ಅಂಕಣಗಳು

Subscribe


 

ನಟರಾಜ ನವರಸಮಾಲಿಕಾ

Posted On: Thursday, April 2nd, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ ೨ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ ನವರಸನಾಥನಾದ, ನಾಟ್ಯಾಧಿದೈವ ನಟರಾಜನ ಕೃತಿಯೊಂದನ್ನು ಪ್ರಕಟಿಸಲಾಗಿದೆ. ಮೂಲತಃ ಇದು ಸಮಸಂಸ್ಕೃತ ರಚನೆ. ಇದೇ ರಚನೆಯನ್ನು ಪೂರ್ಣವಾಗಿ ಕನ್ನಡಕ್ಕೊಪ್ಪುವಂತೆಯೂ ಶತಾವಧಾನಿ ಗಣೇಶರು ರಚಿಸಿದ್ದು; ಅದನ್ನೂ ’ನಟರಾಜ-ನವರಸ’ ಎಂಬ ಶೀರ್ಷಿಕೆಯಲ್ಲಿ ಇದೇ ಇಂಗ್ಲೀಷ್ ಶಿರ್ಷಿಕೆಯ ಲಿಂಕ್ ನಲ್ಲಿ Nataraja Navarasa by Dr R Ganesh ಪಿಡಿಎಫ್ ಆಗಿಸಿ ಹಂಚಿಕೊಳ್ಳಲಾಗಿದೆ.  ಕಲಾವಿದರು ತಮ್ಮ ಅನುಕೂಲಕ್ಕೊಪ್ಪುವಂತೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.  

 ರಾಗಮಾಲಿಕೆ : ಚತುರಶ್ರ ನಡೆ 

ಚತುರಭಿನವಭಾವನಾ – ರಸಾಯನ !

ಚತುರಭಿನಯಜೀವನಾ – ಜನಾವನ ||ಪ||

 

(ಶೃಂಗಾರ) ಬಂಧುರಮಧುರಾಪುರನಿಕೇತನ-

ಸುಂದರಪಾಂಡ್ಯಸುತಾಮೋಹನ |

ಸಿಂಧುತುಲ್ಯಶೃಂಗಾರ ಸುಧಾಮಧು-

-ಮಂದರ ! ಮಂದಾರಸುಮನೋಮನ ||೧ ||

 

(ವೀರ) ವೈರಿಭಯಂಕರ ! ತ್ರಿಪುರಲಯಂಕರ !

ಕ್ರೂರಗಜಾಸುರ ದಾರ ! ದಾರುಣ !

ಚಾರುಸಂಗರ ವಿಚಾರ ಶಂಕರಾ !

ಭೀರುತಾರಿವೀರಾತ್ಮಗುಣ ! || ೨||

 

(ಕರುಣ) ದಕ್ಷ ಮಖಾಹುತಸತೀಶೋಕ ಬಾ-

-ಷ್ಪಾಕ್ಷ ! ವಿಷಾದವಿಷಾಗ್ನಿಲಗ್ನಾ !

ದೀಕ್ಷಾಕಲ್ಪಿತಮೃಕಂಡುನಂದನ-

-ರಕ್ಷಾ ! ತತ್‌ಕ್ಷಣಕಾರುಣ್ಯಲಕ್ಷ್ಯಾ ! || ೩||

 

(ಅದ್ಭುತ) ಲೋಕವಿಮೋಹನಮೋಹಿನೀ ನವಾ-

-ಲೋಕನವಿಸ್ಮಿತ ! ಹೇ ಸುಸ್ಮಿತಾ !

ಶ್ರೀಕಮಲಾಪತಿ್ಜಾತಮಹಾದ್ಭುತಾ-

-ಲೌಕಿಕಮಣಿಕಂಠಜನಕಾ ! ಸ್ತುತ ! ||೪ ||

 

(ಹಾಸ್ಯ) ಪರ್ವತರಾಜಸುತಾಪರೀಕ್ಷಕಾ !

ಸರ್ವಜನಮನೋಹರದರ ಹಾಸಾ!

ಪರ್ವಾಯಿತಲಘುಲೀಲ ! ಕೋಮಲಾ !

ಶರ್ವ ! ಸದಾ ಸ್ಮೇರಸಾರ ! ಹರಾ! || ೫||

 

(ಭಯಾನಕ) ಭಸ್ಮಾಸುರವರವಿಧಾಯನೋದ್ಗತ-

ಭಸ್ಮೀಭವನವಿಭೀತಿಬಾಧಿತಾ !

ಸುಸ್ಮಿತಾಸ್ಯಪರಿವರ್ತಕ ಪೇಲವ-

-ತಾಸ್ಮಯಸಂಧಿತಕೇಲೀಕಲಾ! || ೬||

 

(ಬೀಭತ್ಸ) ಕ್ಷೀರೋದಾರ್ಣವ ಮಥನ ಸಮುದ್ಭವ-

ಪೂರಾಯಿತ ಭೋಗಾಕ್ಷೇಪಕಾ !

ಪಾರಮಾರ್ಥ್ಯರಹಿತೈಹಿಕವಾರ್ತಾ-

-ದೂರ ! ಜುಗುಪ್ಸಿತ ! ನೀರಾಗೀ ! ||೭ ||

OR

(ಶಿವದೂಷಿತ ದಕ್ಷಾಧ್ವರಲೋಕನ-

ತವಕಿತಸಾಧ್ವೀವಾರಣೋದ್ಯತಾ !

ಭವಬಂಧನ ಸಂವರ್ಧನಭೋಗೋ-

-ತ್ಸವಜುಗುಪ್ಸಿತ ! ವಿಕಾರ ದೂರಾ !    )

 

(ರೌದ್ರ) ಕ್ಷುದ್ರಮನೋವಿಕಲನಮನೋಭವ-

-ಕ್ಷುದ್ರಕಾರ್ಯಕುಪಿತಾಗ್ನಿಲೋಚನಾ !

ಮುದ್ರಿತ ಗೇಹ ಕವಾಟ ವಿಪಾಟನ-

ರುದ್ರ ! ಗಣೇಶಗಲೋಲ್ಲುಂಛನಾ ! || ೮||

 

(ಶಾಂತಾ) ಶಾಂತ ! ನಿಯಂತ್ರಿತ ! ದಾಂತಸಮುರ್ಚಿತ !

ಸ್ವಾಂತಃಕಾಂತಿವಿಲೋಕೋತ್ಸುಕಾ!

ಚಿಂತಾದೂರ ! ಅಚಿಂತ್ಯ ! ಭವಾಂಕುರ-

ಕೃಂತನ ! ಶ್ರೀದಕ್ಷಿಣಾದೈವತಾ! ||೯ ||

 

Leave a Reply

*

code