Dance Research Conference 2013- report

Posted On: Saturday, February 16th, 2013
1 Star2 Stars3 Stars4 Stars5 Stars (No Ratings Yet)
Loading...

Author: Editor/ಸಂಪಾದಕಿ

MLC and well known academician Mr. P. V. Krishna Bhat has called upon the artists to think

about bringing innovative reforms in the present structure of art forms and to take up novel

He was speaking after inaugurating National Level Dance Convention organized by Noopura

Bhramari Dance Researchers’ Forum and Bharathiya Vidya Bhavan at the premises of

Bharatheeya Vidya Bhavan in Bangalore on Friday.

Highlighting the importance of such conferences, convention president and renowned historian

Dr. H S Gopal Rao said that this kind of reunions helps us to exchange various facts related

to dance and music and we can recall many valuable things. He stressed upon the importance

of study of dance history and life of unknown dancers. “No performing art form will survive

without the sponsor and encouragement. A dependent art form needs financial and moral

support’’ Rao said.

Speaking about the disagreements in the dance, Mr. Rao said “instead of arguing about the

greatness of `Marga’ and `Desi’ forms of dance, adopting both these forms will enhance the

beauty of dance’’.

In his presidential speech well known scholar and researcher Prof. T. V. Venkatachala Shastri

highlighted the importance of art research.

Well known dancer and artistic director of Meenakshi Sundaram Centre for Performing Arts

Smt Leela Ramanathan were felicitated with fife time achievement award `Noopura Kalaa

Kalahamsa’ on the occasion.

Prof Venkatachala Shastri released the first Indian dance research journal `Noopuraagama’ and

Noopura Bhramari Souvenir released by H.S.Gopal Rao. Noopura Bhramari website was also

re launched on the occasion. Noopura Bhramari trust founder president Mr. B G Narayana Bhat,

Dance researchers’ forum administrative section dean Mrs. Manorama B N and academic section

dean Mrs. Karuna Vijayendra were also present on the occasion.

Researchers from different parts of the country presented their research papers at the session.

Observers and senior dancers Mrs. B K Vasanthalaxmi, Mrs. Bhanumathi and Mrs. Malini

Ravishankar were exchanged their thoughts on these presented papers.

Former union minister and MP Mr. Ananth Kumar was the chief guest of the valedictory held in

the evening. In his speech Mr. Ananth Kumar said that western dance has limited its scope only

for entertainment where as Indian dance will take us to the world of spirituality. “Universities

should encourage Indian dance forums and dance shows. Regular dance shows should be

organized in cultural heritage sites like Ihole and Pattadakallu temples to encourage dance’’ he

Appreciating the achievements of Noopura Bhamari trust he said through encouraging research,

Noopura Bhramari has opened a new chapter in the field of dance research.

Another chief guest Kannada and culture minister Mr. Govinda M Karjola appreciated this

unique programme and said that Noopura Bhramari institute is working as a university. He

promised of all possible help from the government to the trust.

A best dance critic award `Vimarsha Vangmayi’ has been awarded to Vidwan Korgi

Shankaranaryana Upadhyaya on the occasion.

Bharatiya Vidya Bhavan director Mr. H N Suresh presided over the function and Adayma

Chetana president Tejaswini Ananthkumar was also present on the occasion. Valedictory was

followed by a research based dance presentation, construction of Chitra Purvaranga of Natya

Shastra and Navarasa Krishna.

 

ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯ ಪ್ರಧಾನ ಆಶ್ರಯ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಶುಕ್ರವಾರ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಅಖಿಲ ಭಾರತೀಯ ನೃತ್ಯ ಸಂಶೋಧನ ಸಮ್ಮೇಳನವು ಜರುಗಿತು. ಈ ಸಂದರ್ಭದಲ್ಲಿ ಭಾರತದ ಮೊಟ್ಟಮೊದಲ ನೃತ್ಯ ಸಂಶೋಧನ ನಿಯತಕಾಲಿಕೆ ನೂಪುರಾಗಮದ ಅನಾವರಣ, ಕರ್ನಾಟಕದ ನೃತ್ಯ ಕಲಾವಿದರ ವಿಶೇಷ ಸಂಶೋಧನ ಸಮೀಕ್ಷೆಯನ್ನೊಳಗೊಂಡ ನೂಪುರ ಭ್ರಮರಿ ವಿಶೇಷ ಸಂಚಿಕೆ ಮತ್ತು www.noopurabhramari.com ಪರಿಷ್ಕೃತ ಆವೃತ್ತಿ ಲೋಕಾರ್ಪಣೆಯೂ ಜರುಗಿತು.

ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರಾದ ಪಿ.ವಿ. ಕೃಷ್ಣ ಭಟ್ ಅವರು ಕಲಾಪ್ರಕಾರಗಳು ನಿಂತ ನೀರಾಗದೆ ಸಂಶೋಧನೆ ಮತ್ತು ಬದಲಾವಣೆಗಳ ಬಗ್ಗೆ ಯೋಚಿಸಬೇಕು. ಮನಬಂದಂತೆ ಬದಲಾವಣೆ ಆಗಬಾರದು. ಉತ್ತಮ ಬದಲಾವಣೆಗೆ ಸಾಧನೆ, ತಪಸ್ಸು ಅಗತ್ಯ. ಈ ನಿಟ್ಟಿನಲ್ಲಿ ನೃತ್ಯ ಸಂಶೋಧಕರ ಚಾವಡಿಯಂತಹ ವೇದಿಕೆ ನಿರ್ಮಾಣವಾಗಿರುವುದು ಸ್ತುತ್ಯರ್ಹ ಎಂದರು.

 

ಸಮ್ಮೇಳನ ಸಭಾಧ್ಯಕ್ಷತೆಯನ್ನು ವಹಿಸಿದ ಡಾ. ಎಚ್. ಎಸ್. ಗೋಪಾಲ ರಾವ್, ಹಿರಿಯ ಶಾಸನ/ಇತಿಹಾಸ ತಜ್ಞ, ಬೆಂಗಳೂರು ಇವರು ತಮ್ಮ ಆಶಯ ಭಾಷಣದಲ್ಲಿ ಸಂಗೀತವಾಗಲೀ, ನೃತ್ಯವಾಗಲೀ, ಕೆಲವೇ ಕೆಲವರಿಗಷ್ಟೇ ಸೀಮಿತವಾಗುವುದು ಒಳಿತಲ್ಲ. ಈ ನಿಟ್ಟಿನಲ್ಲಿ ತೆರೆದ ಮನಸ್ಸಿನ ವಿಚಾರ ವಿನಿಮಯ ಆಗುವುದರಿಂದ, ಮರೆತುಹೋಗಿರುವ ಎಷ್ಟೋ ವಿಷಯಗಳನ್ನು ನೆನಪು ಮಾಡಿಕೊಳ್ಳಬಹುದು. ಸ್ವಾತಂತ್ರ್ಯಾನಂತರ ಭಾರತದಲ್ಲಿ ನೃತ್ಯಕಲೆಗೆ ಗೌರವ ಲಭಿಸಿರುವುದನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಳ್ಳಬೇಕಾಗಿದೆ. ಈಗ ಉಳಿದು ಬಂದಿರುವ ನೃತ್ಯ ಕಲೆ ಸಾಗಿಬಂದಿರುವ ಹಾದಿಯನ್ನು ತಿಳಿಯುವ ಪ್ರಯತ್ನದಲ್ಲಿ ಅಜ್ಞಾತ ನೃತ್ಯ ಕಲಾವಿದರು ಅನುಭವಿಸಿರಬಹುದಾದ ನೋವು ಮತ್ತು ನಲಿವುಗಳ ಪರಾಮರ್ಶನೆ ಆಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಯಾವುದೇ ಆಶ್ರಯವಿಲ್ಲದೆ, ಪ್ರೋತ್ಸಾಹವಿಲ್ಲದೆ, ಒಂದು ಪ್ರದರ್ಶನ ಕಲೆ ಬೆಳೆಯುವುದು ಸುಲಭವಲ್ಲ. ಪರಾವಲಂಬಿಯಾದ ಯಾವುದೇ ಕಲೆ ಊರ್ಜಿತಗೊಳ್ಳಲು ಆರ್ಥಿಕ ನೆರವಿನ ಜೊತೆಗೆ ನೈತಿಕ ಬೆಂಬಲವೂ ಬೇಕು. ಭರತನ ಮಾರ್ಗವೇ ಅಂತಿಮ ಎಂದೇನೂ ಅಲ್ಲ. ಸ್ಥಳೀಯವಾದ ದೇಸಿಯೂ ನೃತ್ಯದ ಸೊಗಸನ್ನು ಹೆಚ್ಚಿಸಲು ಅವಕಾಶ ಕಲ್ಪಿಸಬಹುದು. ಮಾರ್ಗ ಮತ್ತು ದೇಸಿ ಎಂದು ವಾಗ್ವಾದಕ್ಕೆ ನಿಲ್ಲುವುದರ ಬದಲು ಎರಡರ ಸಹಯೋಗವನ್ನು ಸಾಧಿಸಿದರೆ ಪ್ರಮಾದವೇನೂ ಆಗಲಾರದು. ಇನ್ನೂ ಬೆಳಕಿಗೆ ಬಾರದಿರಬಹುದಾದ ನೃತ್ಯ ಸಂಬಂಧೀ ಕೃತಿಗಳನ್ನು ಪತ್ತೆ ಮಾಡುವ ಮತ್ತು ಬೆಳಕಿಗೆ ತರುವ ಪ್ರಯತ್ನಗಳು ಆಗಬೇಕಾಗಿದೆ. ಪ್ರದರ್ಶನ ಕಲೆಗೆ ಸಂಬಂಧಿಸಿದಂತೆ ವೇದಿಕೆಯ ಮುಂದೆ ಸಹೃದಯನ ಸ್ಥಾನದಲ್ಲಿ ಕೂರುವವರ ಬಗ್ಗೆ ಎಷ್ಟು ಗಂಭೀರ ಚಿಂತನೆಗಳನ್ನು ಮಾಡಲಾಗಿದೆ ಎಂದೂ ಪರಾಮರ್ಷಿಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಹೆಸರಾಂತ ಕನ್ನಡ ವಿದ್ವಾಂಸರು, ಸಂಶೋಧಕರಾದ ಪ್ರೊ. ಟಿ.ವಿ ವೆಂಕಟಾಚಲ ಶಾಸ್ತ್ರಿ ಅವರು ವಹಿಸಿ ಕರ್ನಾಟಕದ ಕಲಾವಿಶೇಷಗಳ ಕುರಿತು ಮಾತನಾಡಿ ಸಂಶೋಧನೆಯ ಅಗತ್ಯವನ್ನು ಸ್ಪಷ್ಟಪಡಿಸಿದರು. ಈ ಸಂದರ್ಭ ಹಿರಿಯ ನೃತ್ಯ ಕಲಾವಿದೆ ಲೀಲಾ ರಾಮನಾಥನ್ ಅವರಿಗೆ ನೂಪುರ ಕಲಾ ಕಲಹಂಸವೆಂಬ ಬಿರುದನ್ನಿತ್ತು ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೃತ್ಯ ಸಂಶೋಧಕರ ಚಾವಡಿಯ ಶೈಕ್ಷಣಿಕ ವಿಭಾಗ ಮುಖ್ಯಸ್ಥೆ ಡಾ.ಕರುಣಾ ವಿಜಯೇಂದ್ರ ಕಾರ್ಯಕ್ರಮ ನಿರೂಪಿಸಿದರೆ ಸಂಪಾದಕಿ, ಆಡಳಿತ ವಿಭಾಗ ಮುಖ್ಯಸ್ಥೆ ಮನೋರಮಾ ಬಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ವಂದಿಸಿದರು. ಸಲಹಾಸಮಿತಿ ಅಧ್ಯಕ್ಷರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು ಸಮ್ಮೇಳನಕ್ಕೆ ನೀಡಿದ ಆಡಿಯೋ ಸಮ್ದೇಶವನ್ನು ಬಿತ್ತರಿಸಲಾಯಿತು. ಹೆಸರಾಂತ ಸಂಶೋಧಕ ಸೂರ್ಯನಾಥ ಕಾಮತ್ ಅವರ ಸಂದೇಶವನ್ನು ತಿಳಿಸಲಾಯಿತು. ಸಭೆಯಲ್ಲಿ ನೂಪುರ ಭ್ರಮರಿಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಜಿ.ನಾರಾಯಣ ಭಟ್ ಉಪಸ್ಥಿತರಿದ್ದರು.

