Author: ಮನೋರಮಾ. ಬಿ.ಎನ್
ಸಂಚಿಕೆ ವಿಷಯ, ಶೈಲಿ, ಮುಖಪುಟ ಮತ್ತು ಮುದ್ರಣದೊಂದಿಗೆ ಹಿತವಾಗಿ, ಚೆಲುವಾಗಿ ಬಂದಿದೆ. ಹಿರಿಯ ಸಾಧಕರ ನೆನಪಾಗಿ ರುಕ್ಮಿಣೀದೇವಿ ಅರುಂಡೇಲ್ ಅವರ ಬಗ್ಗೆ ಬರೆಯುತ್ತಿರುವುದು ತುಂಬಾ ಒಳ್ಳೆಯ ವಿಷಯ. ಜೊತೆಗೆ ತೆರೆಮರೆಯ, ತೆರೆಯದಿರುವ, ತೆರೆಯೆದುರಿನ ಯಾವ ಸಾಧಕರೇ ಆಗಿರಲಿ, ಅವರ ಬಗ್ಗೆ ಸೂಕ್ಷ್ಮ, ಆಪ್ತ, ಅಪರೂಪದ ಮಾಹಿತಿ ಹೀಗೆಯೇ ನೀಡುತ್ತಿರಿ.
’ಈಗಿನ ಯುವಜನಾಂಗ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿದೆ’ ಎಂಬ ಆರೋಪಗಳ ಹಿನ್ನಲೆಯಲ್ಲೇ ಈ ಭಾರತೀಯ ಸಂಸ್ಕೃತಿಯೆಡೆಗಿನ ಅರಿವನ್ನು ಬೆಳೆಸುವಲ್ಲಿ, ತಮ್ಮ ಮತ್ತು ಬಳಗದ ಗಂಭೀರ ಮತ್ತು ವಿಚಾರಯುತವಾದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಅಕ್ಕ ಸ್ಮರಣಸಂಚಿಕೆಯಲ್ಲಿನ ಲೇಖನಕ್ಕೆ ಸಂಪಾದಕರಿಗೆ ದೊರೆತ ಪ್ರಶಸ್ತಿ ಸಂತಸ ತಂದಿದೆ. ಆತ್ಮೀಯ ಅಭಿನಂದನೆ. ಇಂತಹ ಸಾಧನೆಗಳು ಮತ್ತಷ್ಟು ನಿಮ್ಮಿಂದ ಹೊರಬರಲಿ.
-ಸಂಜಯ ಭಟ್ ಬೆಣ್ಣೆ, ಶಿರಸಿ,
-ಕಾವ್ಯ ರಾಣಿ, ಬೆಂಗಳೂರು.
– ಕಿರಣ್ ಭಟ್, ಬೆಂಗಳೂರು.