೆ ಆಹ್ವಾನಿಸಿ ಮೃಷ್ಠಾನ್ನ ಭೋಜನವನ್ನೇ ಪ್ರಾಪ್ತಿಯಾಗಿಸುವ ಮಟ್ಟಿನ ಪುಣ್ಯದ ಕೆಲಸ. ‘ಗೆಜ್ಜೆ’ ಎಂಬ ಅಭಿದಾನದಲ್ಲಿ ಯಾರನ್ನೂ ನರ್ತಿಸುವಂತೆ ಮಾಡುವ ಪತ್ರಿಕೆ ನಿಮ್ಮದು.

 – ಮಾಸ್ಟರ್ ವಿಠಲ್

ಏಳನೇ ವಾರ್ಷಿಕ ಸಂಭ್ರಮದ ಪ್ರತೀಕವಾಗಿ ವಿನ್ಯಾಸಗೊಂಡ 8ನೇ ಸಂಪುಟದ 2ನೇ ಸಂಚಿಕೆಯು ಹೊಸತಾಗಿ ಮೂಡಿಬಂದಿದೆ. ಇಂಗ್ಲೀಷಿನ ಅಂಕಣಗಳಿದ್ದರೂ ಕನ್ನಡ ಭಾಷೆಗೆ ಯಾವುದೇ ಲೋಪವಾಗದಂತೆ ತೃಪ್ತಿಕರವಾಗಿ ವಿಷಯಗಳು ಅಡಕಗೊಂಡಿದೆ. ನೃತ್ಯಸಂಶೋಧನ ಸಮ್ಮೇಳನದ ಸಮಸ್ತ ಭಾಗಿಗಳಾದ ವಿದ್ವತ್ ಮುತ್ಸದ್ದಿಗಳ ಅಭಿಪ್ರಾಯ ಅನಿಸಿಕೆಗಳು ಚಿಂತನ ಮಂಥನಕ್ಕೆ ಅಡಿಗಲ್ಲಿಟ್ಟಂತೆ ಅನಿಸಿತು.

ನುಡಿನಮನವಾಗಿ ಮೂಡಿಬಂದ ನುಡಿಬೆಡಗಿನ ನಿಕಷವನ್ನಿತ್ತ ‘ಚೆನ್ನ’-ಮೌನದಲ್ಲಿ ಲೀನ ಎಂದೆಂಬ ಮೇಲ್ಬರಹದಲ್ಲಿ ಸಚಿತ್ರವಾಗಿ ನಿರೂಪಿಸಲ್ಪಟ್ಟ ಯಕ್ಷಗಾನದ ಹಿರಿಯ ಧೀಮಂತ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ಬಗೆಗಿನ ಬರೆಹ ಓದಿ ಕಣ್ಣಾಲಿಗಳು ತೇವಗೊಂಡವು.

ಅದರಂತೆ ಸಂಪುಟ 8ರ ಒಂದನೇ ಸಂಚಿಕೆ ಎಂದಿನಂತೆ ವಂದನಾ ಸ್ವೀಕಾರ ಪಡೆದುಕೊಳ್ಳುವಲ್ಲಿ ತಡವರಿಸಲಿಲ್ಲ. ಮಂಜೀರದಲ್ಲಿ ನೃತ್ಯಪರಂಪರೆಯ ಪೋಷಕತ್ತ್ವದ ವಿಚಾರ, ರಾಜಾಶ್ರಯ ಹಾಗೂ ದೇವಾಲಯಗಳ ಸಂಬಂಧದ ಕುರಿತಾಗಿ ಸಾಕಷ್ಟು ಅನ್ನಿಸದಿದ್ದರೂ ಬೇಕಷ್ಟು ವಿವರಣೆ ನೀಡಿ ಇನ್ನಷ್ಟೂ ಇದ್ದರೆ ಚೆನ್ನಾಗಿತ್ತು ಅನ್ನುವಂತೆ ಮಾಡಿದ್ದಾರೆ. ಕೊಡಗಿನ ಬೆಡಗಿಯಾಗಿ 8ನೇವರ್ಷದಲ್ಲಿ ಮುನ್ನಡೆಯುತ್ತಿರುವ ನೂಪುರ ಭ್ರಮರಿ ಎಂಬ ಕಿಶೋರಿಯ ಹಿರಿಮೆ ನಾಡಿನಾದ್ಯಂತ ಮುನ್ನಡೆಯುತ್ತಿರಲಿ.

– ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ‘ಬನಾರಿ’ಯಕ್ಷಗಾನ ಸಂಘ, ಕಾಸರಗೋಡು.

Leave a Reply

*

code