Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 8ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ಪ್ರಕೃತ ಕಂತಿನಲ್ಲಿ ನವರಸಗಳನ್ನೂ ಲೀಲಾಮಾನುಷವಿಗ್ರಹನಾದ ಕೃಷ್ಣನಿಗೆ ಆಶ್ರಯಿಸಿ ಸಂಸ್ಕೃತ ಭಾಷೆಯಲ್ಲಿ ರಚಿಸಲಾದ ’ಶ್ರೀಕೃಷ್ಣರಸಗೀತಿಕಾ (ನವರಸಕೃಷ್ಣ)’ವನ್ನು ಪ್ರಕಟಿಸಲಾಗಿದೆ. ಈ ರಚನೆಯಲ್ಲಿ ಒಂಭತ್ತು ರಸಪ್ರಕಾರಗಳಷ್ಟೇ ಅಲ್ಲದೆ, ಧೀರ ಮತ್ತು ವಾತ್ಸಲ್ಯ ಎಂಬುದಾಗಿ ಸ್ವತಃ ಶತಾವಧಾನಿ ಗಣೇಶರೇ ಶ್ರೇಣೀಕರಿಸಿದ ಮತ್ತೆರಡು ರಸವಿವೇಚನೆಗೆ ಸಂಬಂಧಿಸಿದ ಸನ್ನಿವೇಶ- ಸಾಲುಗಳನ್ನು ಕಾಣಬಹುದು. ಜೊತೆಗೆ ರಸವಿವೇಚನೆಗೆ ಒಳಪಡುವ ಸಂಬಂಧ ಶತಮಾನಗಳಿಂದಲೂ ಬಹುಚರ್ಚಿತವೆನಿಸಿರುವ ಲೋಕಪ್ರಸಿದ್ಧವೆನಿಸಿದ ಭಾವ- ಭಕ್ತಿಗೂ ಸಾಲುಗಳನ್ನು ಮುಡಿಪಿರಿಸಲಾಗಿದೆ. ಈ ಅನ್ಯರಸಗಳ ವಿವೇಚನೆಯನ್ನು ಡಾ.ಗಣೇಶರ ಅಲಂಕಾರಶಾಸ್ತ್ರ ಪುಸ್ತಿಕೆಯೊಂದಿಗೆ ಇನ್ನೂ ಹಲವು ಬಿಡಿ ಪ್ರಬಂಧಗಳಲ್ಲಿ ಕಾಣಬಹುದಾಗಿದೆ.
ಈ ರಚನೆಗೆ ವಿಸ್ತಾರವಾದ ನೃತ್ಯರೂಪಕವನ್ನು ಮೊದಲ ಬಾರಿಗೆ 2010 ರಲ್ಲಿ ಭರತನೃತ್ಯ ಶೈಲಿಯಲ್ಲಿ ಸಂಯೋಜನೆ ಮಾಡಿ ತಮ್ಮ ಪಿಎಚ್ ಡಿ ಸಂದರ್ಭ ಪ್ರಯೋಗಿಸಿದ್ದಷ್ಟೇ ಅಲ್ಲದೆ; ನೂಪುರ ಭ್ರಮರಿಯ ರಾಷ್ಟ್ರೀಯ ನೃತ್ಯಸಂಶೋಧನ ವಿಚಾರಸಂಕಿರಣದಲ್ಲಿಯೂ (2013) ರಲ್ಲಿ ನರ್ತಿಸಿದವರು ಪ್ರಖ್ಯಾತ ನೃತ್ಯ ಕಲಾವಿದೆ ಡಾ. ಶೋಭಾ ಶಶಿಕುಮಾರ್.
