ಪ್ರಸ್ತುತ ನೃತ್ಯಕ್ಕೆ ಸಂಬಂಧಿಸಿದಂತೆ ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಆವಶ್ಯಕತೆ ಎದ್ದು ಕಾಣಿಸುತ್ತದೆ. ಪತ್ರಿಕೋದ್ಯಮದಲ್ಲಿದ್ದು; ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿದ ಪರಿಣಾಮವೇ ಈ ಪತ್ರಿಕೆ.
ಪತ್ರಿಕೆಯ ತಂತ್ರಾಂಶ-ಪ್ರತಿಯು ಈ ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆದಾಗ್ಯೂ ತಾವು ಪತ್ರಿಕೆಗೆ ಡೊನೇಷನ್ ಕಳಿಸಿಕೊಟ್ಟಲ್ಲಿ ಪತ್ರಿಕೆಯ ಆಮೂಲಾಗ್ರ ಬೆಳವಣಿಗೆಗೆ ನಿಮ್ಮಿಂದ ಸಹಕಾರ ಸಂದಂತಾಗುತ್ತದೆ. ನಿಮ್ಮ ಹಣ, ನಿಮ್ಮದೇ ಆದ ಕಲೆಯ ಸದ್ವಿನಿಯೋಗಕ್ಕಾಗಿ…-ಸಂಪಾದಕರು
This journal has been started in the aim to serve the unique responsibility toward establishing the various aspects of performing arts, by establishing and enhancing the inter-relationships between allied artforms. This journal worked towards building the standards in Cultural Journalism. This journal is platform for Shastra+Prayoga= to emphasize the relationship between practice and theory.