Author: ಮನೋರಮಾ. ಬಿ.ಎನ್
ಪ್ರಸ್ತುತ ಪುತ್ತೂರಿನ ಬೆಳ್ಳಾರೆಯ ಸನಿಹದ ಎಳ್ಯಡ್ಕದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಈಶ್ವರ ಭಟ್ ಎಳ್ಯಡ್ಕ ಅವರ ಆತ್ಮಕಥನ ದೃಷ್ಟ- ಅದೃಷ್ಟಕ್ಕೆ ನೂಪುರ ಭ್ರಮರಿಯನ್ನು ನಿರ್ವಹಿಸುತ್ತಿರುವ ಶ್ರೀ ಸಾನ್ನಿಧ್ಯ ಪ್ರಕಾಶನವು ಪುಸ್ತಕರೂಪವನ್ನಿತ್ತು, ಮೇ ೨೫ರಂದು ಎಳ್ಯಡ್ಕದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳಿಂದ ಲೋಕಾರ್ಪಣಗೊಳಿಸಲಾಯಿತು.
ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ತಾಳಮದ್ದಳೆ ಕಾರ್ಯಕ್ರಮದೊಂದಿಗೆ ; ನೂಪುರ ಭ್ರಮರಿಯ ಗ್ರೀಷ್ಮ ಗಾಂಭೀರ್ಯ ಸಂಚಿಕೆಯನ್ನೂ ಅನಾವರಣಗೊಳಿಸಿ, ಆಶೀರ್ವದಿಸಿದ ಸ್ವಾಮೀಜಿಗಳು ನೂಪುರದ ಸಂಪಾದಕಿ, ಬಳಗದ ಸುನಿಲ್ ಕುಲಕರ್ಣಿ, ಅನುಶ್ರೀ ಬಂಡಾಡಿ ಅವರನ್ನು ಸನ್ಮಾನಿಸಿದರು. ನೆನಪಿನ ಪುಟಕ್ಕೆ ಮತ್ತೊಂದು ಗರಿಯನ್ನಿತ್ತ ಸುವರ್ಣ ಕ್ಷಣಗಳ ಒಂದು ಝಲಕ್ ಇಲ್ಲಿದೆ !