ಕರ್ನಾಟಕ –ತಮಿಳ್ನಾಡು ಆಸ್ಥಾನ ನೃತ್ಯಪರಂಪರೆ ಕಲಿಕೆಯಲ್ಲಿ ಹೊಸ ಪ್ರಯತ್ನ : ‘ಶಾಸ್ತ್ರಪ್ರಯೋಗ ನೃತ್ಯಚಿಂತನ’

Posted On: Monday, October 26th, 2015
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನೂಪುರ ಭ್ರಮರಿ (ರಿ.) ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.)ಯ ಸಹಯೋಗದಲ್ಲಿ ನಡೆಯುತ್ತಿರುವ ವಿನೂತನ ಮಾರ್ಗದರ್ಶೀ ಪ್ರಯತ್ನಗಳ ಪೈಕಿ ಈ ವರುಷ ಕರ್ನಾಟಕ-ತಮಿಳ್ನಾಡು ಆಸ್ಥಾನ ಮತ್ತು ಆಲಯ ನೃತ್ಯಪ್ರಂಪರೆಯಲ್ಲಿ ಚಾಲ್ತಿಯಲ್ಲಿದ್ದ ಹಳೆಯ ನೃತ್ಯಬಂಧಗಳ ಪುನರ್ ನವೀಕರಣವೂ ಒಂದಾಗಿದೆ. ಭರತನಾಟ್ಯದ ಅಲರಿಪ್ಪುವಿನಿಂದ ಮೊದಲ್ಗೊಂಡು ತಿಲ್ಲಾನದ ವರೆಗೆ ಸಾಗುವ ಎಂದಿನ ಮಾರ್ಗಪದ್ಧತಿಯ ನಡುವೆಯೇ ಈ ಮಾದರಿಯ ಹಳೆಯ ಸಂಪ್ರದಾಯದ ಪುನರ್ ಶೋಧನೆ ಮತ್ತು ಅವುಗಳ ಸೃಷ್ಟಿಶೀಲ ಪ್ರಯೋಗ ಇದಾಗಿದೆ. ಈ ವಿಶೇಷ ನೃತ್ಯಬಂಧಗಳ ಸಂಶೋಧನೆ, ಪುನರ್ ನವೀಕರಣಕ್ಕೆ ಪೂರಕವಾಗಿ ಇದೇ ಮೇ 25, 26, 2015ರಂದು  ಪುತ್ತೂರಿನಲ್ಲಿ ಎರಡು ದಿನಗಳ ರಾಜ್ಯಮಟ್ಟದ ‘ಶಾಸ್ತ್ರ ಪ್ರಯೋಗ ನೃತ್ಯಚಿಂತನ’ ಎಂಬ ಕಾರ್ಯಾಗಾರ ನಡೆದು ಯಶಸ್ಸನ್ನೂ ಕಂಡಿದೆ. ಶಾಸ್ತ್ರ ಮತ್ತು ಪ್ರಯೋಗ ತರಗತಿಗಳೆರಡನ್ನೂ ಇದಕ್ಕಾಗಿ ವಿನ್ಯಾಸ ಮಾಡಲಾಗಿದ್ದು; ಅಭ್ಯರ್ಥಿಗಳ ವಯಸ್ಸು ಮತ್ತು ಅರ್ಹತೆಗಳನ್ನಾಧರಿಸಿ ತಂಡಗಳ ವಿಭಾಗದಲ್ಲಿ ಕಲಿಕೆಯನ್ನು ನಡೆಸಲಾಗಿತ್ತು.
ಈ ಕಲಿಕಾಕ್ರಮದಲ್ಲಿ ಈ ಕಾಲಕ್ಕೆ ಮರೆಯಾಗಿರುವ ರಾಜಾಶ್ರಯ ಮತ್ತು ಆಲಯ ನೃತ್ಯಪದ್ಧತಿಗಳಲ್ಲಿ ಬೆಳೆದುಬಂದ ವಿಶೇಷವಾದ ಪಾರಂಪರಿಕ ನೃತ್ಯಬಂಧಗಳು-ಸ್ವರಸರಿ, ವಳವೂರು ತೋಡಯಂ, ನಾಂದೀ ಸ್ವನ, ರಾಗಾನುರಾಗತಿನೃತ್ತ, ಉಪೋದ್ಘಾತ ಬಂಧ, ಸ್ವರಜತಿ, ನಾಟ್ಯಶಾಸ್ತ್ರಾಧಾರಿತ ಕೌತ್ವ-ಶಬ್ದ-ಶ್ಲೋಕಗಳು ಇವುಗಳ ಪೈಕಿ ಪ್ರಮುಖವೆನಿಸಿವೆ. ಕಲಿಯಲು ಅಪೇಕ್ಷೆ ಪಡುವ ಆಸಕ್ತ ವಿದ್ಯಾರ್ಥಿ/ಕಲಾವಿದರು 9964140927 ಸಂಪರ್ಕಿಸಿ.
******************

Leave a Reply

*

code