ಅಂಕಣಗಳು

Subscribe


 

ನವರಾತ್ರ ನವಶಕ್ತಿ

Posted On: Monday, October 26th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಈ ರಚನೆಗಳು ನೃತ್ಯಾವರಣಕ್ಕಷ್ಟೇ ಅಲ್ಲದೆ, ಇಡಿಯ ಕನ್ನಡ ಪದ್ಯಸಾಹಿತ್ಯ ಪ್ರಕಾರಕ್ಕೆ ಗುಣಮಟ್ಟದ ಸೇರ್ಪಡೆ. ಇವುಗಳ ಬಗೆಗಿನ ಅಭಿನಯದ ವಿವರಗಳನ್ನು ಆಡಿಯೋ ರೂಪದಲ್ಲಿ ಮುಂದಿನದಿನಗಳಲ್ಲಿ ನಿರೀಕ್ಷಿಸಬಹುದು.

ನವರಾತ್ರ ನವಶಕ್ತಿ

ರಾಗಮಾಲಿಕೆ ; ತಾಳಮಾಲಿಕೆ

(ಕಲ್ಯಾಣಿ ರಾಗ) ನವರಾತ್ರಶಿವಕಾರಿಣಿ – ಸಚ್ಚಾರಿಣಿ

ಭವಬಂಧಭಯಹಾರಿಣಿ- ವಿಹಾರಿಣಿ ||ಪ||

 

(ನಾದನಾಮಕ್ರಿಯಾರಾಗ) (ತ್ರ್ಯಶ್ರ)

(ಬ್ರಾಹ್ಮೀ) ಬ್ರಹ್ಮವಿದ್ಯಾಪ್ರದೇ ದೇವಿ !

ಬ್ರಾಹ್ಮಭಾವೋದ್ಭಾವಿನೀ !

ಬ್ರಾಹ್ಮಿ ! ಸದ್ಯೋಮುಕ್ತಿಶಕ್ತೇ !

ಬ್ರಹ್ಮಮಯತಾಬೋಧಿನಿ !

 

(ಸಾಮರಾಗ) (ಚತುರಶ್ರ)

(ಕೌಮಾರೀ) ಶಂಕರಕರಮಂ ಪಿಡಿಯಲು ಮನದೊಳ-

ಗಂಕುರಿಸಿದ ಕಾಂಕ್ಷಾಲತೆಯಂ |

ಪಂಕಜಮುಖಿ ! ಕೌಮಾರಿ ! ಮನೋಹರೆ !

ಸಂಕಲ್ಪಿಸಿ ಪೋಷಿಸಿ ಗೆಲಿದೆ !

 

(ಮಾಂಡ್‌ರಾಗ) (ಸಂಕೀರ್ಣ)

( ಇಂದ್ರಾಣೀ) ಚಂದ್ರಂಗೆ ರಾಹ್ರದಯವಾದ ಪಾಂಗಿಂ-

ದಿಂದ್ರಂಗೆ ಹತ್ಯಾಹತಿ ಬಂದು ಕಾಡಲ್ |

ತಂದ್ರಾತ್ಮದಿಂ ಕುಂದದೆ ನಿಂದು ಗೆಲ್ದಾ

ಇಚಿದ್ರಾಣಿ ! ನೀಂ ನಿಶ್ಚಯಮಾದ್ಯವಚಿದ್ಯೇ ||

 

(ಮೋಹನರಾಗ) (ಖಚಿಡ)

(ವೈಷ್ಣವಿ) ಕನಕಮಯವನಜಭವೆ ! ಕನಕನಿಧಿ ! ಕಮಲೇ !

ಜನಮನವ ಜಗ್ಗಿಸುವ ಜಗದೇಕಶೀಲೇ !

ಘನವಿಷ್ಣುವರಜಾಯೇ ! ಗರುಡಗತಿಮಾಯೇ !

ವಿನತಾಪ್ತಿಸಚಿದಾನೆ ! ವೈಷ್ಣವಿ ! ಸತಾನೇ !

 

(ಹಿಂದೋಳರಾಗ) (ತ್ರ್ಯಶ್ರ)

(ಮಾಹೇಶ್ವರೀ) ಸದಾಸಾಂಬಸುಧಾಸಿಂಧುಶರಚ್ಚಂದ್ರಚಂದ್ರಿಕೇ!

ಮುದಾಮೋದಸುತಸ್ನೇಹಸಹಾಚಿiಸ್ತುತಾಂಬಿಕೇ !

ಮಹಾಮೋಹತಮೋಹಾರಿಹಸದ್ದೀಪರೂಪಿಕೇ !

ಮಹೇಶ್ವರೀ ! ಮಹತ್ಕರೀ ! ಮಹೀಜನೋಲ್ಲಾಸಿನೀ !

 

(ಬಿಲಹರಿರಾಗ) (ಸಂಕೀರ್ಣ)

(ವಾರಾಹೀ) ಘೋರಾಹವಂ ಗೆಯ್ದು ಧರಾಧರತ್ವಂ

ಸ್ಮೇರಾಸ್ಯದಿಂ ಸಾಧಿಸಿ ಮೋದವಾಚಿತ |

ಕಾರುಣ್ಯಕಾಠಿನ್ಯವಿಶೇಷಭೂಷಾ-

ವಾರಾಹಿ ! ತಾರಾಹಿತಚಂದ್ರದಂಷ್ಟ್ರೇ !

 

(ಅಭೇರಿರಾಗ) (ಮಿಶ್ರ)

(ಸರಸ್ವತಿ) ಶುಕ್ಲ ಕೋಮಲೆ ! ಗಾನಜೀವನೆ !

ವಿಕ್ಲವಾಂತಕಚಿತ್ಕಲೇ !

ಸೂಕ್ತಿಸುಂದರಿ ! ಶಾರದೇ ! ರಸ-

-ಮುಕ್ತಿಮೇದುರಮೇಖಲೇ ||

 

(ಕೇದಾರರಾಗ) (ಚತುರಶ್ರ)

(ದುರ್ಗಾ) ಶುಂಭನಿಶುಂಭಾಡಂಬರದಮನೇ !

ಕುಂಭಿಕುಂಭಹರಹರಿವರಗಮನೇ !

ಸ್ತಂಭಿತರಕ್ಷೋಲಕ್ಷ್ಮೀಲಸನೇ !

ಜಂಭರಿಪುಪ್ರೀಣನೇ ! ವ್ಮದಂಬೇ !

 

(ಅಠಾಣರಾಗ) (ಖಂಡ)

(ಚಾಮುಂಡೀ) ಮಹಿಷಾಸುರೋತ್ಕರ್ಷಕರ್ಷಣವಿಶೇಷೇ

ಮಹಿತಾನುಪಮನಮಸ್ಕೃತಿಪುರಸ್ಕಾರೇ !

ವಿಹಿತತ್ರಿಮೂರ್ತಿಮತಿಶಕ್ತಿಸಂಯುಕ್ತೇ

ನಿಹಿತಾತ್ಮಸೌಜನ್ಯೆ ! ಚಾಮುಂಡಿ ! ಚಂಡಿ !

 

(ಸಿಂಧುಭೈರವಿ) (ಮಿಶ್ರ)

(ಸಮಾರೋಪಣ) ನವನವೋನ್ನತಭವಜನಾನತ-

ಶಿವಮಯಾಕಾರೇ !

ದಶದಿಗಂತರವಶಿಹ್ಲದಂತರ

ವಿಶದಸಂಸಾರೇ !

 

Leave a Reply

*

code