ಅಂಕಣಗಳು

Subscribe


 

ಮೈಸೂರು ಭರತನಾಟ್ಯ ನೃತ್ಯಶೈಲಿ : ಪ್ರತಿಕ್ರಿಯೆ

Posted On: Thursday, December 15th, 2011
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಡಾ.ಕರುಣಾ ವಿಜಯೇಂದ್ರ, ಕಲಾ-ಇತಿಹಾಸ ಸಂಶೋಧಕರು, ಬೆಂಗಳೂರು

ವಿದುಷಿ, ಗುರು, ಲೇಖಿಕೆ, ಸಂಶೋಧಕಿ ಶ್ರೀಮತಿ ಲಲಿತಾ ಶ್ರೀನಿವಾಸನ್ ಅವರ ವಿಚಾರಧಾರೆಗಳೂ ಅತ್ಯಂತ ಸ್ಪಷ್ಟ, ನಿಖರ ಮತ್ತು ಸೂಕ್ತವಾಗಿದೆ ಎನ್ನುವುದು ನನ್ನ ಅಭಿಪ್ರಾಯ.

ಕಲೆ ಸೃಷ್ಟಿಶೀಲಕ್ರಿಯೆಯ ಅಭಿವ್ಯಕ್ತಿ. ಅಭಿವ್ಯಕ್ತಿ ಎನ್ನುವುದು ಕಲಾವಿದನ ಸ್ವಾತಂತ್ರ್ಯ. ಕಲಿತದ್ದನ್ನು, ನೋಡಿ ಅರಿತದ್ದನ್ನು ತನ್ನ ಅನುಭವದ ಪಾಕದಲ್ಲಿ ಕೊಡುವುದೇ ಕಲಾವಿದನಲ್ಲಿನ ಅರ್ಹತೆಗೆ ಸಾಕ್ಷಿ. ಕಲಿತದ್ದನ್ನಷ್ಟೇ ಮಾಡುವೆ, ಹಿಂದೆ ಇದ್ದ ಪದ್ಧತಿಗಳಿಗೆ, ಹೊಸತನಕ್ಕೆ ನನ್ನ ಕಣ್ಣುಕಿವಿಗಳು ತೆರೆಯುವುದಿಲ್ಲ ಎನ್ನುವವರು ಸಹೃದಯರಾಗಲು ಸಾಧ್ಯವಿಲ್ಲ. ತೆರೆದ ಮನಸ್ಸು ಶ್ರೀಮಂತಿಕೆಯನ್ನು ಕಾಣಲು, ಅನುಭವಿಸಲು ಅಭಿವ್ಯಕ್ತಿಸಲು ಸಾಧ್ಯ. ಇಂತಹ ದೃಷ್ಟಿ, ಪರಿಪಾಠವನ್ನು ರೂಢಿಸಿಕೊಂಡಿರುವ, ಅದಕ್ಕೆ ತೆರೆದುಕೊಳ್ಳುವಂತಹ ಪ್ರೇರಣೆ ನೀಡುತ್ತಿರುವ ಕರ್ನಾಟಕದ ಹೆಮ್ಮೆಯ ಕಲಾವಿದೆ ಗುರು ಶ್ರೀಮತಿ ಲಲಿತಾ ಶ್ರೀನಿವಾಸನ್ ಅವರಿಗೆ ನನ್ನ ಕೃತಜ್ಞತೆಗಳು. ಈ ತೆರೆದ ಮನಸ್ಸು ಇಂದಿನವರಲ್ಲಿ ಯಾವಾಗ ಕಾಣಲು ಸಾಧ್ಯ ಎಂಬುದೇ ನನ್ನ ಪ್ರಶ್ನೆ. ನನ್ನ ಅನುಕೂಲ, ನನ್ನ ಇತಿಮಿತಿಯಲ್ಲಿ ನನಗೇನು ಬೇಕೋ ಅದನ್ನೇ ಮಾಡುವೆ, ಅದೇ ಪರಂಪರೆ, ಅದೇ ಸಂಪ್ರದಾಯ ಎನ್ನುವ ನನ್ನ ಚೌಕಟ್ಟು ಇರುವ ತನಕ ಕಲೆ-ಕಲಾವಿದ-ಸಹೃದಯರ ಬಳಗ ಬೆಳೆಯಲು ಸಾಧ್ಯವಿಲ್ಲ ಎನ್ನುವುದು ನನ್ನ ಮನದಾಳದ ಇಂಗಿತ.

(ಲೇಖಿಕೆ ಬೆಂಗಳೂರಿನಲ್ಲಿ ಹಿರಿಯ ಕಲಾ-ಇತಿಹಾಸ ಸಂಶೋಧಕಿ.)

 

1 Response to ಮೈಸೂರು ಭರತನಾಟ್ಯ ನೃತ್ಯಶೈಲಿ : ಪ್ರತಿಕ್ರಿಯೆ

  1. Niveditha Srinivas

    Great observation by Dr.Karuna… She has drawn our attention to the need of the situation. This short, ‘to-the-point’ article, if deciphered, gives the picture of the entire dance field.

Leave a Reply

*

code