ಅಂಕಣಗಳು

Subscribe


 

ನೂಪುರ ಭ್ರಮರಿಯ ವಾರ್ಷಿಕ ಸಂಚಿಕೆ ಉತ್ತಮ ಮಾಹಿತಿ ಸಂಕಲನ

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಪ್ರಭಾಕರ ಜೋಷಿ, & ಕೇಶವ ಭಟ್

ನೂಪುರ ಭ್ರಮರಿಯ ವಾರ್ಷಿಕ ವಿಶೇಷ ಸಂಚಿಕೆ ಒಂದು ಉತ್ತಮ ಮಾಹಿತಿ ಸಂಕಲನ. ಆಸಕ್ತರಿಗೆ, ಸಂಶೋಧಕರಿಗೆ ಉಪಯುಕ್ತ. ಈ ಸಂಗ್ರಹಕ್ಕಾಗಿ ಅಭಿನಂದನೆ.

-ಡಾ.ಪ್ರಭಾಕರ ಜೋಷಿ, ಹೆಸರಾಂತ ಯಕ್ಷಗಾನ ಅರ್ಥಧಾರಿ, ವಿದ್ವಾಂಸರು, ಮಂಗಳೂರು.

ಸಂಪುಟ ೬. ಸಂಚಿಕೆ ೧. ಪುಟ ೫೫ರಲ್ಲಿನ ರಂಗಸ್ಥಳ ಅಂಕಣದ ಭಟ್ಟರ ಪಟ್ಟು ಲೇಖನದ ಕುರಿತು ಅನಿಸಿಕೆ; ಜಿಜ್ಞಾಸೆ. ಯಾವನೇ ಅರ್ಥಧಾರಿ ಇದಿರಾಳೀಯ ಪ್ರಶ್ನೆಗೆ ಚಡಪಡಿಸುವುದು; ಉತ್ತರ ತೇಲಿಸುವುದು ಇದ್ದದ್ದೇ. ಆದರೆ ಸದ್ರಿ ಲೇಖನದಲ್ಲಿ ಹೇಳಿದ ಪರಶುರಾಮನ ಪ್ರಶ್ನೆ; ಅದಕ್ಕೆ ಭೀಷ್ಮನ ಅರ್ಥಧಾರಿ ಉತ್ತರಿಸಲು ಆಗದ್ದು ಎಂಬುದು ಆ ಪಾತ್ರಧಾರಿಗೆ ಅನ್ಯಾಯ ಮಾಡುತ್ತದೆ. ಕಾರಣ ಸದ್ರಿ ಪ್ರಶ್ನೆ- ಪ್ರತಿಜ್ಞಾಬದ್ಧನಾದ ಬ್ರಹ್ಮಚಾರಿ ವಿವಾಹ ಪಣವಿಟ್ಟಲ್ಲಿ ಹೋದದ್ದೇಕೆಎಂಬುದು ಕೂಡಾ ಹಳೆಯ ಮತ್ತು ಕಷ್ಟದಲ್ಲಿದ್ದ ಪ್ರಶ್ನೆ. ಅದಕ್ಕೆ ಅಗ್ರಗಣ್ಯ ಭೀಷ್ಮ ಅರ್ಥಧಾರಿ ಉತ್ತರಿಸಲು ಕಷ್ಟಪಟ್ಟರೆಂಬುದು ನಂಬಲು ಕಷ್ಟ. ಅಲ್ಲದೆ ಪಟ್ಟು ಹಿಡಿದು ಪ್ರಶ್ನಿಸಿದರೆ ಅದರ ಉತ್ತರಗಳು ತೀವ್ರವಾಗಿರುತ್ತಿದ್ದವು.

ತಾಳಮದ್ದಳೆ ಪ್ರಿಯ, ಕಾರ್ಕಳ.

ನರ್ತನ ವಿಭಾಗದ ನವೀನ ಆವಿಷ್ಕಾರವಾಗಿ ಹೊರಬರುತ್ತಿರುವ ನೂಪುರ ಭ್ರಮರಿ ಸಂಚಿಕೆಯ ಆಕಾರ, ಅಲಂಕಾರಗಳು ವಿಶೇಷವಾಗಿದೆ. ಉದಾಹರಣೆಗೆ ಸಂಚಿಕೆ ೫, ಸಂಪುಟ ೫ರ ಸಂಚಿಕೆಯು ನುಡಿನಮನಗಳಿಂದೊಡಗೂಡಿ ಮಾತು ಮೀರದ ಮಂಜುನಾಥನನ್ನೂ ನೆನವರಿಕೆ ಮಾಡಿಕೊಟ್ಟದ್ದು ವೈಶಿಷ್ಟ್ಯವೆನ್ನಬಹುದು. ಅದರಲ್ಲೂ ಹಳೆ ಸಂಪ್ರದಾಯಗಳಿಗೆ ಹೊಸ ಆಯಾಮ ನೀಡಿ ಮರೆಯಾದ ಹಿರಿಪ್ರತಿಭೆ, ಶ್ರೀಕ್ಷೇತ್ರ ಧರ್ಮಸ್ಥಳ ಮೇಳದ ಪಾತ್ರ ಧರ್ಮಿಷ್ಠರಾದ ಹೊಸಹಿತ್ತಿಲು ಮಹಾಲಿಂಗ ಭಟ್ ಅವರನ್ನು ರಾಕೇಶ್ ಕುಮಾರ್ ಕಮ್ಮಜೆಯವರು ಸ್ಮರಿಸಿಕೊಂಡಿದ್ದಾರೆ.. ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರ ಕುರಿತಾಗಿ ಖುದ್ದು ಸಂಪಾದಕಿ ಮನೋರಮಾ ಅವರೇ ಸವಿವರ ನೀಡಿದ್ದಾರೆ. ನೂತನ ಅವಿಷ್ಕಾರವನ್ನು ದೃಢೀಕರಿಸಲು ಇವಿಷ್ಟು ಸಾಲದೇ? ಅಭಿನಂದನೆಗಳು.

-ಕೀರಿಕ್ಕಾಡು ವನಮಾಲಾ ಕೇಶವ ಭಟ್, ಕಾಸರಗೋಡು.

 

 

Leave a Reply

*

code