ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಎಂಬ ಪ್ರಶ್ನೆಯಿಂದ ಮೊದಲ್ಗೊಂಡು ನೃತ್ಯದ ಹಲವು ಆಯಾಮಗಳತ್ತ ಹೊರಳಿಕೊಳ್ಳುವ ಅಗತ್ಯ ನಮ್ಮದುರಿಗೆ ಸದಾ ಇದೆ. ಇಂತಹ ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ ; ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಇದು ಚಿಂತನೆಗಳ ಚಾವಡಿ. ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು ಈ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ರಂಗ ಚಟುವಟಿಕೆಗಗಳ ಬಗೆಗಿನ ಎಲ್ಲಾ ಪ್ರಶ್ನೋತ್ತರ, ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.
It is a discussion platform to enhance and expand our horizon of thinking. Readers from different strata of society can participate. Either you can pose a question or opinion otherwise you can also contribute your answers and explanations for specific topic.