Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು
ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 9ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ.
ಪ್ರಕೃತ ಕಂತಿನಲ್ಲಿ ನವರಸಗಳನ್ನು ದೇವಿಯ ಲೀಲಾವಿಲಾಸಗಳಿಗೆ ಅನ್ವಯಿಸಿ ಬರೆಯಲಾದ ’ದೇವೀನವರಸಮಾಲಿಕಾ’ ಸಂಸ್ಕೃತ ಕೃತಿಯನ್ನು ಪ್ರಕಟಿಸಲಾಗಿದೆ. ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳಿಂದ ಮೊದಲ್ಗೊಂಡು ಮಹಾರಾಜಾ ಸ್ವಾತಿ ತಿರುನಾಳ್, ಊತ್ತುಕ್ಕಾಡ್ ವೆಂಕಟ ಕವಿ ಮೊದಲಾಗಿ ಸಂಗೀತ ಪ್ರಪಂಚದಲ್ಲಿ ಅನೇಕ ವಾಗ್ಗೇಯಕಾರರು ದೇವಿಯ ರಾಗಮಾಲಿಕೆಗಳನ್ನು ರಚಿಸಿದ್ದಾರೆ. ಅವೆಲ್ಲವೂ ನೃತ್ಯಕ್ಕೆಂದೇ ಬರೆದವುಗಳಲ್ಲ. ಅದರೆ ಪ್ರಕೃತ ಕೃತಿಯು ನೃತ್ಯಾಸ್ವಾದಕ್ಕೆಂದೇ ರಚಿತವಾಗಿದ್ದು; ಅಪಾರವಾದ ವಿಭಾವಾನುಭವ ಸಾಮಗ್ರಿಗಳೊಂದಿಗೆ ಮೇಳೈಸಿದೆ. ರಾಗ ಮತ್ತು ರಸಛಾಯೆಗಳ ಸನ್ನಿವೇಶಗಳನ್ನು ಸಾಲುಗಳ ಮೊದಲಿಗೇ ಸೂಚಿಸಲಾಗಿದ್ದು; ಕಲಾವಿದರು ಸದುಪಯೋಗಪಡಿಸಿಕೊಳ್ಳಬೇಕಾಗಿ ಪ್ರಾರ್ಥನೆ.
(ರಾಗಮಾಲಿಕಾ ; ಆದಿತಾಳ )
ಹಂಸಧ್ವನಿ
ನವರಸರಸವಾಹಿನೀ ನಿರಂಜನಿ !
ಅವ ನಟಲೀಲಾವನೀವಿಲಾಸಿನಿ ||ಪ||
ಮಾಂಡ್ (ಶೃಂಗಾರ)
ಸುಂದರಚಂದ್ರಕಲಾಧರಲೋಚನ-
ಮಂದಸ್ಮಿತಪುಲಕಾಂಕೃತೇ |
ಮಂದಹಾಸಮಾಕಂದಮಹೇಶಾ-
ನಂದಕುಂದಲತಿಕೇ ಶುಚಿಸ್ಮಿತೇ ||೧ ||
ಅಠಾಣ (ವೀರ)
ಶುಂಭನಿಶುಂಭಡಂಬರದಲನೇ-
ಶುಂಭಿತಸಮರೋತ್ಸಹವಿಲಸನೇ
ಕುಂಭಿಕುಂಭದಾರಣಸಿಂಹಬಲೇ !
ಶಾಂಭವಿ ! ವೀರವರೇ ! ವಿಶಾಲೇ || ೨||
ಕಾನಡ (ಕರುಣ)
ದಕ್ಷೋದೀರಿತನಿಜಪತಿನಿಂದಾ-
ರೂಕ್ಷಕಶಾಹತಿಹತಮೃದುಹೃದಯೇ |
ದೀಕ್ಷಾಕಲ್ಪಿತನತಜನರಕ್ಷಾ
ಲಕ್ಷಣಪರಿಲಕ್ಷಿತೇ ! ದಯಾರ್ದ್ರೇ || ೩||
ಬೇಹಾಗ್ (ಹಾಸ್ಯ)
ಲಂಬೋದರಗುಹಖೇಲನಕಲಹೇ-
ಸಾಂಬೇ ದರ್ಶಿತನರ್ಮವಿಲಾಸೇ |
ಲಂಬಿತಚೇಟೀಚಾಟುಚರಿತ್ರೇ
ಅಂಬಿಕೇ ! ಮೋದಾನ್ವಿತೇ ಸುಹಾಸೇ || ೪||
ಅಸಾವೇರಿ (ಬೀಭತ್ಸ)
ಶಕ್ತನಿಶಾಚರರುಂಡವಿಲಂಬಿತ-
ಯುಕ್ತಕರಾಲಕಪಾಲಸ್ರಜೇ |
ರಕ್ತಬೀಜರಕ್ತಾಸ್ವಾದಪರೇ !
ಮುಕ್ತಭಯೇ ! ಭಾಸಿತೇ ! ಜುಗುಪ್ಸಿತೇ ||೫||
ಮೋಹನ (ರೌದ್ರ)
ಛಿದ್ರಿತಸೈರಿಭದೈತ್ಯಾಂಗೇ ಹೃ-
ದ್ವಿದ್ರಾವಕಭೀಕರಹರಿಯಾನೇ
ಕ್ಷುದ್ರವಿಚಾರಣಕಾಲಕರಾಲೇ !
ರುದ್ರಪ್ರಿಯೇ ! ಚಂಡಿಕೇ ! ಜಯಾಂಕೇ ! || ೬||
ಆರಭಿ (ಭಯಾನಕ)
ಕಂದರ್ಪಸ್ಫುಟದರ್ಪಫಣಿಫಣಾ-
ಭಿಂದಕಗಾರುಡಹರನಯಾನಾಗ್ನೌ-
ಸ್ಪಂದಿತಸುಮನೋಹರಭಯಂಕರೇ
ಸಂದರ್ಭೇ ಕಂಪಿತೇ ! ನಿಲಿಂಪೇ ||೭ ||
ಷಣ್ಮುಖಪ್ರಿಯ (ಅದ್ಭುತ)
ವಿಶ್ವಾರೂಪಣ ಧಾರಣಮಾರಣ-
ನಿಃಶ್ಶ್ವಸನೋಚ್ಛ್ವಸನೋಪಮಕಾರ್ಯೇ |
ಶಶ್ವದುದುಂಚಿತಸಂಚಿತಸತ್ತ್ವೇ
ಶಾಶ್ವತಮುಕ್ತಿಪ್ರದೇ ! ಮಹಾದ್ಭುತೇ ||೮ ||
ಸಿಂಧುಭೈರವಿ (ಶಾಂತ)
ಶ್ರೀ ವಿದ್ಯೇ ! ಶಿವಸಂಪ್ರಾಪ್ತಿ ತಪ್ತೇ !
ದೇವಿ ! ಚಿದಾನಂದ ಚಿನ್ಮಾತೃಕೇ !
ಪಾವನ ಷಟ್ಚಕ್ರಯೋಗಾನುರಾಗೇ
ಭಾವುಕ ಚಿಂತಾಹರೇ ! ಪ್ರಶಾಂತೇ ! ||೯||