ತದನಂತರ ಭಾರತದ ಹಲವು ಪ್ರದೇಶಗಳಿಂದ ಆಗಮಿಸಿದ್ದ ಸಂಶೋಧಕರು ೧೩ ಸಂಶೋಧನ ಪ್ರಬಂಧಗಳನ್ನು ಮಂಡಿಸಿದರು. ತಜ್ಞನೋಟಕರಾಗಿ ಆಗಮಿಸಿದ್ದ ಹಿರಿಯ ನೃತ್ಯ ಕಲಾವಿದರಾದ ಬಿ.ಕೆ.ವಸಂತಲಕ್ಷ್ಮಿ, ಭಾನುಮತಿ ಮತ್ತು ಮಾಲಿನಿ ರವಿಶಂಕರ್ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಅನಂತ ಕುಮಾರ್ ಮಾತನಾಡಿ ನೃತ್ಯದ ಅಧ್ವರ್ಯು ನಟರಾಜನ ಕಲ್ಪನೆ ದೊರೆತಿರುವುದು ಬಾದಾಮಿಯ ಗುಹೆಗಳಲ್ಲಿ. ಅನ್ಯನೃತ್ಯಗಳ ಅಮಲಿನಲ್ಲಿ ಓಡಾಡುತ್ತಿರುವ ಯುವಜನಾಂಗ ಶಾಸ್ತ್ರೀಯ ನೃತ್ಯಗಳತ್ತ ಗಮನ ಹರಿಸಿದರೆ ಇಂತಹ ಹಲವು ಸಂಗತಿಗಳು ಬೆಳಕಿಗೆ ಬರುತ್ತವೆ. ಪಾಶ್ಚಾತ್ಯ ನೃತ್ಯಗಳು ಮನರಂಜನೆಗೆ ಸೀಮಿತವಾದರೆ, ಭಾರತೀಯ ನೃತ್ಯಗಳು ಅಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯಲು ನೆರವಾಗುತ್ತವೆ. ಈ ನಿಟ್ಟಿನಲ್ಲಿ ನೃತ್ಯಶಾಸ್ತ್ರೀಯ ಪ್ರಸ್ತುತಿಗಳು ವಿಶ್ವವಿದ್ಯಾನಿಲಯಗಳ ಬಯಲುರಂಗಮಂದಿರಗಳಲ್ಲಿ ಮೂಡಿಬಂದು ಭವ್ಯವಾಗಿಸಬೇಕು. ಐಹೊಳೆ, ಪಟ್ಟ್ತದಕಲ್ಲು ಇತ್ಯಾದಿ ಸಾಂಸ್ಕೃತಿಕ ಕುರುಹುಗಳಿರುವಲ್ಲಿ ನೃತ್ಯದ ಪ್ರದರ್ಶನ ಅವ್ಯಾಹತವಾಗಿ ಮುಂದುವರಿಯಬೇಕು. ವಿಶ್ವವಿದ್ಯಾನಿಲಯಗಳು ನಾಟ್ಯಪ್ರಕಾರದ ವೇದಿಕೆಗಳನ್ನು ಪ್ರೋತ್ಸಾಹಿಸಬೇಕು. ಎಲ್ಲಾ ಕಲೆಗಳಲ್ಲೂ ಅಧ್ಯಯನಕ್ಕೆ ಅವಕಾಶವಿದ್ದರೂ ಸಂಶೋಧನಾತ್ಮಕ ಕೆಲಸಗಳು ನಡೆಯುವುದು ಕಡಿಮೆ. ಆದರೆ ನೂಪುರ ಭ್ರಮರಿಯ ಪ್ರಯತ್ನ ನೃತ್ಯ ಸಂಶೋಧನೆಯ ವಿಷಯದಲ್ಲಿ ಹೆಚ್ಚಿನ ಸಾಧ್ಯತೆ ಅವಕಾಶಗಳನ್ನೀಯುತ್ತಿದ್ದು ನಾಟ್ಯಶಾಸ್ತ್ರದಲ್ಲಿ ಅಧ್ಯಯನ ನಡೆಸಲು ಹಕಾರ ನೀಡುತ್ತಿದೆ. ಭವಿಷ್ಯದಲ್ಲಿ ಈ ಸಂಸ್ಥೆಯ ಪ್ರಯತ್ನಗಳಿಗೆ ಸರ್ಕಾರ ಉತ್ತಮ ಪ್ರೋತ್ಸಾಹವನ್ನಿತ್ತು ಬೆಳೆಸಬೇಕು. ಈ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲವು ಸರ್ಕಾರದಿಂದ ಯುಕ್ತವಾಗುತ್ತದೆ ಎಂದರು.

