ಅಂಕಣಗಳು

Subscribe


 

ಸಂದಂಶ ಹಸ್ತ

Posted On: Monday, February 14th, 2011
1 Star2 Stars3 Stars4 Stars5 Stars (1 votes, average: 1.00 out of 5)
Loading...

Author: ಮನೋರಮಾ. ಬಿ.ಎನ್

ಸರಸ್ವತೀದೇವಿಯು ಅಕ್ಷಮಾಲೆ ಹಿಡಿದಾಗ ಜನಿಸಿದ ಹಸ್ತ. ವಿದ್ಯಾಧರ ವರ್ಣ, ಶ್ವೇತ ಬಣ್ಣ, ಋಷಿ : ವಿಶ್ವಾವಸು, ಅಧಿದೇವತೆ : ವಾಲ್ಮೀಕಿ.

ವಿನಿಯೋಗ : ಹೊಟ್ಟೆ, ಬಲಿ (ದಾನ) ಕೊಡುವುದು, ಹುಣ್ಣು, ಹುಳ, ಮನೋಭಯ, ಪೂಜೆ ಮಾಡುವುದು, ಐದು ಎಂದು ಸೂಚಿಸುವುದು, ಎಲ್ಲಾ ಜಂತುಗಳಿಗೆ ಆಹಾರ ನೀಡುವುದು.

ಇತರೇ ವಿನಿಯೋಗ : ಮಲ್ಲಿಗೆ ಮುಂತಾದ ಹೂ ಬಿಡಿಸುವುದು, ಪೋಣಿಸುವುದು, ಮುಳ್ಳನ್ನು ಕೀಳುವುದು, ಬತ್ತಿ ಮತ್ತು ಕಡ್ಡಿಗಳನ್ನು ಹಣತೆಗೆ ಹಾಕುವುದು, ಯಜ್ಞೋಪವೀತ ಧಾರಣ, ಚುಚ್ಚುವುದು, ಚಿತ್ರಲೇಖನ, ಮುತ್ತಿನಲ್ಲಿ ತೂತು ಮಾಡುವುದು, ತಾಂಬೂಲ ಚರ್ವಣ, ದಕ್ಷಿಣಾಮೂರ್ತಿಮುದ್ರೆ, ಸರಸ್ವತೀಮುದ್ರೆ, ರತ್ನ ಪರೀಕ್ಷೆ, ಬಟ್ಟೆಯನ್ನು ಕಟ್ಟಿಕೊಳ್ಳುವುದು, ಅಭಿಷೇಕ, ಈರ್ಷ್ಯೆ, ಕೋಪದಿಂದ ನಿಂದಿಸಿ ನುಡಿಯುವುದು, ಹೆದೆ ಏರಿಸುವುದು, ಅಲ್ಪ, ಯೋಗ, ತತ್ವಗಳನ್ನು ತಿಳಿಸುವುದು, ಮಾತಾಡುವುದು, ಕೋಪದ ಮಾತು, ಅರಗು ಮೊದಲಾದವುಗಳನ್ನು ಹಿಂಡುವುದು, ಮುತ್ತು, ಜಲಬಿಂದು, ರೋಮಾಂಚ, ರುದ್ರಾಕ್ಷಿ, ಉದ್ದೇಶಿತ ಸಾಧನೆ, ನಕ್ಷತ್ರಗಳು, ಗುಳಿಗೆ, ನಿಧಾನ, ಸಂಖ್ಯೆ ಏಳು, ಬಣ್ಣ ಹಚ್ಚುವುದು, ಭಸ್ಮ, ಬೆಳ್ಳಿ, ನಯ, ಪರಿಮಳ, ಚಿಂತೆ, ಕಾರಣಭೇಧ, ಸಿಟ್ಟಿನಿಂದ ಧಿಕ್ಕಾರ ಎನ್ನಲು, ನಿಂದೆ, ಅಸೂಯೆ, ಕೆಟ್ಟಮಾತು ಎಂದು ಅಭಿನಯಿಸಲು, ಎಲೆಗಳು, ದಾರ, ತೊಟ್ಟಿನಿಂದ ಹೂ ಮುರಿಯುವುದು, ಪಾತ್ರೆ ತುಂಬಿಸುವುದು, ವಿವರಿಸುವುದು, ಊಹಿಸುವಾಗ, ಶಿಖೆ, ಜುಟ್ಟು, ಹಲ್ಲು, ಮೊಗ್ಗು, ಹಾಡುವುದು, ಲಾಸ್ಯ ನೃತ್ಯ, ಸಂಕ್ಷಿಪ್ತ ವಿವರಣೆ, ಅಳತೆ, ಹಲ್ಲಿನ ಹುಳುಕು, ಗೆರೆ, ಪರೀಕ್ಷಿಸುವುದು, ವರ್ಣಚಿತ್ರ ಬಿಡಿಸುವುದು, ಸತ್ಯ, ಇಲ್ಲ, ಸ್ವಲ್ಪ ಎನ್ನುವುದು, ಕ್ಷಣ, ಅರೆಯಲ್ಲಿ ಲೋಹಗಳ ಪರೀಕ್ಷೆ, ಬಿಳಿಯಾಗಿರುವುದು, ಪ್ರತಿಜ್ಞಾ ಸ್ವೀಕಾರ, ಉಗುರು, ಚಿಗುರು, ಕೆಂಪು ಮತ್ತು ಕಪ್ಪು ಬೀಜ, ಎಂಟು ಸಂಖ್ಯೆ, ಕೆಂಪಿರುವೆ, ವಿಷ, ಹುಲ್ಲಿನ ಚೂಪು, ಇರುವೆ, ಸೊಳ್ಳೆ, ಗ್ರಹಣ, ಮುತ್ತಿನ ಹಾರ, ಕೀಟ, ಹಾರಾಡುವಂತದ್ದು, ಹೂಗುಚ್ಛ, ರೋಮಾವಳಿ, ತೋರಿಸುವುದು, ಏಕಾಂತ, ವೇದ, ಸ್ಪರ್ಶ, ಜಾರುವುದು, ಮಾತಾಡುವುದು, ಗಾಯ, ಉಗುರಿನಿಂದಾದ ಗಾಯ, ಅಪೂರ್ವವಾದ ರತ್ನ, ಭಿಕ್ಷುಕ, ತಿಲಕ, ವಿದ್ಯಾಧರ ಜಾತಿ, ಮಂದ, ಗೌರ ವರ್ಣ, ಕಣ್ಣನ್ನು ಶುದ್ಧಿಗೊಳಿಸುವ ದ್ರವ ಇತ್ಯಾದಿ ಅರ್ಥಕ್ಕಾಗಿ ಸಂವಹಿಸಬಹುದು.

