Author: ರೋಹಿಣಿ ಮಂಜುನಾಥ್, ಬೆಂಗಳೂರು
ನೂಪುರ ಭ್ರಮರಿ (ರಿ.) IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾಗಿ ಪ್ರಕಟವಾದ ನುಡಿಚಿತ್ರ ಲೇಖನ – 34 :
ಪೂರ್ಣ ಓದಿಗೆ ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡಿರಿ.
ಲೇಖಿಕೆಯ ಪರಿಚಯ
ಭರತನಾಟ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಶ್ರೀಮತಿ ರೋಹಿಣಿ ಮಂಜುನಾಥ್ ಚಿಕ್ಕಂದಿನಿಂದಲೇ ಗುರು ಡಾ ಹೇಮಾ ಗೋವಿಂದರಾಜನ್ ಬಳಿ ನೃತ್ಯಾಭ್ಯಾಸವನ್ನು ಪ್ರಾರಂಭಿಸಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ತಮ್ಮ 15 ನೇ ವಯಸ್ಸಿನಲ್ಲಿಯೇ ರಂಗಪ್ರವೇಶವನ್ನು ಪೂರೈಸಿದ್ದಾರೆ. ನಂತರ ಕರ್ನಾಟಕ ಕಲಾಶ್ರೀ, ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಬಿ ಭಾನುಮತಿ ಅವರ ಬಳಿ ಭರತನಾಟ್ಯದಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದು ಪ್ರಸ್ತುತ ಗುರು ಶ್ರೀಮತಿ ಶೀಲಾ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಅಭಿನಯ ಮತ್ತು ಶಾಸ್ತ್ರದ ಅಂಶಗಳಲ್ಲಿ ತರಬೇತಿಯನ್ನು ಪಡೆಯುತ್ತಾ ತಮ್ಮ ನೃತ್ಯ ಪಯಣವನ್ನು ಮುಂದುವೆರೆಸಿದ್ದಾರೆ. ಬಿ.ಕಾ೦ ಪದವಿಯ ನಂತರ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿ ತಮ್ಮದೇ ನೃತ್ಯ ಶಾಲೆಯಲ್ಲಿ ಹಲವಾರು ಪ್ರತಿಭಾವಂತ ಯುವ ಕಲಾವಿದರಿಗೆ ಭರತನಾಟ್ಯ ತರಬೇತಿಯನ್ನು ಸಹಾ ನೀಡುತ್ತಿದ್ದಾರೆ. ಇವರು ಗುರು ವಿದುಷಿ ಎಚ್ ಗೀತಾರವರ ಹಿರಿಯ ವಿದ್ಯಾರ್ಥಿನಿಯಾಗಿ ಶಾಸ್ಟ್ರೀಯ ಸಂಗೀತವನ್ನು ಅಭ್ಯಾಸಮಾಡುತಿದ್ದಾರೆ. ವಿದ್ವಾನ್ ನಾರಾಯಣಸ್ವಾಮಿ ಅವರ ಬಳಿ ನಟ್ಟುವಾಂಗಮ್ ಅಭ್ಯಾಸ ಮಾಡುತಿದ್ದಾರೆ.
ಪ್ರಸ್ತುತ ಇವರು ನೂಪುರಭ್ರಮರಿ ಸಂಸ್ಥೆಯ ’ನೃತ್ಯಶಿಲ್ಪಯಾತ್ರೆ’ ಅಧ್ಯಯನ ತರಬೇತಿಯನ್ನು ( ಇಂಟರ್ನ್ ಶಿಪ್ ) ಪಡೆಯುತ್ತಿದ್ದಾರೆ.