ಸಮಾರಂಭದ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಮಾತನಾಡಿ ನೂಪುರ ಭ್ರಮರಿ ಸಂಸ್ಥೆಯು ಮಹಾವಿದ್ಯಾಲಯದಂತೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸರ್ಕಾರದಿಂದ ಎಲ್ಲಾ ಸಹಾಯಗಳನ್ನು ಈ ನಿಟ್ಟಿನಲ್ಲಿ ಕೊಡಿಸುವುದಾಗಿ ಭರವಸೆಯನಿತ್ತರು.

ಈ ಸಂದರ್ಭ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆಪ್ರಶಸ್ತಿಯನ್ನು ವಿಮರ್ಶಾ ವಾಙ್ಮಯಿ ಬಿರುದಿನೊಂದಿಗೆ ಪ್ರದಾನ ಮಾಡಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್.ಎನ್.ಸುರೇಶ್ ಅವರು ಮಾತನಾಡಿ ನೂಪುರ ಭ್ರಮರಿಯಿಂದ ಆಯೋಜಿಸಿದ ನೃತ್ಯ ಸಂಶೋಧನ ಸಮ್ಮೇಳನ ನಿಜಕ್ಕೂ ಕಠಿನ ಕೆಲಸ. ಅದನ್ನು ಸರ್ವರೂ ಮುಕ್ತ ಮನಸಿನಿಂದ ಶ್ಲಾಘಿಸಬೇಕು. ಭಾರತೀಯ ವಿದ್ಯಾ ಭವನ ಇಂತಹ ಗುರುತರವಾದ ಕಾರ್ಯಗಳನ್ನು ಎಂದೆಂದಿಗೂ ಗೌರವಿಸಿ ಸಹಕಾರ ನೀಡುತ್ತದೆ ಎಂದರು. ಸಮಾರಂಭದಲ್ಲಿ ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಹಾಜರಿದ್ದು ರಾಜ್ಯಮಟ್ಟದ ನೃತ್ಯ ರಸಪ್ರಶ್ನೆ ಮತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಪ್ರಶಸ್ತಿ ನೀಡಿ ಗೌರವಿಸಿದರು. ಮನೋರಮಾ ಬಿ.ಎನ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

ನಂತರ ಸಂಶೋಧನಾಧರಿತವಾದ ನಾಟ್ಯಾಶಾಸ್ತ್ರ, ಚಿತ್ರ ಪೂರ್ವರಂಗ ಮತ್ತು ನವರಸಕೃಷ್ಣ ನೃತ್ಯಪ್ರಸ್ತುತಿಗಳು ಹಲವು ಕಲಾವಿದರಿಂದ ನಡೆದವು.        

 

Leave a Reply

*

code