ಚಿನ್ನ, ಕಂಕಣ, ಬರೆವಣಿಗೆ, ಪಚ್ಚೆ ರತ್ನ, ದ್ವಿಜನ್ಮ, ವಸ್ತ್ರ, ಹೆಸರು, ಹಾಡು, ವಚನ, ಮತುಗಾರ, ವಾಗ್ಮಿ, ಜಿಂಕೆಯ ಸುಂದರ ಕಣ್ಣುಗಳು, ಮುಂಗುರುಳು, ಕಾಡಿಗೆ, ಬಂಧನ, ಸ್ಥಾನಾಕ್ರಮಣ, ತಿಲಕ, ತೂತು, ಸಂತೋಷ, ನೊಡುವುದು, ಕಣ್ಣು, ಸಿಂಧೂರ, ನಿಶ್ಚಯ, ಬೈತಲೆ, ಇದುತೆಗೆದುಕೊಂಡು ಹೋಗುಎಲ್ಲಿದೆ, ಯಾರಿದುಯಾರಿಂದಯಾರಿಗೆಇಲ್ಲಿದೆಯೇ ಎನ್ನಲು, ಗೌರವವಾದ ಮಾತು, ಕಾಮೋದ್ರಿಕ್ತ, ಧನವಂತ, ಸುವಾಸನೆ, ಜಲಶಕ್ತಿ, ಹೆಜ್ಜೆ, ಪ್ರವಾಹ, ಶೂನ್ಯ, ಭಾಗ, ಗೌರವ, ಸಂಭ್ರಮ, ವ್ಯಾಕುಲತೆ, ಸತ್ಯ, ವಿವರಣೆ, ತಾವರೆಯ ಬೇರು, ಹವಳ, ಸಿಪ್ಪೆ, ಅನೂಹ್ಯ, ಚಂಚಲ, ನೇತ್ರರಂಜನ, ಇಂದ್ರಗೃಹವನ್ನು ತೋರಿಸುವುದು, ದಾರಿದ್ರ್ಯದಿಂದ ಮುಕ್ತಿ, ಕ್ಷೋಭೆ, ಕರುಣಭಾವ, ಅನಾಥ, ದುಃಖ ಕಥನ, ನಿಸ್ಸಹಾಯಕ, ಸಣ್ಣ ಪ್ರಮಾಣ, ಚರ್ಚೆ, ವಾದ, ಗುಂಪು, ನಿರಾಶ್ರಯ, ಕೆಂಪು ಬಣ್ಣ ಬಳಿಯುವುದು, ಎಲೆಗಳನ್ನು ಹರಿಯುವುದು, ಬಿಸಿಯಾದ ವಸ್ತುಗಳನ್ನು ದೂಡುವುದು, ಗಾಳಿ, ಅಯಸ್ಕಾಂತಕ್ಕೆ ಕಬ್ಬಿಣದ ವಸ್ತುಗಳನ್ನು ಹತ್ತಿರ ತರುವುದು, ಕಬ್ಬಿಣದ ಹಿಡಿ, ಪರಿಭ್ರಮಣ, ಯೋಚನೆ, ಎಡಬದಿ, ಸಣ್ಣ ವಸ್ತು, ಯೋಗಾಭ್ಯಾಸ, ಸಮತ್ವ, ನಿದರ್ಶಿಸಿದ ವಸ್ತು, ಆಗಬೇಕಾದ ಕೆಲಸ, ಲಕ್ಷ್ಯ, ಗುಣ, ವೇದನೆ, ದಿನಕ್ಕೆ ಮೂರು ಬಾರಿ, ಕ್ಷಣ, ದಂಡ, ನಿಮಿಷ, ಪಾಪ, ಪುಣ್ಯ, ಉತ್ಸವ, ವಾಕ್ಯ, ಗೊತ್ತಿರುವ ವಿಷಯ, ಧ್ಯರ್ಯ, ಸಾಹಸ, ದಿಕ್ಕು, ಹೇಳಲಾದ ಮತ್ತು ಒಟ್ಟಾದ ವಿಷಯ, ಆಗಿರುವ ಕೆಲಸ, ಬಿಳಿ ಕೂದಲು, ತರಕಾರಿ, ಎಣ್ಣೆ, ತುಪ್ಪ, ಹುಲ್ಲು, ಚೆನ್ನಾಗಿ ಬೇಯಿಸಿದ ಪದಾರ್ಥ, ಮೊಸರು, ಹಾಲು, ಪೂಜಿಸುವವನು, ವೈದ್ಯ, ಗುಣಾವಲೋಕನ, ಕಲಿತ ಮನುಷ್ಯ, ತಿಳಿವಳಿಕೆಯುಳ್ಳವನು, ವೈದ್ಯಶಾಸ್ತ್ರದಲ್ಲಿ ಪಂಡಿತ, ಸುಂದರವಾದ ವಸ್ತು, ನೋಡುವುದು, ಕಿವಿ, ಗೋಪಾಲಕರು, ಕ್ಷೌರಿಕ, ಕಾಯಸ್ಥ, ಹೂವಾಡಿಗ, ವೈಶ್ಯ, ಕ್ಷತ್ರಿಯ, ಶಂಖ ವ್ಯಾಪಾರಿ, ಸುಗಂಧ ವ್ಯಾಪಾರಿ, ಗಾಜು ವ್ಯಾಪಾರಿ, ಕಪ್ಪೆಚಿಪ್ಪು ಆಭರಣಗಳನ್ನು ಮಾರುವವ, ದೈವಜ್ಞ, ಅಗಸ, ನೇಕಾರ, ಎಣ್ಣೆಗಾರ, ಕಾಪಾಲಿಕ-ಶೈವ, ಕುಂಬಾರ, ಕೋಚ ಜಾತಿಗೆ ಸೇರಿದವನು, ಕಳ್ಳ, ನರ್ತಕ, ಜಾತಿ ಎಂಬ ಶಬ್ದ, ಛತ್ರಿ, ಶಿಲ್ಪಿ, ಮುಶಲಿಯೆಂಬ ಜಾತಿ, ಭವಿಷ್ಯಕಾರ, ಗೌರವಪೂರ್ಣ ವ್ಯಕ್ತಿ, ಬುದ್ಧಾವತಾರ, ಕಟಾಕ್ಷ, ನಿದ್ರಾಹೀನತೆ ಇತ್ಯಾದಿಗಳನ್ನು ಹೇಳುವಲ್ಲಿ ಉಪಯೋಗಿಸಬಹುದು.

