Author: ಜಿ. ಟಿ. ರಾಘವೇಂದ್ರ , ಸುರೇಶ್ ಬಿ.ವಿ.ಜಾಲಹಳ್ಳಿ, ರಾಜೇಶ್ ಪದ್ಮಾರ್, ನಂದಿ ಜೆ. ಹೂವಿನಹೊಳೆ ಮತ್ತು ರಾಘವೇಂದ್ರ .ಆರ್
ಬೆಂಗಳೂರಿನ ಹಿರಿಯ ನೃತ್ಯಗುರು ಕಲಾಕ್ಷಿತಿಯ ಕೃಷ್ಣಮೂರ್ತಿ, ಮಂಗಳೂರು ಕರ್ನಾಟಕ ಬ್ಯಾಂಕಿನ ಉದ್ಯೋಗಿ ಶ್ರೀನಿವಾಸ ದೇಶಪಾಂಡೆ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಹರೀಶ್ ಟಿ.ಜಿ, ಮಂಗಳೂರಿನ ನೃತ್ಯ ಗುರು ಶಾರದಾಮಣಿ ಶೇಖರ್ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಚಂದ್ರಶೇಖರ್ ಶುಭ ಹಾರೈಸಿ ಅಭಿನಂದಿಸಿದ್ದಾರೆ.
ಮೂರು ವರ್ಷ ಪೂರೈಸಿದ ‘ನೂಪುರ ಭ್ರಮರಿ’ಯ ಪ್ರಗತಿಯನ್ನು (ಸಂಪುಟ ೪, ಸಂಚಿಕೆ ೧) ಗಮನಿಸಿದಾಗ ಆಕೆ ಶೋಡಷಿಯಂತೆ ಕಂಡುಬರುತ್ತಿದ್ದಾಳೆ!!, ಸರ್ವಾಂಗ ಸುಂದರಿಯಾಗಿದ್ದಾಳೆ. ಅವಳ ಬೆಳವಣಿಗೆಯು ನನಗೆ ಹೃದಯ ತುಂಬಿ ಬಂದಿದೆ. ಇದಕ್ಕೆ ಕಾರಣರಾದವರಿಗೆಲ್ಲಾ ಧನ್ಯವಾದಗಳು.
ಪತ್ರಿಕೆಯ ಬಗ್ಗೆ ನನ್ನ ಅಭಿಪ್ರಾಯಗಳು : ಅಚ್ಚು ಸ್ಪಷ್ಟವಾಗಿದ್ದು ಎದ್ದು ಕಾಣುವಂತಿದೆ – ಆದ್ದರಿಂದ ಪ್ರಾಯಸ್ಥರಿಗೂ ಓದಲು ಅನುಕೂಲವಾಗಿದೆ.
ವಿನ್ಯಾಸ ಆಕರ್ಷಕವಾಗಿದೆ. ವಿಷಯಗಳು ಅದರದರ ಸ್ಥಳಗಳಲ್ಲಿ ಅಡಕವಾಗಿ ಕೂತಿವೆ. ‘ಹೀಗೆ ಮಾಡಬಹುದಿತು’ ಎಂದು ಎಲ್ಲೂ ಹೇಳಿಸಿಕೊಳ್ಳುವಂತೆ ಕಾಣಲಿಲ್ಲ.
