Author: ಸಂಪಾದಕಿ
ನೃತ್ಯಕ್ಕೆ ಸಂಬಂಧಿಸಿದಂತೆ ಪ್ರದರ್ಶನ ನೀಡುವ ಹಂತದ ಹಲವು ಸ್ಪರ್ಧೆಗಳನ್ನು ಈ ಕಲಾಕ್ಷೇತ್ರದಲ್ಲಿ ನಾವು ಕಾಣುತ್ತಲೇ ಬಂದಿದ್ದೇವೆ. ಆದರೆ ಶೈಕ್ಷಣಿಕವಾಗಿ ಮಕ್ಕಳನ್ನು ನೃತ್ಯೋನ್ಮುಖರನ್ನಾಗಿಸುವ ಸಂಬಂಧೀ ಅವಕಾಶಗಳು ಸ್ಪರ್ಧೆಯ ಮಟ್ಟದಲ್ಲಿ ತೀರಾ ವಿರಳ. ಈ ಕೊರತೆಯನ್ನು ಅರಿತು ನೃತ್ಯ ಸಂಶೋಧಕರ ಚಾವಡಿಯು ನೃತ್ಯ ಸಂಶೋಧನ ಸಮ್ಮೆಳನದ ಅಂಗವಾಗಿ ಚಾವಡಿಯ ಸದಸ್ಯರ ಶಿಕ್ಷಣ ಸಂಸ್ಥೆಗಳಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ರಾಜ್ಯಾದ್ಯಂತ ಸುಮಾರು ೪೦೦ಕ್ಕೂ ಹೆಚ್ಚು ಮಂದಿ ಆಯಾಯ ಜಿಲ್ಲಾ ಕೇಂದ್ರಗಳ ಪ್ರಾಥಮಿಕ ಸುತ್ತಿನಲ್ಲಿ ಭಾಗವಹಿಸಿ ವಿಜೇತರಾದ ಸುಮಾರು ೪೦-೫೦ ಮಂದಿ ವಿದ್ಯಾರ್ಥಿಗಳು ಫೈನಲ್ಸ್‌ಗೆ ಆಯ್ಕೆಯಾಗಿದ್ದರು. ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾದರೆ; ವಿಜಯಶಾಲಿಯಾದವರಿಗೆ ಪ್ರಶಸ್ತಿ ಫಲಕ ಮತ್ತು ಪದಕ ಪುಸ್ತಕ, ಪ್ರಮಾಣಪತ್ರ ವಿತರಿಸಲಾಯಿತು. ಈ ಎಲ್ಲಾ ವಿದ್ಯಾರ್ಥಿಗಳು ಸಮ್ಮೇಳನ ಸಂದರ್ಭ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಅವರಿಂದ ಪ್ರಶಸ್ತಿ ಪಡೆದುಕೊಂಡರು.
ವಿಜೇತರಿಗೂ, ಭಾಗವಹಿಸಿದ ಅಭ್ಯರ್ಥಿಗಳೆಲ್ಲರಿಗೂ ಅಭಿನಂದನೆಗಳು. ಅವರೆಲ್ಲರ ಭವಿತವ್ಯ ನೃತ್ಯದ ಹಾದಿಯಲ್ಲಿ ಉಜ್ವಲವಾಗಿ ಬೆಳಗಲಿ.
ಕರ್ನಾಟಕದಲ್ಲೇ ವಿಶಿಷ್ಟವಾಗಿ ಸಂಘಟಿತವಾದ ಈ ಸ್ಪರ್ಧೆ ಸಾಕಷ್ಟು ಸವಾಲುಗಳನ್ನು ಕಂಡಿತ್ತು ಕೂಡಾ. ಆದಾಗ್ಯೂ ಚಾವಡಿಯ ಶೈಕ್ಷಣಿಕ ವಿಭಾಗ ಮತ್ತು ದಾಖಲೀಕರಣ ವಿಭಾಗದ ಹಿರಿಯ ಕಲಾವಿದರು ಸಂಘಟಿಸಿದ ಈ ಸ್ಪರ್ಧೆಗಳು ಮೂರು ಸುತ್ತುಗಳಲ್ಲಿ ನಡೆದು ಅಂತಿಮ ಹಂತವು ಬೆಂಗಳೂರಿನ ಬಸವನಗುಡಿಯ ಗೌರೀ ನಾಟ್ಯಶಾಲೆಯಲ್ಲಿ ಜರುಗಿತ್ತು. ಈ ಹಿನ್ನೆಲೆಯಲ್ಲಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಕರುಣಾ ವಿಜಯೇಂದ್ರ, ಶಾಲಿನಿ ವಿಠಲ್, ವಿದ್ಯಾ, ಪದ್ಮಿನಿ ಕುಮಾರ್ ಮತ್ತು ಗೌರೀ ನಾಟ್ಯಶಾಲೆಯ ಸರ್ವ ಸದಸ್ಯರೂ ಅಭಿನಂದನಾರ್ಹರು.
೮-೧೫ವರ್ಷದ ಮಕ್ಕಳಿಗೆ ಏರ್ಪಡಿಸಲಾದ ರಸಪ್ರಶ್ನೆ ಸ್ಪರ್ಧೆಯು ರೋಚಕವಾಗಿದ್ದು; ಕೆಳಕಂಡ ವಿದ್ಯಾರ್ಥಿಗಳು ಬಹುಮಾನವನ್ನು ಪಡೆದುಕೊಂಡರು.
ಪ್ರಥಮ- ಪ್ರಿಯಾಂಕ ಎಸ್.ಶೆಟ್ಟಿ, ಬೆಳಗಾವಿ
ದ್ವಿತೀಯ-ಅನುಶ್ರೀ ಎಸ್. ಭಟ್, ಬೆಳಗಾವಿ
ತೃತೀಯ-ಅನರ್ಘ್ಯ ಎಂ, ಬೆಂಗಳೂರು
೧೫-೨೦ ವರ್ಷದ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಷಯ – ‘ನೃತ್ಯ ನನ್ನ ದೃಷ್ಟಿಯಲ್ಲಿ’ ಎಂಬುದಾಗಿದ್ದು ; ನೃತ್ಯವನ್ನು ವಿದ್ಯಾರ್ಥಿಗಳು ಕಂಡುಕೊಳ್ಳುವ ದೃಷ್ಟಿ ಮತ್ತು ಅನುಭವವನ್ನು ವಿಶ್ಲೇಷಿಸುವ ಕಾರ್ಯ ಗುರುತರವಾಗಿ ಜರುಗಿತ್ತು.
ಪ್ರಥಮ- ಅರ್ಪಿತಾ ವಿ. ಹಳಕಟ್ಟಿ, ಬೆಳಗಾವಿ.
ದ್ವಿತೀಯ- ಶಮಂತಾ ಮನೋಗರನ್, ಬೆಂಗಳೂರು.