ಈ ಹಸ್ತದಲ್ಲಿ ರಸಕ್ಕೆ ಪೋಷಕವಾಗಿ ಅಗ್ರಜ, ಮುಖಜ, ಪಾರ್ಶ್ವಗತ ಎಂಬ ಮೂರು ವಿಧಗಳಿವೆ ಎಂದು ನಾಟ್ಯಶಾಸ್ತ್ರ, ಹಸ್ತಮುಕ್ತಾವಳಿ ತಿಳಿಸುತ್ತದೆ.

ಅಗ್ರಜ : ಹೂಗಳನ್ನು ಆಯ್ದುಕೊಳ್ಳಲು, ಹುಲ್ಲು-ಎಲೆ-ಕೂದಲೆಳೆ-ದಾರಗಳನ್ನು ಹಿಡಿಯುವುದಕ್ಕೆ, ಮುಳ್ಳನ್ನು ತೆಗೆಯುವುದಕ್ಕೆ, ಒಟ್ಟುಮಾಡುವುದು, ನೂಕುವುದು, ಎಲೆಯ ಹಾಸಿಗೆಗೆ ಕರೆದೊಯ್ಯುವುದು.

ಮುಖಜ : ಬಳ್ಳಿಯಿಂದ ಹೂಗಳನ್ನು ಕೀಳುವುದಕ್ಕೆ, ಅಂಜನ ಮೊದಲಾದವುಗಳನ್ನು ತೀಡುವುದಕ್ಕೆ, ಸಿಟ್ಟಿನಿಂದ ಧಿಕ್ಕಾರ ಎನ್ನಲಿಕ್ಕೆ, ಯಜ್ಞೋಪವೀತ ಧರಿಸುವುದು, ಮುತ್ತುಗಳನ್ನು ಪೋಣಿಸುವಾಗ, ಗುರಿಯನ್ನು ಲಕ್ಷಿಸಿ ಬಾಣಗಳನ್ನು ಇಡುವಾಗ, ವಜ್ರ, ಹೂಗಳನ್ನು ಎತ್ತುವುದು, ತುಂಬಿಸುವುದು, ಸಣ್ಣ ಕೋಲು, ನಿಂದೆ, ರೋಷ, ಕಪ್ಪು ಬಣ್ಣ, ದೀಪದ ಬತ್ತಿ,ಇಷ್ಟವಿಲ್ಲವೆನ್ನುವುದು, .

ಪಾರ್ಶ್ವಗತ : ಬೀಸಣಿಕೆ-ಪ್ರನಾಲಗಳನ್ನು ಉಪಯೋಗಿಸುತ್ತಿರುವಾಗ, ಅಲಕ್ತಕವೆಂಬ ರಸವನ್ನು ಹಿಂಡುವಾಗ, ಸ್ತ್ರೀಯರು ಬರೆಯುವುದು, ನಿಂದೆ, ಅಸೂಯೆ, ಕೆಟ್ಟ ಮಾತು ಅಥವಾ ಕೆಲಸ, ಇವುಗಳ ಸಂದರ್ಭದಲ್ಲಿ ತುದಿಯನ್ನು ತಿರುಗಿಸಿ ಎಡಗೈಯಿಂದ ಅಭಿನಯಿಸುವುದು(ಪಾರ್ಶ್ವಸಂದಂಶ), ಊಹಿಸುವಾಗ, ಅಂಜನವನ್ನು ಇಟ್ಟುಕೊಳ್ಳುವಾಗ.

