ಅಂಕಣಗಳು

Subscribe


 

ಮಹಾಭಾರತಗೀತಿಕಾ

Posted On: Friday, April 10th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ ೬ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯ ಗುಚ್ಛವನ್ನು ಒಂದೊಂದಾಗಿ ನೂಪುರ ಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ ಸಂಸ್ಕೃತ ಭಾಷೆಯಲ್ಲಿ ರಚಿಸಲಾದ ‘ಮಹಾಭಾರತಗೀತಿಕಾ’ ಎಂಬುದರ ಪ್ರಕಟಣೆಯನ್ನು ಕಾಣಬಹುದು. ಇದು ಸಮಗ್ರ ಮಹಾಭಾರತದ ೧೮ ಪರ್ವಗಳ ಕಥೆಯನ್ನು ಶ್ರೀಕೃಷ್ಣನ ಲೀಲಾವಿಲಾಸಗಳಾಗಿ ಚಿತ್ರಿಸಿದ ಒಂದೇ ಕೃತಿ. ಸ್ವಾತಿ ತಿರುನಾಳ ಮಹಾರಾಜರ ಸುಪ್ರಸಿದ್ಧ ರಾಮಾಯಣ ರಾಗಮಾಲಿಕೆ ’ಭಾವಯಾಮಿ’ಗೆ ಸೋದರಪ್ರಾಯವಾದ ರಚನೆ.

ಇಲ್ಲಿ ಕೊಡಲಾದ ಹಾಡಿಗಿಂತಲೂ ಬೇರೆಯದೇ ಆದ ಸಾಹಿತ್ಯವನ್ನು ( ಚರಣ ೧ರ ಬಳಿಕ)  ಡಾ. ನಾಗವಲ್ಲಿ ನಾಗರಾಜ್ ಮತ್ತು ರಂಜನಿ ವಾಸುಕಿ ಅವರು ಬೆಂಗಳೂರಿನ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಸ್ವರಸಂಯೋಜನೆಯೊಂದಿಗೆ  ಪ್ರಸ್ತುತಪಡಿಸಿರುತ್ತಾರೆ. ಈ ಕೃತಿಯ ಸಾಹಿತ್ಯವನ್ನು ’ರಾಗವಲ್ಲೀ ರಸಾಲ’ ಎಂಬ (ಶತಾವಧಾನಿ ಡಾ.ರಾ.ಗಣೇಶ್ ಮತ್ತು ಡಾ. ನಾಗವಲ್ಲೀ ನಾಗರಾಜ್ ಅವರು ರಚಿಸಿದ) ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯು ಪ್ರಕಾಶಿಸಿದ  ಪುಸ್ತಿಕೆಯಲ್ಲಿ ೮೬ ನೇ ಪುಟದಲ್ಲಿ ’ಪಂಚಮವೇದಪ್ರಪಂಚ’ ಎಂಬ ರಚನೆಯಲ್ಲಿ ಕಾಣಬಹುದಾಗಿದೆ.  ಪ್ರಸ್ತುತ ’ರಾಗಾನುರಾಗ- ೨೦೦೯’ ಸಂಗೀತ ಕಾರ್ಯಕ್ರಮದ ಲಿಂಕ್ ನ್ನು ಇಲ್ಲಿ ಕೊಡಲಾಗಿದೆ. ಆ ರಚನೆಯಲ್ಲಿ ಆರು ಚರಣಗಳಿದ್ದರೆ, ಇಲ್ಲಿ ೯ ಚರಣಗಳಿವೆ. ಅವರು ಪ್ರಧಾನವಾಗಿ ರೀತಿಗೌಳ, ಭೈರವಿ, ಬಿಲಹರಿ, ಅಠಾಣ, ಶುಭಪಂತುವರಾಳಿ, ಸುರುಟಿ ರಾಗವನ್ನು ಬಳಸಿಕೊಂಡಿರುತ್ತಾರೆ. ಇಲ್ಲಿನ ರಾಗಮಾಲಿಕೆಯು ಸಾಮರಾಗ, ನವರಸಕನ್ನಡ, ಮೋಹನ, ಕುಂತಲವರಾಳಿ, ಬಿಲಹರಿ, ಶುದ್ಧಧನ್ಯಾಸಿ, ಕಥನಕುತೂಹಲ, ಅಠಾಣ, ರೀತಿಗೌಳ, ಮಧ್ಯಮಾವತಿಗೆ ನಿಬದ್ಧವಾಗಿದ್ದು; ಆದಿತಾಳದಲ್ಲಿದೆ. ನೃತ್ಯಮಾಧ್ಯಮ ದವರ ರೂಪಕಾಭಿನಯಕ್ಕೆ ಇದು ಹೆಚ್ಚು ಹೊಂದಿಬರುತ್ತದೆ ಎಂಬ ವಿಶ್ವಾಸದಲ್ಲಿ ಈ ದೀರ್ಘ ಅಪ್ರಕಟಿತ ರಚನೆಯನ್ನೇ ಇಲ್ಲಿ ನೀಡಲಾಗಿದೆ.

