Author: ಮನೋರಮಾ. ಬಿ.ಎನ್
(ಭರತನಾಟ್ಯವನ್ನು ಕಲಿಯುವ ಪ್ರಾಥಮಿಕ ಪೂರ್ವ/ಪ್ರಾಥಮಿಕ/ಪ್ರಾಥಮಿಕ ಅನಂತರ ಹಂತದವರಿಗಾಗಿ)
ಕರ್ನಾಟಕದ ನೃತ್ಯಪರೀಕ್ಷೆ/ಗಂಧರ್ವ/ನಾಟ್ಯಶಾಸ್ತ್ರ/ssಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳಿಗೂ ಉಪಯುಕ್ತ
ಪುಟಗಳು ೩೧೦ ಬೆಲೆ : ೪೦೦ ರೂ
ನೂಪುರ ಭ್ರಮರಿ (ರಿ.)ಮತ್ತು ಕಲಾಗೌರಿ ಸಂಸ್ಥೆಗಳಿಂದ ಪ್ರಕಾಶನ
ಕನ್ನಡ (ಅಧ್ಯಯನನಿಷ್ಠವಾಗಿ ಮೂಲ ಪಠ್ಯ)– ಡಾ. ಮನೋರಮಾ ಬಿ.ಎನ್
ಇಂಗ್ಲೀಷ್‌ಗೆ ಭಾಷಾನುವಾದ : ಶಾಲಿನಿ ಪಿ. ವಿಠಲ್
ಪಠ್ಯ ಪರಿಶೀಲನಾ ಸಮಿತಿ
ಡಾ. ಮನೋರಮಾ ಬಿ.ಎನ್ (ಪಂದನಲ್ಲೂರು, ಕಲಾಕ್ಷೇತ್ರ, ಭರತನೃತ್ಯ ಶೈಲಿ)
(ಬಿ.ಎ, ಸಮೂಹ ಸಂವಹನ/ ಪತ್ರಿಕೋದ್ಯಮ ಎಂಸಿಜೆ, ಎಂಎ ಭರತನಾಟ್ಯ, ಭರತನಾಟ್ಯದ ಸಾಮಾಜಿಕ ಸಂವಹನದಲ್ಲಿ ಪಿಎಚ್‌ಡಿ)
ಕಲಾಸಂಶೋಧಕರು ಮತ್ತು ಸಂಪಾದಕರು- ‘ನೂಪುರ ಭ್ರಮರಿ’ ನೃತ್ಯ ಸಂಶೋಧನ ನಿಯತಕಾಲಿಕೆ, ಕರ್ನಾಟಕ
ವಿದುಷಿ ಶಾಲಿನಿ ವಿಠಲ್ (ಕಲಾಕ್ಷೇತ್ರ, ಭರತನೃತ್ಯ ಶೈಲಿ)
(ಬಿಎಸ್ಸಿ, ಎಂಎ ಭರತನಾಟ್ಯ, ಎಂಫಿಲ್, ಎಂಎಸ್ ಕೌನ್ಸಲಿಂಗ್ ಅಂಡ್ ಸೈಕೋಥೆರಪಿ)
ಕಲಾಸಂಶೋಧಕರು ಮತ್ತು ನಿರ್ದೇಶಕರು ‘ಕಲಾಗೌರಿ’, ಗೌರೀ ನಾಟ್ಯಶಾಲಾ, ಬಸವನಗುಡಿ, ಬೆಂಗಳೂರು
ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು
ಸಂಸ್ಕೃತ-ಕನ್ನಡ ವಿದ್ವಾಂಸರು, ಕವಿ, ರಂಗಕರ್ಮಿ, ನಾಟಕ- ಯಕ್ಷಗಾನ ರಚನೆಕಾರರು, ನೃತ್ಯವಿಮರ್ಶಕರು ಮತ್ತು ಅವಧಾನ ಪೃಚ್ಛಕರು
ಡಾ. ಶೋಭಾ ಶಶಿಕುಮಾರ್, ಬೆಂಗಳೂರು (ವಳವೂರ್, ಭರತನೃತ್ಯ ಶೈಲಿ)
(ಬಿಕಾಂ, ಎಂಕಾಂ, ಎಂಎ ಭರತನಾಟ್ಯ, ಭರತನಾಟ್ಯದ ಆಂಗಿಕ ಮತ್ತು ಸಾತ್ತ್ವಿಕದ ಸಮನ್ವಯದಲ್ಲಿ ಪಿಎಚ್‌ಡಿ, ನಾಟ್ಯಶಾಸ್ತ್ರ ಕರಣಪ್ರಾವೀಣ್ಯರು)