ಶೈಲಿ : ಕಳಶಪ್ರಾಯವಾಗಿ ‘ಸಂಪಾದಕೀಯ’ ಬಂದಿದೆ. ಭಾಷಾ ಪ್ರೌಢಿಮೆ, ಶಬ್ದ ಸಂಪತ್ತು, ಕಿರಿದರಲ್ಲಿ ಹಿರಿದರ್ಥವನ್ನು ಓದುಗರಿಗೆ ತಿಳಿಸಿಕೊಡುವ ಜಾಣ್ಮೆ ಅನುಕರಣೀಯ. ನೀವು ಸಾಹಸಪ್ರಿಯರು, ನಡೆಯುವಾಗ ಎದುರಿಗೆ ಬಂದದ್ದನ್ನೆಲ್ಲಾ ಎದುರಿಸುವ ಧೈರ್ಯವಿದೆ, ಬುದ್ಧಿವಂತಿಕೆಯಿದೆ, ಜಾಣ್ಮೆಯಿದೆ, ಛಲವಿದೆ ; ಇವುಗಳೆಲ್ಲವೂ ನಿಮ್ಮ ಲೇಖನದಲ್ಲಿ ಕಂಡುಬರುತ್ತವೆ – ಇವೆಲ್ಲವನ್ನೂ ನಾನು ಓದಿ ಸಂತೋಷಪಟ್ಟಿದ್ದೇನೆ. ನಿಮ್ಮದೇ ಹೇಳಿಕೆ ‘— ಗುರಿಯೆಂಬುದು ತಾಣವಲ್ಲ, ಅದು ನಡೆದಷ್ಟೂ ಸವಯದ ಹಾದಿ–‘. ಈ ಸಾಲು ಬಲು ಅರ್ಥಗರ್ಭಿತ. ಇಷ್ಟೊಂದು ಆಳ ಅಗಲ ವಿಶಾಲವಾಗಿ ಚಿಂತಿಸುವ ನೀವು — ಹಾಗೆ ನೋಡಿದರೆ ಪ್ರಾರಂಭ ದಿನಗಳಲ್ಲಿ ಮೂದಲಿಕೆಯ ಮಾತುಗಳೇ ಸುತ್ತಲಿಂದ ಪ್ರತಿಧ್ವನಿಸುತ್ತಲಿತ್ತು- ಎಂಬ ಮನಸ್ಸಿನ ಹತ್ತಿಕ್ಕಿಕೊಳ್ಳಲಾಗದ ಭಾವನೆಯನ್ನು ಹೊರಹಾಕಿದ್ದೀರಿ. ಇದು ತಪ್ಪೇನಲ್ಲ. ಆದರೂ ಅಂತಹ ಸಂದರ್ಭದಲ್ಲಿ ಇನ್ನು ಮುಂದೆ ನೀವು ಅತಿಶಯವಾದ ತಾಳ್ಮೆ ತೆಗೆದುಕೊಂಡು ಬರೆಯಬೇಕಾದದ್ದನ್ನು ಧನಾತ್ಮಕವಾಗಿ ಬರೆದರೆ ಓದುಗರು ಇನ್ನೂ ಹೆಚ್ಚಿನ ಸಂತೋಷ ಪಡುತ್ತಾರೆ. (ಭಗವದ್ಗೀತೆ ಅಧ್ಯಾಯ ೧೪, ಶ್ಲೋಕ ೨೫ ಗಮನಿಸಿ).
ಇದರಿಂದಾಗಿ ನಿಮ್ಮ ಧೀಃಶಕ್ತಿಯು ಉತ್ತಮಗೊಳ್ಳುತ್ತದೆ – ಪ್ರಯತ್ನಿಸಿ. ದರ್ಜಿ ತನ್ನ ಹೊಲಿಗೆ ಯಂತ್ರವನ್ನು ಎರಡೂ ಕಾಲುಗಳಿಂದ ಹಿಂದೆ ಮುಂದೆ ಚಲಿಸುವಂತೆ ಮಾಡಿದರೂ ಚಕ್ರ ಮಾತ್ರ ಮುಂದೆಯೇ ಚಲಿಸುವಂತೆ ನಿಮ್ಮ ಉದ್ದೇಶಗಳು ಯಾವಾಗಲೂ ಧನಾತ್ಮಕವಾಗಿಯೇ ಇರುವುದು ಒಳ್ಳೆಯದು ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ.
ಮುದ್ರಾರ್ಣವ – ನಾಟ್ಯ ಶಾಸ್ತ್ರದ ಬಿಡುಗಡೆಯ ವಿವರಣೆಗಳು ಕಾರ್ಯಕ್ರಮದಲ್ಲಿ ಭಾಗವಹಿಸದವರಿಗೆ ಸ್ಪಷ್ಟ ಚಿತ್ರಣ ನೀಡುತ್ತದೆ. ಒಳ ಹೂರಣಗಳು ವೈವಿದ್ಯಮಯವಾಗಿವೆ, ಸಂಚಿಕೆ ಸಂಗ್ರಹಿಸಿಡಲು ಯೋಗ್ಯವಾಗಿದೆ.
