Author: ಮನೋರಮಾ. ಬಿ.ಎನ್
ನಿಮಗಿಷ್ಟವಾದ ಹಿರಿ-ಕಿರಿಯ ಕಲಾವಿದ ಅಥವಾ ಕಲಾವಿದೆಯ ಸೊಗಸು, ಕೊಡುಗೆ, ಮಾದರಿ, ವಿಶೇಷತೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆಯೇ? ಹಾಗಿದ್ದರೆ ತಡವೇಕೆ. ನೂಪುರ ಭ್ರಮರಿಯ ‘ಲೋಕ ಭ್ರಮರಿ’ ಅಂಕಣಕ್ಕೆ ಬರೆಯಿರಿ; ಅಂಕಣವನ್ನು ಸಮೃದ್ಧಗೊಳಿಸಿ. ನೃತ್ಯ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯ ಹೊಂದಿರುವ / ಹೊಂದಲಿರುವ, ಭರತನಾಟ್ಯ, ಯಕ್ಷಗಾನ, ಒಡಿಸ್ಸಿ, ಕಥಕ್, ಮಣಿಪುರಿ, ಕೂಚಿಪುಡಿ, ಮೋಹಿನಿಯಾಟ್ಟಂ, ಕಥಕಳಿಯಾದಿಯಾಗಿ ಶಾಸ್ತ್ರೀಯ, ಜನಪದ ನರ್ತನ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ನೀವಿಷ್ಟಪಡುವ ಕಲಾವಿದರ ಪರಿಚಯ, ಮಾಹಿತಿ, ನಿಮಗಿಷ್ಟವಾದ ಪಾತ್ರ-ಸನ್ನಿವೇಶ-ಘಟನೆಗಳನ್ನು ಬರೆದು ಕಳಿಸಿ. ತಕ್ಕುದಾದ ಫೋಟೋವಿದ್ದರೆ ಸೂಕ್ತ. ಆದರೊಂದು ವಿನಂತಿ. ವೈಭೋಗದ ಅತಿರಂಜಿತ ವರ್ಣನೆಗಳು, ರಂಗಪ್ರವೇಶ ಅಥವಾ ಇನ್ನಿತರ ಪರಿಚಯ ಕಾರ್ಯಕ್ರಮಗಳ ಆಡಂಬರದ ಮಾಹಿತಿಗಳು ಬೇಡ. ಬರೆದು ಕಳಿಸುತ್ತೀರಲ್ಲಾ ! ಆ ಮೂಲಕ ನರ್ತನ ಕ್ಷೇತ್ರದ ಕಲಾವಿದರನ್ನು ಮತ್ತಷ್ಟು ಸಮೀಪಿಸೋಣ.
*******