ಕಲಾಸಂಶೋಧಕರು ಮತ್ತು ನಿರ್ದೇಶಕರು- ‘ಮಯೂರಿ ನಾಟ್ಯಶಾಲಾ’ ಅರಕರೆ-ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಡಾ. ದ್ವರಿತಾ ವಿಶ್ವನಾಥ್, ಬೆಂಗಳೂರು (ಕಲಾಕ್ಷೇತ್ರ ಶೈಲಿ)
(ಬಿ.ಎಫ್‌ಎ, ಕಲಾಕ್ಷೇತ್ರ ಡಿಪ್ಲೋಮಾ, ಎಂ ಎ ಸಂಸ್ಕೃತ, ಅಷ್ಟನಾಯಿಕೆಯರ ಕುರಿತು ಪಿಎಚ್‌ಡಿ)
ಕಲಾಸಂಶೋಧಕರು ಮತ್ತು ನಿರ್ದೇಶಕರು ‘ನಿರ್ಮಿತಿ- ಕಲೆ ಸಂಸ್ಕೃತಿಯ ಆಲಯ’, ದೊಡ್ಡಕಲ್ಲಸಂದ್ರ-ಕತ್ರಿಗುಪ್ಪೆ, ಬೆಂಗಳೂರು
ವಿದುಷಿ ಮೀರಾ ಶ್ರೀಕಾಂತ್, ಬೆಂಗಳೂರು (ಕಲಾಕ್ಷೇತ್ರ ಶೈಲಿ)
(ಬಿಎಸ್ಸಿ, ಎಂಸಿಎ, ಎಂಎ ಭರತನಾಟ್ಯ)
ಸಂಶೋಧನಾಸಕ್ತರು, ಕಲಾಶಿಕ್ಷಕರು ಮತ್ತು ನಿರ್ದೇಶಕರು – ‘ನೃತ್ಯಕಂಕಣ, ವಿಜ್ಞಾನ ನಗರ, ಬೆಂಗಳೂರು
ನೀರ್ನಳ್ಳೀ ಗಣಪತಿ ಭಟ್, ಪ್ರವೀಣ್ ಹೆಗಡೆ (ಚಿತ್ರ ರಚನಕಾರರು)
ಪುಸ್ತಕದ ವಿವರ
ಭರತ ನಾಟ್ಯಬೋಧಿನಿ- ಭರತನಾಟ್ಯವನ್ನು ಕಲಿಯುವ ಪ್ರಾಥಮಿಕ ಪೂರ್ವ/ಪ್ರಾಥಮಿಕ/ಪ್ರಾಥಮಿಕ ಅನಂತರ ಹಂತದವರಿಗಾಗಿ ನೃತ್ಯಾಭ್ಯಾಸ ನಡೆಸಲು ಅನುಕೂಲವಾಗುವಂತೆ, ಅರ್ಥ ಮಾಡಿಸಲು ಸುಲಭವಾಗುವಂತೆ ಈ ಕೃತಿಯನ್ನು ಬರೆಯಲಾಗಿದೆ. ಭರತನಾಟ್ಯದ ಅಭ್ಯಾಸ ಮತ್ತು ಪ್ರದರ್ಶನಕ್ಕೆ ಬೇಕಾದ ಶಾಸ್ತ್ರೋಕ್ತ ಪ್ರಯೋಗ ಸಂಸ್ಕಾರವನ್ನು ನೀಡುವುದರತ್ತ ಗಮನವಿರಿಸಿದೆ. ಆ ಮೂಲಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಸಮಗ್ರವಾದ ನೃತ್ಯಾಧ್ಯಯನವು ಸಿದ್ಧಿಸುವಂತೆ ಈ ಪಠ್ಯವು ಸೂಕ್ತ ಪಠ್ಯನಿಯಮಗಳನ್ನು ಹೊಂದಿಸಿಕೊಂಡು ರಚಿತವಾಗಿರುತ್ತದೆ. ಕರ್ನಾಟಕದ ನೃತ್ಯಪರೀಕ್ಷೆ/ಗಂಧರ್ವ/ನಾಟ್ಯಶಾಸ್ತ್ರ/ಅರ್ಹತಾ/ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
ಆಗತಾನೇ ನೃತ್ಯಕ್ಷೇತ್ರದಲ್ಲಿ ಹೆಜ್ಜೆಯಿಡುವವರಿಂದ ಮೊದಲ್ಗೊಂಡು ಒಂದೊಂದೇ ಮೆಟ್ಟಿಲುಗಳನ್ನು ಕಲಿಕೆಯಲ್ಲಿ ಏರುತ್ತಾ ಮಾಧ್ಯಮಿಕ(ಸೀನಿಯರ್ ಹಂತ)ದ ಬಾಗಿಲನ್ನು ಬಡಿಯುವ ಪ್ರಾಥಮಿಕ ಅನಂತರದ ವಿದ್ಯಾಭ್ಯಾಸಿಗಳಿಗೂ ಹೊಂದಬಲ್ಲ ಪಠ್ಯವಿದು.
