ಅಂಕಣಗಳು

Subscribe


 

ನಟನ ಮತ್ತು ರಂಗಮನೆ

Posted On: Wednesday, April 15th, 2009
1 Star2 Stars3 Stars4 Stars5 Stars (No Ratings Yet)
Loading...

Author: 'ಮನೂ' ಬನ

 

natana

ಚಲನಚಿತ್ರ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಮೈಸೂರಿನ ‘ನಟನ’ ಸಂಸ್ಥೆ ರಂಗಭೂಮಿಗೆ ಸಂಬಂಧಪಟ್ಟಂತೆ ಸದಾ ಕ್ರಿಯಾಶೀಲವಾಗಿ,  ವರ್ಷದುದ್ದಕ್ಕೂ ಜೀವಂತಿಕೆಯಿಂದ ತುಡಿಯುತ್ತಲಿದೆ. ನಾಟಕಗಳಷ್ಟೆ ಅಲ್ಲದೆ ರಂಗಭೂಮಿಯ ವಿವಿಧ ಮಜಲುಗಳನ್ನು ಏರುತ್ತಿರುವ ನಟನ ಮಕ್ಕಳ ರಂಗಭೂಮಿಗೂ ಜೀವ ತುಂಬುತ್ತಾ ಆಗಾಗ ಕಾರ್ಯಾಗಾರ, ಶಿಬಿರ, ಕಮ್ಮಟಗಳನ್ನು, ಸಿನಿಮಾ ರಸಗ್ರಹಣ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಸದಭಿರುಚಿಯ ವಿಚಾರಗಳಿಗೆ ವೇದಿಕೆಯಾಗುತ್ತಿದೆ. ಅವರ ಕುರಿತ ಹೆಚ್ಚಿನ ಮಾಹಿತಿಗೆ www.natana.org ನ್ನು ಸಂಪರ್ಕಿಸಬಹುದು.

Rangamane- Dhana Dangura-Drama

Rangamane- Dhana Dangura-Drama

ಅಂತೆಯೇ ದಕ್ಷಿಣಕನ್ನಡದ ಸುಳ್ಯ ತಾಲೂಕಿನ ‘ರಂಗಮನೆ -ಸಾಂಸ್ಕೃತಿಕ ಕಲಾಕೇಂದ್ರ’ವೂ ಕೂಡಾ ! ನೀನಾಸಂ  ಪಧವೀಧರ, ಹೆಸರಾಂತ ರಂಗಕರ್ಮಿ ಜೀವನ್‌ರಾಮ್ ಸುಳ್ಯ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸುಳ್ಯದ ಕಲಾಸಕ್ತ ಮಕ್ಕಳ ವೃಂದ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ತಂಡಗಳು ಈಗಾಗಲೇ ತಮ್ಮ ಜೈತಯಾತ್ರೆಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ, ಹೊರರಾಜ್ಯಗಳಲ್ಲೂ ಕೈಗೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ಅನೇಕ ನಾಟಕ ಸ್ಪರ್ಧೆಗಳಲ್ಲಿ ಸತತ ಪ್ರಥಮ ಪ್ರಶಸ್ತಿ ಪಡೆಯುತ್ತಿರುವ ಜೀವನ್‌ರಾಮ್ ನಿರ್ದೇಶನದ ಬಳಗ ಯುವ ಮತ್ತು ಮಕ್ಕಳಲ್ಲಡಗಿದ ಪ್ರತಿಭೆ ಮತ್ತು ಸಾಧನೆಯ ಜೊತೆಗೆ, ಸಮರ್ಥ ನಾಯಕತ್ವದ ನಿರ್ದೇಶನಕ್ಕೆ ಕನ್ನಡಿ ಹಿಡಿದಿದೆ. ಮಾತ್ರವಲ್ಲದೆ ರಂಗಭೂಮಿಯ ಕುರಿತಾಗಿ ಹಲವು ನಾಟಕ ಸ್ಪರ್ಧೆ, ಜಾದೂ ಮತ್ತು ಜಾನಪದ ಸಂಸ್ಕೃತಿಗಳ ಕುರಿತಾಗಿ ಕಾರ್ಯಾಗಾರ, ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವ ‘ರಂಗಮನೆ’ ಯಕ್ಷಗಾನದ ಹಲವು ಆಶಯಗಳನ್ನು ವ್ಯಾಪಕವಾಗಿ ತನ್ನಲ್ಲಿ ಅಳವಡಿಸಿಕೊಳ್ಳುತ್ತಾ ಯಶಸ್ವೀ ರಂಗಪ್ರಯೋಗಗಳನ್ನು ಜನಮಾನಸಕ್ಕೆ ನೀಡುತ್ತಿದೆ.
ಇವರೆಲ್ಲರ ಆಶಯ, ಪ್ರಯತ್ನ ಮತ್ತಷ್ಟು ಸಾಕಾರಗೊಳ್ಳಲಿ.

Leave a Reply

*

code