ಅಂಕಣಗಳು

Subscribe


 

ಹಸ್ತ ಮಯೂರಿ- Interdisciplinary study on Hasta-Mudra

ಯಾವುದೇ ನೃತ್ಯದ ಆಂಗಿಕಾಭಿನಯದಲ್ಲಿ ಮುಖ್ಯವಾದದ್ದು ಹಸ್ತಮುದ್ರೆಗಳು. ನಾನಾಭಾವನೆಗಳನ್ನು ಸೂಚಿಸಲು ನಾನಾ ಹಸ್ತಗಳನ್ನು ಬಳಸಲಾಗುತ್ತದೆ. ಉದ್ದಿಷ್ಟಾರ್ಥದ ಅಭಿವ್ಯಂಜನೆಗೆ, ಧ್ಯಾನಾನುಕೂಲತೆಗೆ, ಶರೀರ ಸೌಖ್ಯ ಹತೋಟಿಗೆ ಬಳಸಲಾಗುವ ಹಸ್ತಗಳು ಶಾಸ್ತ್ರರೀತ್ಯಾ ನರ್ತನಪ್ರಕಾರಗಳಲ್ಲಿ ಬಳಸಲ್ಪಡುತ್ತದೆ. ಆದರೆ ಹಲವರಿಗೆ ಆ ಹಸ್ತಗಳ ನಿರ್ದಿಷ್ಟ ಪರಿಚಯ, ಅವು ಮಾಡುವ ಸಂವಹನ ಸಾಧ್ಯತೆಗಳ ಬಗೆಗೆ ಅಷ್ಟಾಗಿ ಅರಿವಿಲ್ಲ. ಈ ನಿಟ್ಟಿನಲ್ಲಿ ನೃತ್ಯಕ್ಷೇತ್ರದಲ್ಲಿ ವಿವರಿಸಲಾದ ಹಸ್ತಮುದ್ರೆಗಳ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನ ಹಸ್ತ ಮಯೂರಿ ಪ್ರತೀ ಸಂಚಿಕೆಗೊಂದರಂತೆ ಹಸ್ತಮುದ್ರೆಗಳ ಲಕ್ಷಣ, ವಿನಿಯೋಗ ಅವುಗಳ ಬಳಕೆ, ಮತ್ತು ಇತರ ಸಾಧ್ಯತೆಗಳ ಕುರಿತಂತೆ ಕಿರುಪರಿಚಯವನ್ನು ಮಾಡಿದೆ. ಇದರ ಸಮಗ್ರ ಮಾಹಿತಿಯು ಡಾ.ಮನೋರಮಾ ಬಿ ಎನ್ ಅವರ ಸಂಶೋಧನೆ- ಮುದ್ರಾರ್ಣವ ಎಂಬ ಕೃತಿಯಲ್ಲಿ ಲಭ್ಯವಿದೆ.

ಪ್ರತಿಯೊಂದು ಹಸ್ತಗಳ ಬಳಕೆ, ವಿನಿಯೋಗವಷ್ಟೇ ಅಲ್ಲದೆ, ಅದರ ಮೂಲ ಕಲ್ಪನೆಯ ಬಗೆಗೆ ಮತ್ತು ದೈನಂದಿಕ ಜೀವನದಲ್ಲಿ ಅದರ ಪಾತ್ರವನ್ನು ವಿವೇಚಿಸುವುದು ಹಸ್ತಮಯೂರಿಯ ಉದ್ದೇಶ. ಜೊತೆಗೆ ನೃತ್ಯದ ಆರೋಗ್ಯಮುಖಗಳನ್ನೂ ನೋಡಬೇಕೆಂಬುದು ಹಂಬಲ. ನೃತ್ಯದಲ್ಲಿ ಬಳಸುವ ಹಸ್ತಗಳನ್ನು, ಅದರ ಆರೋಗ್ಯ ಸಂಬಂಧಿ ವಿಚಾರಗಳನ್ನು ಸಂಚಿಕೆಗೊಂದರಂತೆ ಪ್ರಸ್ತುತಪಡಿಸುತ್ತಲಿದ್ದೇವೆ. ನೃತ್ಯವೆಂಬುದು ಮನರಂಜನೆ ಮಾತ್ರವಲ್ಲ, ಅದು ಆರಾಧನೆ; ಅದು ಸಂವಹನ ; ಕಲಿಯುವಾತನಿಗೂ, ಕಲಿಸುವಾತನಿಗೂ, ಕಲಾವಿದನಿಗೂ ಮಾನಸಿಕ ಶಿಕ್ಷಣ ಕೂಡಾ!

