Author: ಡಾ.ಮನೋರಮಾ ಬಿ.ಎನ್
(ಸಂಪಾದಕಿ ಮನೋರಮಾ ಬಿ.ಎನ್ ಅವರ ಹಸ್ತಮುದ್ರೆಗಳ ಕುರಿತ ಸಂಶೋಧನ ಗ್ರಂಥ ‘ಮುದ್ರಾರ್ಣವ’ದಿಂದಾಯ್ದ ಸರಣಿ ಅಧ್ಯಯನಲೇಖನ)
ಲಕ್ಷಣ: ಚತುರ ಹಸ್ತಗಳನ್ನು ಮೇಲ್ಮುಖವಾಗಿ ಮಾಡಿ ಒಂದರ ಮೇಲೊಂದನ್ನಿಟ್ಟು ಕಿರು, ತೋರು ಮತ್ತು ಹೆಬ್ಬೆರಳನ್ನು ಬಿಡಿಸಿದರೆ ಖಟ್ಟಾಹಸ್ತ. ಖಟ್ಟಾ ಎಂದರೆ ಮಂಚ ಎಂದರ್ಥ.
ವಿನಿಯೋಗ : ಮಂಚ (ಮಲಗುವ ಹಾಸಿಗೆ), ಮೇನೆ, ಪಲ್ಲಕ್ಕಿ. ಅಭಿನಯ ದರ್ಪಣ ಗ್ರಂಥದ ಪ್ರಕಾರ ಖಟ್ವಾ ಹಸ್ತವನ್ನು ಎಡಗೈಯಲ್ಲಿ ಮೇಲ್ಮುಖವಾಗಿ ಎದೆಯ ಮುಂದೆ ಹಿಡಿದು, ಬಲಗೈಯಲ್ಲಿ ಶಕಟಹಸ್ತವನ್ನು ಬಲಗಿವಿಯ ಹತ್ತಿರ ಹಿಡಿಯುವುದರಿಂದ ನ್ತ್ಯ ದಿಕ್ಕಿನ ಅಧಿಪತಿಯಾದ ನಿಋತಿಯನ್ನು ಸೂಚಿಸಿದಂತಾಗುತ್ತದೆ ಎಂದಿದ್ದು ನವಗ್ರಹ ಹಸ್ತಗಳಲ್ಲಿ ಒಂದೆನಿಸಿದೆ.