ಅಂಕಣಗಳು

Subscribe


 

ಚಕ್ರ ಹಸ್ತ

Posted On: Thursday, August 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಎಡಗೈ ಅರ್ಧಚಂದ್ರ (ಹೆಬ್ಬೆರಳನ್ನು ನಿಡಿದಾಗಿ ಪ್ರತ್ಯೇಕವಾಗಿರಿಸಿ ಉಳಿದ ಬೆರಳುಗಳನ್ನು ನೇರವಾಗಿ ಒತ್ತೊತ್ತಾಗಿ ಹಿಡಿಯುವುದು) ಹಸ್ತದ ಮೇಲೆ ಬಲಗೈ ಅರ್ಧಚಂದ್ರ ಹಸ್ತವನ್ನು ಅಡ್ಡಲಾಗಿ ಇರಿಸುವುದು. ಅಭಿನಯದರ್ಪಣವನ್ನುಳಿದು ಇನ್ನಾವ ಶಾಸ್ತ್ರಗ್ರಂಥಗಳಲ್ಲಿಯೂ ಚಕ್ರಮುದ್ರೆಯ ಪ್ರಧಾನ ಪ್ರಸ್ತಾಪವಿಲ್ಲ.

chakra 1

ವಿನಿಯೋಗ : ವಿಷ್ಣುವಿನ ಚಕ್ರ.

ಯಕ್ಷಗಾನದಲ್ಲಿ ಕಪಟ ಎಂದು ತೋರಿಸಲು ಬಳಸುತ್ತಾರೆ. ನಿತ್ಯಜೀವನದಲ್ಲಿ ಅಂಗೈ ತಿಕ್ಕುವುದು, ರಸ ಹಿಂಡುವಾಗ ಬಳಸುತ್ತಾರೆ.

ಇದು ಧಾರಕ ಮುದ್ರೆಯಾಗಿದ್ದು ದೇವ-ದೇವತೆಗಳಲ್ಲಿ, ಶಿಲ್ಪಗಳಲ್ಲಿ ಕಂಡುಬರುತ್ತದೆ. ಒಡಿಸ್ಸಿ, ಕಥಕ್ ನೃತ್ಯಗಳಲ್ಲೂ ಇದರ ಬಳಕೆಯಿದ್ದು; ಕಥಕಳಿಯಲ್ಲಿ ಚಕ್ರವನ್ನು ತೋರಿಸಲು ಪತಾಕವನ್ನು ಬಳಸುತ್ತಾರೆ. ದೇವಪೂಜಾ ವಿಧಿಯಲ್ಲಿ ಬರುವ ಸಂರಕ್ಷಣಾರ್ಥಂಕಲಶವಿಧಿಗೆ ಚಕ್ರಮುದ್ರೆಯನ್ನು ಹೋಲುವಂತೆ ಅರ್ಧಚಂದ್ರ ಹಸ್ತದ ಬೆರಳುಗಳನ್ನು ಸ್ವಲ್ಪ ಬಿಡಿಸಿ ಹಿಡಿಯಲಾಗುತ್ತದೆ. ನಿವೇದನ, ಮಂಡಲಾರ್ಚನೆ, ಜಪ, ಶಯನವೆಂಬ ವಿವಿಧ ದೇವತೋಪಚಾರವಿಧಿಗೂ ಇದರ ಬಳಕೆಯಿದೆ. ಅಂತೆಯೇ ಒಂದು ಅಂಗೈ ಮೇಲೆ ಇನ್ನೊಂದು ಅಂಗೈಯನ್ನು ಕಿರುಬೆರಳು ಹೆಬ್ಬೆರಳನ್ನು ಸ್ಪರ್ಶಿಸುವಂತೆ ಇಡುವುದು ಕೂಡ ಚಕ್ರ ಮುದ್ರೆಯೆನಿಸಿಕೊಳ್ಳುತ್ತದೆ. ಇದೊಂದು ಚೈತನ್ಯದಾಯಿ ಮುದ್ರೆಯೆನಿಸಿದ್ದು; ಅಪಾರಶಕ್ತಿ ಸಾಮರ್ಥ್ಯದ ವೃದ್ಧಿಗೆ, ವಿವಿಧ ತತ್ವಗಳ ಸಮತೋಲನೆಗೆ, ಮನೋಚಂಚಲತೆಯ ನಿವಾರಣೆಗೆ ಸೂಕ್ತವೆನಿಸಿದೆ. ಊರ್ಧ್ವಪುಂಡ್ರ ವಿಧಿಯ ಮುದ್ರಾಧಾರಣದಲ್ಲಿ; ದೇವಪೂಜೆಯ ಭೂತೋಚ್ಚಾಟನಂ ವಿಧಿಯಲ್ಲಿ ಚಕ್ರಮುದ್ರೆಯ ಬಳಕೆಯಿದೆ.

Leave a Reply

*

code