ಪತ್ರಿಕೆಯು ತನ್ನ ಸ್ವಂತಿಕೆಯಿಂದಾಗಿ, ಅಂತಃಸತ್ವದಿಂದಾಗಿ ನನ್ನನ್ನು ಆಕರ್ಷಿಸಿದೆ. ಭವಿಷ್ಯವು ನಿಮಗೆ ಸದಾ ಒಳ್ಳೆಯದನ್ನು ಮಾಡಲಿ.
– ಜಿ. ಟಿ. ರಾಘವೇಂದ್ರ , ‘ದ್ವಾರಕಾ’, ಮಡಿಕೇರಿ.
ನಿಮ್ಮ ಪ್ರಯತ್ನ, ಉತ್ಸಾಹ ನೋಡಿ ತುಂಬಾನೇ ಖುಷಿಯಾಗುತ್ತಿದೆ. ಗುಡ್. ಇತ್ತೀಚಿಗೆ ಹೆಣ್ಮಕ್ಕಳ ಕಾಲೇಜೊಂದರಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅನೇಕ ವಿದ್ಯಾರ್ಥಿ ಚಟುವಟಿಕೆಗಳ ಕುರಿತು ಮಾಹಿತಿ- ಟಿಪ್ಸ್ ನೀಡಿದ ನಾನು, indirect ಆಗಿ ನಿಮ್ಮ ಚಟುವಟಿಕೆಗಳ ಬಗ್ಗೆ ಹೇಳಿದ್ದೆ. ನೂಪುರ ಭ್ರಮರಿ ಬಗ್ಗೆ ಉಲ್ಲೇಖಿಸಿದೆ. ಕೆಲವರು ಸ್ಪೂರ್ತಿ ಪಡೆದದ್ದೂ ಹೌದು. Hard work deserves greater heights . ನಿಮ್ಮನ್ನು ಕಾದಿರುವ ಎತ್ತರಕ್ಕೆ ಏರಿರಿ, ಪ್ರಯತ್ನ ಮುಂದುವರೆಯಲಿ.
– ರಾಜೇಶ್ ಪದ್ಮಾರ್, ಉಪನ್ಯಾಸಕರು, (ನಮಸ್ತೇ ಇಂಡಿಯಾ) ಬೆಂಗಳೂರು.
ನೂಪುರ ಚೇತೋಹಾರಿಯಾಗಿದೆ. ಕಳೆದ ಸಂಚಿಕೆಯ ಮಂಜೀರದಲ್ಲಿ ಎಂದಿನಂತೆ ಪ್ರತಿಯೊಂದು ಶಬ್ದಗಳನ್ನು ಸಹನೆಯಿಂದ ಸೊಗಸಾಗಿ ಬರೆದಿದ್ದೀರಿ. ತುಂಬಾ ಚೆನ್ನಾಗಿತ್ತು.
-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.
I am happy to visit your website. Design is very good. Columns are well edited. Bimba bhramari is fantastic. Good. Keep it up and try to improve much and reach many more kannadigas. Best of luck.
– Kaa.Vee. Krishnadas, President,
Saadhana National Cultural Foundation, Mangalore.
ಹೊಸತನವನ್ನ ತನ್ನದಾಗಿಸಿಕೊಂಡು ‘ನೂಪುರ ಭ್ರಮರಿ’ ಸಾಗಿದೆ. ಪಯಣ ನಿರಂತರವಾಗಿರಲಿ, ಮತ್ತಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುತ್ತಾ ಹೆಜ್ಜೆ ಹಾಕಲಿ. ನಿಮ್ಮ ಸಾಧನೆ ನಿರಂತರವಾಗಿರಲಿ.
-ನಂದಿ ಜೆ. ಹೂವಿನಹೊಳೆ ಮತ್ತು ರಾಘವೇಂದ್ರ .ಆರ್
ಸಂಪಾದಕರು,ಚಿತ್ತಾರದುರ್ಗ.ಕಾಂ,
ಚಿತ್ರದುರ್ಗ,ಬೆಂಗಳೂರು