(ರಾಗಮಾಲಿಕಾ : ಆದಿತಾಳ)
ಹಂಸಧ್ವನಿ
ನವರಸರಸರಂಜನಂ ನಿರಂಜನಮ್
ಭುವನಾವನಂ ತಂ ಭಜೇ ಯದುನಂದನಮ್ || ಪ||
ಕಾಪಿ (ಶೃಂಗಾರ)
ತ್ರಿಗುಣಾಯಿತರಾಧಾವೈಧರ್ಭೀ-
ಸತ್ತ್ರಾಜಿತ್ತನಯಾಪ್ರಣಯೇ |
ಮಧುರಭಾವಪರಮೈಕಪೂರುಷಂ
ರಸರಾಜನಿದರ್ಶನರಸಿಕಮ್ ||೧ ||
ಅಠಾಣ (ವೀರ)
ಕಂಸಮುಖಾಸುರಕಾಲವತಂಸಂ
ಕುರುಕ್ಷೇತ್ರಸವನಾಗ್ನಿಮುಖಮ್ |
ಧರ್ಮ-ದಾನ-ಪಾಂಡಿತ್ಯ-ದಯಾನಯ-
-ವೀರತರಂಗತುರಂಗಮಗಮ್ || ೨|||
ಜೋನ್ಪುರಿ (ಕರುಣ)
ಕಾರಾಗಾರೇ ಕಂಪಿತಪಿತರೌ
ಕಿತವಸಭಾಯಾಂ ಕ್ಲಿಷ್ಟಾಂ ಕೃಷ್ಣಾಮ್ |
ಭವಭಗ್ನಾಪ್ತಾನ್ ವೀಕ್ಷ್ಯ ವಿದ್ರುತಂ
ಕರುಣಾರುಣವದನಂ ಕೃಪಾಬ್ಧಿಮ್ || ೩||
ದೇಶ್ (ಅದ್ಭುತ)
ವದನೇ ಜನನ್ಯೇ ಪ್ರದರ್ಶ ಜಗತೀಂ
ಸಮರೇ ಸುಹೃದೇ ಚ ವಿಶ್ವರೂಪಮ್ |
ವಿಸ್ಮಯಸೀಮೋಲ್ಲಂಘನಚಿದ್ಘನ-
ದಿವ್ಯಾದ್ಭುತಮಹಿಮಾಕರಮ್ || ೪||
ಆನಂದಭೈರವೀ (ಹಾಸ್ಯ)
ಭೀಮವಿಡಂಬನಡಂಬರನಿಪುಣಂ
ವಲ್ಲವಪಲ್ಲೀಜನಹಸನಪರಮ್ |
ಮಂದಸ್ಮಿತರದಚಂದ್ರಚಂದ್ರಿಕಾ-
-ಪ್ಲಾವಿತಪಾವನಜೀವನಮ್ || ೫||
ಶಾಹನ (ಭಯಾನಕ)
ಗೋಪಘೋಷನವನೀತವಿನೀತಂ
ಕ್ಷೀರಸಾರಹರಣಾಚರಣರಣಮ್ |
ದಂಡನಸಮಯೇ ನಂದನಂದಿನೀ-
ಭೀತಿಘಾತಗಲಿತಂ-ಪಂಥಮ್ ||೬ ||
ನಾದನಾಮಕ್ರಿಯಾ (ಬೀಭತ್ಸ)
ಮದಿರಾ-ಮದಿರಾಕ್ಷೀಮದಮತ್ತಂ
ಸ್ವೈರತರಾಂತಃಕಲಹೋದ್ವೃತ್ತಮ್ |
ಯಾದವಯೂನಾಂ ನಿವಹಂ ವೀಕ್ಷ್ಯ ಜು-
-ಗುಪ್ಸಿತಚೇತೋಯುತಮ್ ||೭ ||
ಕೇದಾರ (ರೌದ್ರ)
ಭೀಷ್ಮಭೀಷ್ಮ ಶಪಥಾಘಟನಾರ್ಥಂ
ಪಾರ್ಥಸಾರ್ಥಸುಪಥೀಕರಣಾರ್ಥಮ್ |
ಚಂಡಚಕ್ರಕರಮವಕ್ರವಿಕ್ರಮ-
ರೌದ್ರಮುದ್ರಮುದ್ಯತ್ಸಮುದ್ರಮ್ || ೮||
ಅಭೇರಿ (ವಾತ್ಸಲ್ಯ)
ಜಗತೀಸ್ನಿಗ್ಧಂ ಕುಚೇಲಮಿತ್ರಂ
ಮಮತಾವಿರಹಿತಸಮತಾಸತ್ರಮ್
ವಿಜಯ-ಸುಭದ್ರಾಪರಿಣಯಚೈತ್ರಂ
ವತ್ಸಲತಾಚಿತ್ಸ್ಥಲಂ ಸಲೀಲಮ್ || ೯||
ಆರಭಿ (ಧೀರ)
ಚತುರುಪಾಯಚಾತುರೀಚತುರಾಸ್ಯಂ
ಪಂಚತಂತ್ರತಂತ್ರೀಕ್ವಣನಿಪುಣಮ್ |
ಸಂಧಿವಿಗ್ರಹದ್ವಂದ್ವಕೌತುಕಂ
ಕ್ರಾಂತಿ-ಶಾಂತಿಚಟುಲಂ ಸುಧೀರಮ್ ||೧೦ ||
ಹಿಂದೋಳ (ಭಕ್ತಿ)
ಸಾಂದೀಪನಿ ಗುರುಚರಣ ಸುಮಾಲಿಂ
ರಾಜಸೂಯಮುನಿಸೇವನಶೀಲಮ್ |
ಹರಚೇತೋಹರಚಾರುವರ್ತನಂ
ಭಕ್ತಶಿಕ್ಷಣಗುಣಂ- ವಿರಕ್ತಮ್ || ೧೧||
ಸಾಮ (ಶಾಂತ)
ತ್ರಿಪುಟೀಘಟವಿಘಟನಪಟುತತ್ತ್ವಂ
ಬೋಧಿತಸಾಧಿತಗೀತಾಸತ್ತ್ವಮ್ |
ಸಚ್ಚಿತ್ಸುಂದರನಿಷ್ಕಲಬಂಧುಂ
ಶಾಂತ-ದಾಂತಹೃದಯಂ ರಸೈಕಮ್ ||೧೨ ||