Author: ಮನೋರಮಾ. ಬಿ.ಎನ್
ಲಕ್ಷಣ: ಎರಡು ಭ್ರಮರ ಹಸ್ತಗಳಲ್ಲಿ (ಅಂದರೆ ಹೆಬ್ಬೆರಳಿನ ಬುಡದ ಗಿಣ್ಣಿಗೆ ತೋರುಬೆರಳ ತುದಿಯನ್ನು ವೃತ್ತಾಕಾರದಲ್ಲಿ ತಾಗುವಂತೆ ಹಿಡಿದು ಹೆಬ್ಬೆರಳ ತುದಿಗೆ ಮಧ್ಯಬೆರಳನ್ನು ತಾಗಿಸುವುದು) ಹೆಬ್ಬೆರಳು ಮತ್ತು ಮಧ್ಯ ಬೆರಳುಗಳನ್ನು ಮಾಡಿ ಹಿಡಿಯುವುದು. ಶಕಟವೆಂದರೆ ಬಂಡಿ ಎಂದರ್ಥ. ಅಭಿನಯ ದರ್ಪಣ ಗ್ರಂಥದ ಪ್ರಕಾರ ಇದು ನೃತ್ತಹಸ್ತ ಪ್ರಕಾರಕ್ಕೂ ಸೇರಿದ್ದಾಗಿದೆಯಾದರೂ ನೃತ್ಯನಿರ್ಮಾಣಕ್ಕೆ ಅನುಗುಣವಾದ ಹಸ್ತವ್ಯಾಖ್ಯಾನ ಅದರಲ್ಲಿ ಕಂಡುಬಂದಿಲ್ಲ. ಗಾಯತ್ರೀ ನ್ಯಾಸ/ಮಂತ್ರದಲ್ಲಿ ಈ ಶಕಟ ಮುದ್ರೆಯ ಬಳಕೆಯನ್ನು ‘ವ’ ಅಕ್ಷರಕ್ಕೆ ಹೇಳಲಾಗಿದ್ದು ; ಎರಡೂ ಕೈಗಳ ಹೆಬ್ಬೆರಳ ತುದಿಗಳನ್ನು ಸ್ಪರ್ಶಿಸಿ ತೋರು ಬೆರಳುಗಳನ್ನು ನೇರ ಮೇಲಕ್ಕೆ ನೀಳವಾಗಿಸಿ ಮಾಡಿ ಉಳಿದ ಬೆರಳುಗಳನ್ನು ಅಂಗೈಯೊಳಗೆ ಮಡಚುವುದು ಅಲ್ಲಿನ ವಿಧಿಯಾಗಿದೆ.
ವಿನಿಯೋಗ: ರಾಕ್ಷಸ, ಪ್ರಾಜ್ಞ. ನಿಋತಿ ಮತ್ತು ನರಸಿಂಹಾವತಾರ(ನೃಸಿಂಹ) ಹಸ್ತಕ್ರಮದಲ್ಲೂ ಶಕಟ ಹಸ್ತದ ಬಳಕೆಯಿದೆಯೆಂದು ಗ್ರಂಥಗಳು ಸೂಚಿಸಿವೆ.