(ವಿ.ಸೂ : ಹಸ್ತ ವಿನಿಯೋಗದಲ್ಲಿ ಕಂಡುಬರುವ ಅಂಶಗಳು ನಂದಿಕೇಶ್ವರನ ಅಭಿನಯ ದರ್ಪಣದಿಂದಲೂ, ಇತರೆ ವಿನಿಯೋಗಗಳು ನೃತ್ಯ ಶಾಸ್ತ್ರಕ್ಕೆ ಸಂಬಂಧಿಸಿದ ನಾಟ್ಯಶಾಸ್ತ್ರ, ಸಂಗೀತ ರತ್ನಾಕರ, ನರ್ತನ ನಿರ್ಣಯ, ಲಾಸ್ಯ ರಂಜನ, ಸಾರ ಸಂಗ್ರಹ, ಹಸ್ತ ಮುಕ್ತಾವಳಿ, ಹಸ್ತ ರತ್ನಾವಳಿ,ಭರತಾರ್ಣವ, ಭರತಸಾರ, ಪತಂಜಲಿ ಯೋಗ ಶಾಸ್ತ್ರ ಮುಂತಾದವುಗಳಿಂದ, ಸಂಶೋಧನೆಗಳಿಂದ ಉಲ್ಲೇಖಿತ.)

This column brings the interdisciplinary aspects of Hasta-Mudra which is used not only in various dances; but also Purana, Veda, Health issues, Yoga, common public life, communication aspects, folk and etc. This is a study conducted by Editor-Dr Manorama B.N ; which is also published as a book called “Mudrarnava” ( 2010). Further aspects and detailed version of dealing Hasta Mudra can be referred in the book. Every issue of Journal has focused on each hastha Mudra and its nuances.
The book mentioned the Hasta elements from many treatises, such as – Natya Shastra, Abhinaya Darpana, Sangita ratnakara, Manasollasa, Hastalakashana deepika, Lasya ranjana, Nartana nirnaya, Bharatarnava, Bharatasara, and Agamas, Puranas, Patanjali yoga shastra etc. If you are quoting this study in any research or publication prior permission by editor is compulsory.

ಕೀಲಕ ಹಸ್ತ

ಕೀಲಕ ಹಸ್ತ

Posted On: January 29th, 2014 by
ಪಾಶ ಹಸ್ತ

ಪಾಶ ಹಸ್ತ

Posted On: December 29th, 2013 by
ಸಂಪುಟ ಹಸ್ತ

ಸಂಪುಟ ಹಸ್ತ

Posted On: October 15th, 2013 by
ಚಕ್ರ ಹಸ್ತ

ಚಕ್ರ ಹಸ್ತ

Posted On: August 15th, 2013 by
ಶಂಖಹಸ್ತ

ಶಂಖಹಸ್ತ

Posted On: June 15th, 2013 by
ಶಕಟ ಹಸ್ತ

ಶಕಟ ಹಸ್ತ

Posted On: April 14th, 2013 by

ಕಟಕಾವರ್ಧನ ಹಸ್ತ

Posted On: February 15th, 2013 by
ಉತ್ಸಂಗ ಹಸ್ತ

ಉತ್ಸಂಗ ಹಸ್ತ

Posted On: September 15th, 2012 by
ಪುಷ್ಪಪುಟ ಹಸ್ತ

ಪುಷ್ಪಪುಟ ಹಸ್ತ

Posted On: August 15th, 2012 by
ಡೋಲಾಹಸ್ತ

ಡೋಲಾಹಸ್ತ

Posted On: June 15th, 2012 by