ಪತ್ರಿಕೆಯೊಂದನ್ನು, ಅದೂ ಯಾವುದೇ ಜಾಹೀರಾತಿನ ನೆರವಿಲ್ಲದ, ಭಾರೀ ಆರ್ಥಿಕ ಹಿನ್ನಲೆಯೂ ಇಲ್ಲದ ಪತ್ರಿಕೆಯೊಂದನ್ನು ಮುನ್ನಡೆಸುವುದು ಎಷ್ಟು ಕಷ್ಟ ಅನ್ನುವುದು ನಿಮಗೆ ತಿಳಿದಿದೆ. ಅದರಲ್ಲೂ ಯಾವುದೇ ಲಾಭದ ದೃಷ್ಠಿಯಿಲ್ಲದೆ ಸಮಷ್ಠಿಯ ಒಳಿತಿಗಾಗಿ, ಕಲೆಗೆ ಪುಟ್ಟ ಕಾಣಿಕೆ ನೀಡುವಲ್ಲಿ ಪತ್ರಿಕೆಯೊಂದು ರೂಪುಗೊಳ್ಳುತ್ತಿದೆ ಎಂದಾದಲ್ಲಿ ಅದರ ಹಿಂದಿನ ಸವಾಲುಗಳು ನಿಮಗರಿವಿರಬಹುದು. ರೂಪುಗೊಳ್ಳುತ್ತಿರುವುದರಿಂದ ಆದರೂ ಪುಟ್ಟ ಪುಟ್ಟ ಅಡಿಯಿಡುತ್ತಿರುವ ನೂಪುರ ಭ್ರಮರಿಯು ತನ್ನ ಲೇಖನಗಳ ಹಂಚಿಕೆ, ಮುದ್ರಣ, ವಿತರಣೆಗೆ ಬಹಳಷ್ಟು ಸಲ ಸ್ವಾವಲಂಬಿ ನೀತಿಯನ್ನು ಅಂದರೆ ಸ್ವಂತ ಖರ್ಚು-ಉಳಿತಾಯವನ್ನು ಅವಲಂಬಿಸಿದೆ. ಆದರೂ ಕಲಾಸಕ್ತರು ತಾವೇ ಮುಂದೆ ಬಂದು ತಮ್ಮಿಂದಾದಷ್ಟೂ ಸಹಕಾರ, ಪ್ರೋತ್ಸಾಹವನ್ನೀಯುತ್ತೀದ್ದಾರೆ. ಇದರ ಬೆಳವಣಿಗೆಯಲ್ಲಿ ಪತ್ರಿಕೆಯ ಬಳಗದವರಷ್ಟೇ ಅಲ್ಲ; ಓದುಗ, ಕಲಾವಿದರ ಪಾತ್ರವೂ ಇದೆಯಲ್ಲವೇ?
Please extend your supporting hands to us. The Journal is and website is not with the intention of marketing mind. It is a effort to find out our roots, enhance our thoughts, help the artists, strengthen our way. So please extend your co-operation. Your helping hands will define the path towards specific cause.