Author: ಡಾ. ಮನೋರಮಾ ಬಿ.ಎನ್
(ಡಾ.ಮನೋರಮಾ ಬಿ.ಎನ್ ಅವರ ’ಮುದ್ರಾರ್ಣವ’ ಕೃತಿ ಅಧ್ಯಯನ ಸರಣಿ)
ಲಕ್ಷಣ: ಇದನ್ನು ಗಂಡ ಭೇರುಂಡ ಹಸ್ತ ಎಂದೂ ಹೇಳುತ್ತಾರೆ. ಕಪಿತ್ಥ ಹಸ್ತಗಳನ್ನು ಮಣಿಕಟ್ಟಿನ ಬಳಿ ಸ್ವಸ್ತಿಕಾಕಾರವಾಗಿ ಹಿಡಿಯುವುದರಿಂದ ಏರ್ಪಡುತ್ತದೆ.
ವಿನಿಯೋಗ : ಭೇರುಂಡ ಪಕ್ಷಿ, ಪಕ್ಷಿದಂಪತಿ
ಗಂಡಭೇರುಂಡ ಪಕ್ಷಿಯನ್ನು ಸೂಚಿಸಲು ಭರತಾರ್ಣವ ಗ್ರಂಥದಲ್ಲಿ ಅರ್ಧಚಂದ್ರಹಸ್ತಗಳನ್ನು ಮಣಿಕಟ್ಟಿನ ಬಳಿಸೇರಿಸಿ ಬೆರಳುಗಳನ್ನು ಬಿಡಿಸುತ್ತ ಅಧೋಮುಖವಾಗಿ ಚಲಿಸುವುದರ ಮೂಲಕವಾಗಿಯೂ ಮಾಡಬಹುದು ಎನ್ನಲಾಗಿದ್ದು ಇದು ಪಕ್ಷಿ ಹಸ್ತಗಳ ಪೈಕಿ ಒಂದೆನಿಸಿದೆ.