 

ಪಂಚಮವೇದಂ ವಿಶ್ವವಿಚಾರಂ

ಭಾರತಮಾಶ್ರಯ ಭಾರತಸಾರಮ್ || ಪ ||

 

ಶುಕತಾತೋಕ್ತಿಂ ಗಜಮುಖಲಿಖಿತಂ

ಭರತಾನ್ವಯದಿವ್ಯಕಥಾಕಲಿತಮ್ |

ಕೌರವಪಾಂಡವಜನನಂ ವಿರಸಂ

ಪಾಂಚಾಲೀಪರಿಣಯಮತಿಸರಸಮ್ ||ಅ.ಪ ||

 

ಮಾಧವಕರುಣಾತರುಫಲಮತುಲಂ

ರಾಜಸೂಯಸವನಂ ಶಿವಮಮಲಮ್ |

ಕುಟಿಲಾಕ್ಷೇ ಪಾಂಡವಪರಾಭವಂ

ಸುದತೀಕಬರೀಕರ್ಷಣಮಶಿವಮ್ ||೧ ||

 

ದ್ವಾದಶವತ್ಸರವನವಾಸಂ ಮಧು-

ಸೂದನದಯಯಾ ಕೃತಮಖಿಲಮ್ |

ಬಾದರಾಯಣಾಚೋದನಮಿತಿ ಕಿಲ

ಸಾಧಿತಪಾಶುಪತಂ ಶಿವಮಮಲಮ್ ||೨ ||

 

ಅಜ್ಞಾತೋಷಿತಪ್ರಜ್ಞಾಪಾರಗ-

ಪಾಂಡವ ಪಾಟವಮತಿಚಿತ್ರಮ್ |

ಅಗ್ನಿಜಾಪಮಾನಾಗ್ನೌ ದಗ್ಧಂ

ಕೀಚಕಕುಲಕಕೀಚಕವನಮಾತ್ರಮ್ || ೩||

 

ಯದುನಂದನಸಂಧಾನವಿಧಾನೇ

ಪನ್ನಗಕೇತನಕೈತವಕಾರ್ಯಮ್ |

ವಿಶ್ವರೂಪದೀಪೋತ್ಸವೋಪರಿ

ಪತಿತಪತಂಗನಿಭಂ ಕುವಿಚಾರ್ಯಮ್ ||೪ ||

 

ಪಾರ್ಥಪ್ರಾಕೃತವಿಷಾದವಿಷಧರ-

ಗಾರುಡಮಣಿವದ್ಗರುಡಪವಚನಮ್ |

ದೇವವ್ರತಕಹರಿವ್ರತಭಂಗಂ

ಶರತಲ್ಪಶಾಯಿ ಶಾಂತನವಾಂಗಮ್ || ೫||

 

ಕುಂಭಸಂಭವಾಡಂಬರಾಂಬರೇ

ಕುಂಜರಾಂತ್ಯವಾರ್ತಾಕ್ಷುರಾಹತಿಮ್ |

ಚಕ್ರಿಚೋದನೇನಾರ್ಜುನೇಷುಣಾ

ವಕ್ರೀಕೃತಕರ್ಣಗತಿಂ ವಿಕೃತಿಮ್ || ೬||

 

ಅಂತಕಜೇನಾಂತ್ಯಂಗತಶಲ್ಯಂ

ಭೀಮಗದಾಹತಿಕುರುಶಲ್ಯಮ್ |

ಸಾಧಿತಶಪಥಾಂ ಪಾಂಚಾಲಸುತಾ-

ಮೇಧಿತಪಾಂಡವಸಂಗ್ರಾಮಜಯಮ್ || ೭||

 

ಶಾಂತನವೋದಿತಚರಮನಿದೇಶಂ ಅಂತರಂಗ ಶೋಕಾನಲಹನನಮ್ |

ಚಿಂತೋದಧಿಶೋಷಕಹಯಮೇಧಂ ಕಂತುಪಿತಾಶೀರ್ವಚನಾಮೋದಮ್ || ೮||

 

ಆಂಬಿಕೇಯಮುಖ್ಯಾಟವಿಗಮನಂ ಸಾಂಬಘಟಿತಯಾದವಕುಲದಮನಮ್ |

ಮುರಲೀಧರಲೀಲಾನಟನಾಂತ್ಯಂ ಸುರಪುರಪ್ರಸ್ಥಿತಪಾಂಡವಕೃತ್ಯಮ್ |೯| ||

 

Leave a Reply

*

code