Author: ಮನೋರಮಾ. ಬಿ.ಎನ್
ಸರ್ಪಶೀರ್ಷಹಸ್ತಗಳನ್ನು ಮಣಿಬಂಧದ ಬಳಿ ಸ್ವಸ್ತಿಕಾಕಾರವಾಗಿ ಹಿಡಿಯುವುದು. ನಾಗಬಂಧ ಎಂದರೆ ಸರ್ಪಬಂಧ ಎಂದರ್ಥ. ಅಭಿನಯದರ್ಪಣವು ಹೇಳುವ ಸ್ಥಾನಕಗಳಲ್ಲಿ ಒಂದೆನಿಸುವ ನಾಗಬಂಧವು ಇದೇ ಹೆಸರಿನಿಂದ ನಿರ್ದೇಶಿತವಾಗಿದ್ದು; ಕಾಲನ್ನು ಸ್ವಸ್ತಿಕ ರೇಚಿತದಲ್ಲಿಟ್ಟು ಕೈಗಳಲ್ಲಿ ಈ ಹಸ್ತವನ್ನು ಹಿಡಿಯುವ ಲಕ್ಷಣವನ್ನು ಹೇಳಲಾಗಿದೆ.
ವಿನಿಯೋಗ : ಸರ್ಪಗಳ ರತಿಬಂಧ, ಸರ್ಪ ದಂಪತಿಗಳು, ಲತಾಮಂಟಪ (ಬಳ್ಳಿಗಳ ಹಂದರ) ಅಥರ್ವಣ ವೇದದ ಮಂತ್ರ. ಪ್ರಾನಾಟ್ಯಶಾಸ್ತ್ರಕಥನಮಾಲಿಕೆಣಿಹಸ್ತಗಳ ಪೈಕಿ ನಾಗಬಂಧಹಸ್ತಗಳನ್ನು ಮೇಲ್ಮುಖವಾಗಿರಿಸಿ ದನದ ಕಿವಿಯಂತೆ ತೋರಿಸುವುದರಿಂದ ಹೇಸರಗತ್ತೆಯನ್ನು ಸೂಚಿಸಬಹುದು. ನಿತ್ಯಜೀವನದಲ್ಲಿ ಸರ್ಪ ಜೋಡಿ ಎನ್ನಲು ಬಳಸುತ್ತಾರೆ. ಕರಾಟೆಯಲ್ಲಿ ಈ ಹಸ್ತದ ಬಳಕೆ ಇದೆ.
************************