ಕರ್ನಾಟಕವೊಂದಕ್ಕೇ ಈ ಪಠ್ಯವು ಸೀಮಿತವಾಗಿರದೆ ಎಲ್ಲಾ ಭಾಷೆ, ಪ್ರದೇಶ, ಹೊರನಾಡಿನ ಕಲಾಭ್ಯಾಸಿಗಳಿಗೂ ಅನುಸರಿಸುವ ಮಟ್ಟಿಗೆ ವಿಸ್ತಾರವುಳ್ಳದ್ದು. ಕನ್ನಡದೊಂದಿಗೇ ಇರುವ ಇಂಗ್ಲೀಷ್ ಅವತರಣಿಕೆಯು ಉಭಯ ವಿಷಯ ಪರಾಮರ್ಶನಕ್ಕೂ, ಭಾಷಾವಿವೇಕಕ್ಕೂ ಮತ್ತು ಭಾಷಾಸೀಮೆಯನ್ನು ವಿಸ್ತರಿಸಿಕೊಳ್ಳುವ ನೆಲೆಗಳಿಗೂ ಅನುಕೂಲಕಾರಿ.
ಬದಲಾದ ಕಾಲಕ್ಕನುಗುಣವಾಗಿ ರೂಪಿತವಾಗಿರುವ ವಿದ್ಯಾಭ್ಯಾಸ ಮತ್ತು ಪರೀಕ್ಷಾ ಕ್ರಮ, ಉತ್ತರಪತ್ರಿಕೆಗಳಲ್ಲಿ ಅನುಸರಿಸಬೇಕಾದ ರೀತಿನೀತಿ, ನೃತ್ಯಾಭ್ಯಾಸ ಮತ್ತು ಶಿಕ್ಷಣಕ್ರಮವನ್ನು ಗಮನಿಸಿ ಈ ಪಠ್ಯವನ್ನು ರೂಪಿಸಲಾಗಿದೆ. ಸಂಶೋಧನೆಗಳನ್ನು ಪ್ರಯೋಗಸ್ನೇಹಿಯಾಗಿ, ವಿದ್ಯಾರ್ಥಿಪ್ರಿಯವಾಗಿ, ಸಾಮಾನ್ಯಜನರಿಗೆ ಓದಿಕೊಂಡು ಅರ್ಥ ಮಾಡಿಕೊಂಡು ಹೋಗುವ ನೆಲೆಯಲ್ಲಿ ಮಾಡುವ ಪ್ರಯತ್ನವೂ ಈ ಪುಸ್ತಿಕೆಯಲ್ಲಿದೆ.
ಪ್ರಾಮಾಣಿಕವಾಗಿ ನೃತ್ಯಾಭ್ಯಾಸ ಮತ್ತು ಕಲಿಕೆಯನ್ನೇ ಗುರಿಯಾಗಿಸಿರುವ ಗುರುಗಳಿಗೆ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರುಗಳಿಗೆ ಈ ಪಠ್ಯದಿಂದ ಪ್ರಯೋಜನವಾದೀತೆಂಬ ನಂಬುಗೆ ನಮ್ಮದು. ನೃತ್ಯಕಲಿಕೆಯಲ್ಲಿ ಆಗುವ ಉಭಯನೆಲೆಯ ಮನೋಕ್ಲೇಶಗಳಿಗೆ ಇದರಿಂದ ಸಮಾಧಾನ ದೊರಕಬಹುದೇನೋ ಎಂಬ ದೂರಗಾಮಿ ಚಿಂತನೆಯೂ ಇದೆ.
ಶಾಸ್ತ್ರಗ್ರಂಥ ವಿಚಾರಗಳನ್ನು ವಿದ್ಯಾರ್ಥಿಸ್ನೇಹಿಯಾಗಿ, ಪ್ರಯೋಗನಿಷ್ಠವಾಗಿ ಹೇಗೆ ರೂಪಿಸಬಹುದೋ ಆ ಬಗೆಯಲ್ಲಿ ಈ ಕೃತಿಯನ್ನು ಬರೆಯಲಾಗಿದೆ. ಸಮಕಾಲೀನ ಭರತನಾಟ್ಯ ಕ್ಷೇತ್ರದಲ್ಲಿ ಶಾಸ್ತ್ರವು ಪ್ರಯೋಗವಾಗಿ ಅನ್ವಯವಾಗುವ ವಿವೇಚನೆ ಮತ್ತು ಪ್ರಯೋಗದಲ್ಲಿ ಲುಪ್ತವಾಗುತ್ತಿರುವ ಶಾಸ್ತ್ರಾಂಶಗಳನ್ನೂ ಹೇಳಲಾಗುತ್ತಿದೆ. ಸೂಕ್ತವಾದ ಛಾಯಾಚಿತ್ರ ಮತ್ತು ನುರಿತ ಚಿತ್ರಕಲಾವಿದರಿಂದ ಚಿತ್ರಗಳನ್ನು ವಿಶೇಷವಾಗಿ ಬರೆಸಿಕೊಳ್ಳಲಾಗಿದೆ.
೧೦ ಪ್ರತಿಗಳಿಂದ ಹೆಚ್ಚಿಗೆ ಪುಸ್ತಕವನ್ನು ಖರೀದಿಸುವ ನೃತ್ಯಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕದ ಬೆಲೆಯಲ್ಲಿ ೧೦% ರಿಯಾಯಿತಿ ಇದೆ. ಪುಸ್ತಕ ಅನಾವರಣದ ದಿನದಂದು ೫೦ ರೂ (೧೪.೫%) ರಿಯಾಯಿತಿ ಇದೆ.