ಅಂಕಣಗಳು

Subscribe


 

ಆರನೇ ವರ್ಷದ ಸಂಚಿಕೆ ನಿಜವಾಗಿಯೂ ಕೃತಿರತ್ನ

Posted On: Sunday, April 14th, 2013
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕಿ

ಬೆಂಗಳೂರಿನ ನೃತ್ಯಕಲಾವಿದರಾದ ಸುಧೀರ್ ಕುಮಾರ್, ದ್ವರಿತಾ ವಿಶ್ವನಾಥ್ ದಶವರ್ಷ ಪರ್ಯಂತ ಪತ್ರಿಕೆಯ ಚಂದಾಸದಸ್ಯರಾಗಿದ್ದು; ಕರ್ನಾಟಕದೆಲ್ಲೆಡೆಯಿಂದ ಹಲವು ಮಂದಿ ಈ ವರ್ಷದ ಚಂದಾದಾರರಾಗಿದ್ದಾರೆ. ಕಳೆದ ಬಾರಿಯ ಏಳನೇ ವರ್ಷದ ವಿಶೇಷ ಸಂಚಿಕೆಗೆ ಮೌಖಿಕವಾಗಿ ಮತ್ತು ಪತ್ರದ ರೂಪದಲ್ಲಿ ಹಲವು ಸದಭಿಪ್ರಾಯ ಮತ್ತು ಹಾರೈಕೆಗಳು ಒದಗಿಬಂದಿದ್ದು ಸ್ಥಳಾಭಾವದ ಹಿನ್ನೆಲೆಯಲ್ಲಿ ಆಯ್ದ ಒಂದು ಪತ್ರವನ್ನಷ್ಟೇ ಪ್ರಕಟಿಸುತ್ತಿದ್ದೇವೆ.

ಆರನೇ ವರ್ಷ ಪೂರ್ಣಗೊಳಿಸಿದ ಸಂಚಿಕೆ ನಿಜವಾಗಿಯೂ ಕೃತಿರತ್ನ. ತುಸು ಸಣ್ಣದಾಗಿದ್ದ ಪತ್ರಿಕಾ ಆಕಾರವು ಈ ಬಾರಿ ದೊಡ್ಡದಾಗಿರುವುದಷ್ಟೇ ಅಲ್ಲದೆ; ಅಲಂಕಾರಿಕವೂ ಆಗಿದೆ. ಬಹುಷಃ ಪೌರ್ಣಮಿ-ಹೋಳಿಹಬ್ಬ-ಸಂಕಷ್ಟ ಚತುರ್ಥಿಗಳ ಹೊನ್ನ ಬೆಳಕಿಗೆ ಬೆಳಗಿದೆ ! ಮುಖಪುಟದಿಂದಲೇ ಲಲಿತಲಹರಿಯ ಮಹಾನಟನ ಲೇಖನವು ಅತ್ಯದ್ಭುತವಾಗಿ ಹೊರಹೊಮ್ಮಿದ್ದು; ಕಲಾಬಾಂಧವ್ಯದ ಎಲ್ಲಾ ಲೇಖನಗಳೂ ಹೃದಯತಲ್ಲೀನ ಆಗುವಂತವುಗಳೇ. ಜೊತೆಗೆ ಸಂಪಾದಕಿಯವರ ಸಾಹಿತ್ಯ ಸಂಪತ್ತನ್ನು ಹತ್ತಾರು ಬಾರಿ ಹೊಗಳಿದರೂ ಸಾಲದೆಂಬುದು ನನ್ನ ಅಭಿಪ್ರಾಯ.

ನೂಪುರ ಭ್ರಮರಿಯಿಂದ ತಮಗೆ ಗಳಿಕೆ-ಲಾಭಾಂಶಗಳು ಸಿಕ್ಕಿರಲಾರದು. ಆದರೆ ಓದುಗರ ಅಪ್ಪುಗೆ ಆಲಿಂಗನ ಸದಾ ನಿಮ್ಮ ತಂಡದೊಂದಿಗಿರುತ್ತದೆ. ತಮ್ಮ ಪತ್ರಿಕೆಯು ಸಹಸ್ರಾರು ವರ್ಷ ಬಾಳಿ ಬೆಳಗಲಿ. ನಟರಾಜನು ಆಯುಸ್ಸು ಆರೋಗ್ಯ-ಭಾಗ್ಯಗಳನ್ನು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ.

–    ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರುಗಳು, ಮಂಗಳೂರು.

Leave a Reply

*

code