Author: ಮನೋರಮಾ. ಬಿ.ಎನ್
ಮನೋರಮಾ ಬಿ. ಎನ್ ಅವರ ನೃತ್ಯಸಂವೇದನೆಯ ‘ಮುದ್ರಾರ್ಣವ’– ಹಸ್ತಮುದ್ರೆಗಳ ಸಂಶೋಧನಾ ಕೃತಿಯ ತರುವಾಯ ‘ಶ್ರೀ ಸಾನಿಧ್ಯ ಪ್ರಕಾಶನ’ದಿಂದ ಅನಾವರಣಗೊಂಡ ಮತ್ತೊಂದು ನೃತ್ಯ ಸಂವೇದನೆಯ ಕೃತಿ ‘ನೃತ್ಯಮಾರ್ಗ ಮುಕುರ’. ಭರತನಾಟ್ಯದ ಮಾರ್ಗಪದ್ಧತಿಯ ಮಜಲುಗಳನ್ನು, ನೃತ್ಯಾಂಗಗಳನ್ನು ದಾಖಲಿಸುವ, ಸಮಗ್ರ ಸಂಕ್ಷಿಪ್ತ ವಿವರವನ್ನೀಯುವ ೧೨೫ ಪುಟಗಳ ಈ ಕೃತಿ, ಆಸಕ್ತ ಸಹೃದಯರ ಪಾಲಿಗೆ ಸಾಕಲ್ಯ ದೃಷ್ಟಿಯ ಅಧ್ಯಯನಸಾಮಗ್ರಿ. ಪುಸ್ತಕದ ಬೆಲೆ: ೧೨೫ರೂ.
ಭರತನಾಟ್ಯ-ಭರತನ ನಾಟ್ಯಶಾಸ್ತ್ರ ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. ‘ಇಂದಿನ’ ಭರತನಾಟ್ಯ ಎಂಬ ನೃತ್ಯಪದ್ಧತಿಗೂ‘ಅಂದಿನ’ ಭರತನ ನಾಟ್ಯಶಾಸ್ತ್ರಗ್ರಂಥಕ್ಕೂ ಇರುವ ಸಂಬಂಧಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯುತ್ತಿದ್ದರೂ ತಾರ್ಕಿಕ, ತಲಸ್ಪರ್ಶಿಯಾದ ಅಧ್ಯಯನಗಳಾಗಿರುವುದು ಬೆರಳೆಣಿಕೆಯಷ್ಟು. ಈ ನಿಟ್ಟಿನಲ್ಲಿ ‘ನೃತ್ಯ ಮಾರ್ಗ ಮುಕುರ’ ಭರತನಾಟ್ಯ ನೃತ್ಯಮಾರ್ಗಕ್ಕೆ ಹಿಡಿದ ಕೈಗನ್ನಡಿಯೇ ಆಗಿರುವುದು ಅಭಿನಂದನೀಯ.- ಎಂದಿದ್ದಾರೆ ಪುಸ್ತಕಕ್ಕೆ ನಲ್ನುಡಿಯನ್ನಿತ್ತ ಖ್ಯಾತ ಕಲಾ-ಇತಿಹಾಸ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ.
ಪುಸ್ತಕಗಳಿಗೆ ಬೆಂಗಳೂರಿನ ಸಪ್ನಾ ಬುಕ್ ಹೌಸ್, ಗಾಂಧೀನಗರ; ಅಂಕಿತ ಬುಕ್ ಹೌಸ್, ಗಾಂಧೀಬಜಾರ್; ಗೋಖಲೆ ಸಂಸ್ಥೆ, ಬಸವನಗುಡಿ,ಮಂಗಳೂರಿನ ಅತ್ರಿ ಬುಕ್ ಹೌಸ್ ಅಥವಾ ನೂಪುರ ಭ್ರಮರಿ ಪತ್ರಿಕೆ, ಉಡುಪಿ ವಲಯದ ಪ್ರಸರಣಾ ಮುಖ್ಯಸ್ಥ ರಾಮ ಭಟ್ ಅವರನ್ನು ಸಂಪರ್ಕಿಸಬಹುದು.