Author: ಕೆ.ವಿ.ರಮಣ್, ಮೂಡಬಿದ್ರಿ.
ಮಂಗಳೂರಿನ ಭರತನೃತ್ಯ ಸಭಾ ಏರ್ಪಡಿಸುವ ಪ್ರತಿಭಾನ್ವಿತ ಸ್ಥಳೀಯ ಕಲಾವಿದರ ತಿಂಗಳ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅರ್ಥಾ ಪೆರ್ಲ ಅವರ ಭರತನಾಟ್ಯ ನೃತ್ಯ ಪ್ರದರ್ಶನದಲ್ಲಿ ತಮ್ಮ ತಂದೆ ಡಾ. ವಸಂತಕುಮಾರ್ ಪೆರ್ಲ ಅವರ ‘ಬಾ ಮಗುವೆ ಬಾ ಮಗುವೆ ಜೀವಭಾವದ ನಗುವೆ’ ಎಂಬ ಭಾವಗೀತೆಗೆ ವಿಸ್ತೃತ ಅಭಿನಯ ಮಾಡಿದರು. ಹಿರಿಯ ನೃತ್ಯ ಗುರು ಕೆ.ಮುರಳೀಧರರಾಯರ ಸಂಯೋಜನೆಯಲ್ಲಿ ಮೂಡಿಬಂದ ಈ ನೃತ್ಯಭಾಗವು ಸಂಪ್ರದಾಯದ ಚೌಕಟ್ಟಿನಿಂದ ಹೊರಗೆ ಬಂದು ಭಾವಗೀತೆಯನ್ನು ಭಕ್ತಿಗೀತೆಯಂತೆ ಪ್ರದರ್ಶಿಸಿದ್ದು ಸ್ತುತ್ಯರ್ಹ.
ಇಂತಹ ಪ್ರಯೋಗಗಳು ಈಗಾಗಲೇ ಸಾಕಷ್ಟು ಯಶಸ್ವಿಯಾಗಿದ್ದರೂ ಸಾಂಪ್ರದಾಯಿಕ ನೃತ್ಯ ಪ್ರದರ್ಶನದಲ್ಲೂ ಕನ್ನಡದ ಭಾವಗೀತೆಗಳಿಗೆ ಜೀವ ತುಂಬುವ ಕಾರ್ಯಗಳು ಮತ್ತಷ್ಟು ಎಳೆ-ಯುವ-ಹಿರಿಯ ಕಲಾವಿದರಲ್ಲಿ ಮೂಡಿ ಬರಬೇಕು. ಆಗ ಕನ್ನಡದ ಸಾರಸ್ವತ, ಸಾಂಸ್ಕೃತಿಕ, ನೃತ್ಯ ಲೋಕ ಮತ್ತಷ್ಟು ತುಂಬಿಕೊಂಡು ಆಸ್ವಾದಪೂರ್ಣವಾಗುತ್ತದೆ.
(ಲೇಖಕರು ಸೃಜನಶೀಲ ಚಿಂತಕರು, ಸಂಘಟಕರು, ಆಕಾಶವಾಣಿ ಕಲಾವಿದರು, ಸಂಗೀತ ನೃತ್ಯ ಕಲಾವಿದರು)