ಕರ್ನಾಟಕ –ತಮಿಳ್ನಾಡು ಆಸ್ಥಾನ ನೃತ್ಯಪರಂಪರೆ ಕಲಿಕೆಯಲ್ಲಿ ಹೊಸ ಪ್ರಯತ್ನ : ‘ಶಾಸ್ತ್ರಪ್ರಯೋಗ ನೃತ್ಯಚಿಂತನ’

Posted On: Thursday, June 11th, 2015
1 Star2 Stars3 Stars4 Stars5 Stars (No Ratings Yet)
Loading...

Author: Editor

ನೂಪುರ ಭ್ರಮರಿ (ರಿ.) ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.)ಯ ಸಹಯೋಗದಲ್ಲಿ ನಡೆಯುತ್ತಿರುವ ವಿನೂತನ ಮಾರ್ಗದರ್ಶೀ ಪ್ರಯತ್ನಗಳ ಪೈಕಿ ಈ ವರುಷ ಕರ್ನಾಟಕ-ತಮಿಳ್ನಾಡು ಆಸ್ಥಾನ ಮತ್ತು ಆಲಯ ನೃತ್ಯಪ್ರಂಪರೆಯಲ್ಲಿ ಚಾಲ್ತಿಯಲ್ಲಿದ್ದ ಹಳೆಯ ನೃತ್ಯಬಂಧಗಳ ಪುನರ್ ನವೀಕರಣವೂ ಒಂದಾಗಿದೆ. ಭರತನಾಟ್ಯದ ಅಲರಿಪ್ಪುವಿನಿಂದ ಮೊದಲ್ಗೊಂಡು ತಿಲ್ಲಾನದ ವರೆಗೆ ಸಾಗುವ ಎಂದಿನ ಮಾರ್ಗಪದ್ಧತಿಯ ನಡುವೆಯೇ ಈ ಮಾದರಿಯ ಹಳೆಯ ಸಂಪ್ರದಾಯದ ಪುನರ್ ಶೋಧನೆ ಮತ್ತು ಅವುಗಳ ಸೃಷ್ಟಿಶೀಲ ಪ್ರಯೋಗ ಇದಾಗಿದೆ. ಈ ವಿಶೇಷ ನೃತ್ಯಬಂಧಗಳ ಸಂಶೋಧನೆ, ಪುನರ್ ನವೀಕರಣಕ್ಕೆ ಪೂರಕವಾಗಿ ಇದೇ ಮೇ 25, 26, 2015ರಂದು  ಪುತ್ತೂರಿನಲ್ಲಿ ಎರಡು ದಿನಗಳ ರಾಜ್ಯಮಟ್ಟದ ‘ಶಾಸ್ತ್ರ ಪ್ರಯೋಗ ನೃತ್ಯಚಿಂತನ’ ಎಂಬ ಕಾರ್ಯಾಗಾರ ನಡೆದು ಯಶಸ್ಸನ್ನೂ ಕಂಡಿದೆ.

ಇದನ್ನು ಯಶಸ್ವಿಯಾಗಿ ಭವಿಷ್ಯದಲ್ಲಿಯೂ ಮುಂದುವರೆಸಿಕೊಂಡು ಹೋಗುವ ಉದ್ದೇಶದಿಂದ ಶಾಸ್ತ್ರ ಮತ್ತು ಪ್ರಯೋಗ ತರಗತಿಗಳೆರಡನ್ನೂ  ವಿನ್ಯಾಸ ಮಾಡಲಾಗಿದ್ದು; ಅಭ್ಯರ್ಥಿಗಳ ವಯಸ್ಸು ಮತ್ತು ಅರ್ಹತೆಗಳನ್ನಾಧರಿಸಿ ತಂಡಗಳ ವಿಭಾಗದಲ್ಲಿ ಕಲಿಕೆಯನ್ನು ನಡೆಸಲಾಗುತ್ತದೆ.
ಈ ಕಲಿಕಾಕ್ರಮದಲ್ಲಿ ಈ ಕಾಲಕ್ಕೆ ಮರೆಯಾಗಿರುವ ರಾಜಾಶ್ರಯ ಮತ್ತು ಆಲಯ ನೃತ್ಯಪದ್ಧತಿಗಳಲ್ಲಿ ಬೆಳೆದುಬಂದ ವಿಶೇಷವಾದ ಪಾರಂಪರಿಕ ನೃತ್ಯಬಂಧಗಳು-ಸ್ವರಸರಿ, ವಳವೂರು ತೋಡಯಂ, ನಾಂದೀ ಸ್ವನ, ರಾಗಾನುರಾಗತಿನೃತ್ತ, ಉಪೋದ್ಘಾತ ಬಂಧ, ಸ್ವರಜತಿ, ನಾಟ್ಯಶಾಸ್ತ್ರಾಧಾರಿತ ಕೌತ್ವ-ಶಬ್ದ-ಶ್ಲೋಕಗಳು ಇವುಗಳ ಪೈಕಿ ಪ್ರಮುಖವೆನಿಸಿವೆ. ಕಲಿಯಲು ಅಪೇಕ್ಷೆ ಪಡುವ ಆಸಕ್ತ ವಿದ್ಯಾರ್ಥಿ/ಕಲಾವಿದರು 9964140927 ಸಂಪರ್ಕಿಸಿ.
******************

Leave a Reply

*

code