Author: ಮನೋರಮಾ. ಬಿ.ಎನ್
ಇತ್ತೀಚೆಗೆ ಅಮೆರಿಕಾದ ಚಿಕಾಗೋದಲ್ಲಿ ನಡೆದ ಆಕ್ಕ- ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗಾಗಿ ಆಯೋಜಿಸಿದ್ದ ಜಾಗತಿಕ ಮಟ್ಟದ ಬರಹ ಆಯ್ಕೆ ಸ್ಪರ್ಧೆಯಲ್ಲಿ ’ವಿಶ್ವ ಕನ್ನಡಿಗರ ಪ್ರತಿಭೆ ಮತ್ತು ಪರಂಪರೆಯ ಪ್ರದರ್ಶನ’ ಎಂಬ ಮುಖ್ಯವಸ್ತುವಿನಡಿ ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್. ಅವರು ಬರೆದ ಪ್ರದರ್ಶಕ ಕಲೆಗಳಲ್ಲಿ ಕನ್ನಡಿಗರ ಫ್ಯೂಷನ್ ಪರಂಪರೆ ಎಂಬ ಲೇಖನಕ್ಕೆ ಪ್ರಥಮ ಸ್ಥಾನ ಲಭಿಸಿದ್ದು, ಪತ್ರಿಕೆಯ ಬಳಗದ ಬೆಂಗಳೂರಿನ ಕಪಿಲಾ ಶ್ರೀಧರ್ ಅವರ ಕಥೆಯೂ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿರುತ್ತದೆ. ಇವರೀರ್ವರಿಗೂ ಅಭಿನಂದನೆಗಳು. ಮತ್ತು ಸಹಕರಿಸಿದ ಸಮಸ್ತ ಸಹೃದಯರಿಗೂ, ಮಾಧ್ಯಮದವರಿಗೂ ಕೃತಜ್ಞತೆಗಳು.
ನೃತ್ಯ ಪದ್ಧತಿಯಲ್ಲಿ ಚಾಲ್ತಿಯಲ್ಲಿರುವ ಮತ್ತು ಈಗಾಗಲೇ ಸಾಕಷ್ಟು ಮರೆಯಾಗಿರುವ ನೃತ್ಯ ಸಂಬಂಧೀ ಅಡವುಗಳ ಬಗ್ಗೆ ಮಾಹಿತಿಗಳು,ಚಿತ್ರಗಳು, ವಿವರಣೆಗಳು ಬೇಕಾಗಿವೆ. ತಮ್ಮಲ್ಲಿರುವ ಮಾಹಿತಿಯನ್ನು ನೀಡುವುದಾದಲ್ಲಿ ನೂಪುರ ಭ್ರಮರಿ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ. ಮತ್ತು ಮುಂಬರುವ ದಿನಗಳಲ್ಲಿ ಅಡವುಗಳ ಬಗೆಗಿನ ಸವಿಸ್ತಾರ ಪರಿಚಯದಲ್ಲಿ ಆ ಲೇಖನಗಳನ್ನು ಪ್ರಕಟಿಸಲಾಗುವುದು.
ಹಾಗೂ
ನೃತ್ಯವನ್ನು ಸಿನಿಮಾ ಮಾಧ್ಯಮದಲ್ಲಿ ಬಿಂಬಿಸಲಾಗಿರುವ ಕುರಿತಂತೆ ಮಾಹಿತಿಗಳು, ಅನಿಸಿಕೆ, ದಾಖಲೆಗಳು ಸಂಶೋಧನಾ ಅಧ್ಯಯನವೊಂದಕ್ಕೆ ಬೇಕಾಗಿವೆ. ಮಾಹಿತಿಗಳನ್ನು ಪತ್ರಿಕೆಗೆ ತಲುಪಿಸಿದಲ್ಲಿ ನೂಪುರ ಭ್ರಮರಿ ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ. ಈ ಸಂಬಂಧ ಸಹೃದಯರಲ್ಲಿ ಸಿಡಿ, ಡಿವಿಡಿಗಳು ಲಭ್ಯವಿದ್ದಲ್ಲಿ ತಗಲುವ ಖರ್ಚನ್ನು ಭರಿಸಲಾಗುವುದು.
November 3rd, 2008 at 3:02 pm
congradultaions,pls continue ur work.
regards
kavyarani
November 9th, 2008 at 7:04 pm
Congrats… its very nice to see young guns like Manorama doing serious and good job in showcasing Indian Culture to other parts of the world inspite of our youngsters having more of their love towards Western Culture… My hartly regards to her.
November 9th, 2008 at 7:05 pm
Congrats… its very nice to see young guns like Manorama doing serious and good job in showcasing Indian Culture to other parts of the world inspite of our youngsters having more of their love towards Western Culture… My heartly regards to her.