ಸಂಕರ ಹಸ್ತ ವಿಭಾಗದಲ್ಲಿ ಸಂದಂಶ ಹಸ್ತವನ್ನು ಅಡ್ಡಲಾಗಿ ಹಿಡಿದಲ್ಲಿ ನೀಲವರ್ಣವೆಂದು ಅರ್ಥ. ನಾನಾರ್ಥ ಹಸ್ತ ವಿಭಾಗದಲ್ಲಿ, ಈ ಹಸ್ತವನ್ನು ಕಿವಿ, ಮೂಗು, ತುಟಿಗಳ ಸಮೀಪದಲ್ಲಿ ಚಲಿಸುವಂತೆ ಮಾಡಿದರೆ ರೇಖೆಗಳು ಎಂದೂ, ಮೇಲಿಂದ ಕೆಳಕ್ಕೆ ಚಲಿಸುವಂತೆ ಮಾಡಿದರೆ ವರ್ಷಧಾರೆಯೆಂದೂ ಅರ್ಥ. ಈ ಹಸ್ತವನ್ನು ಕಳಾ ಎಂಬ ಕಾಲಪ್ರಮಾಣ ಸೂಚಿಸಲು, ಕೆಳಗೆ ಮತ್ತು ಮೇಲೆ ಹಿಡಿದರೆ ಸಾಮವೇದವೆಂದೂ, ಕೆಳಗೆ ಹಿಡಿದರೆ ಕರ್ತರೀ ಪ್ರಯೋಗವೆಂಬ ವ್ಯಾಕರಣಕ್ಕೂ ಬಳಸುತ್ತಾರೆ.

ನಾನಾರ್ಥ ಹದಲ್ಲಿ ಸಂದಂಶ ಹಸ್ತವನ್ನು ಮೂಗು, ಕಿವಿ, ತುಟಿಯ ಬಳಿ ಅಲ್ಲಾಡಿಸಿದರೆ ಕ್ರಮವಾಗಿ ವಾಸನೆ, ಶಬ್ದ, ರುಚಿಯನ್ನು ಧ್ವನಿಸುತ್ತದೆ.

ಎರಡೂ ಕೈಯ್ಯಲ್ಲಿ ಸಂದಂಶವನ್ನು ಹಿಡಿಯುವುದು ಭರತಾರ್ಣವ ತಿಳಿಸುವ ಆದಿ ನಾರಾಯಣೀ ದೇವತಾ ಹಸ್ತವನ್ನು ಸೂಚಿಸುತ್ತದೆ. ಜೊತೆಗೆ ಎಡಗೈಯಲ್ಲಿ ಸೂಚೀಹಸ್ತ, ಬಲಕೈಯ್ಯಲ್ಲಿ ಸಂದಂಶ ಹಸ್ತವನ್ನು ಆಯಾಯ ಬದಿಗಳಿಗೆ ಹಿಡಿಯುವುದು ಕುಜ ಅಥವಾ ಮಂಗಳಗ್ರಹ ಹಸ್ತವನ್ನು, ಸಂದಂಶ ಮುದ್ರೆಗಳನ್ನು ಆಯಾಯ ಪಕ್ಕಕ್ಕೆ ಹಿಡಿಯುವುದು ಶುಕ್ರಹಸ್ತವನ್ನು, ಸಂದಂಶ ಮತ್ತು ಅಲಪದ್ಮಗಳನ್ನು ಬಲ ಮತ್ತು ಎಡಕೈಯ್ಯಲ್ಲಿ ಹಿಡಿದು, ಮುಖವೂ ಸೇರಿದಂತೆ ಗಾಳಿಯಂತೆ ಸರಿದಾಡುವುದು ಶನೈಶ್ಚರ ಹಸ್ತವನ್ನೂ, ಎಡಗೈಯ್ಯಲ್ಲಿ ಹಿಡಿದ ಸರ್ಪಶಿರ ಹಸ್ತವನ್ನು ತಲೆಯ ಮೇಲಿರಿಸಿ, ಬಲಕೈಯ್ಯಲ್ಲಿ ಸಂದಂಶ ಹಸ್ತ ಹಿಡಿಯುವುದು ರಾಹು ಹಸ್ತವನ್ನೂ, ಪತಾಕ ಅಥವಾ ತ್ರಿಪತಾಕವನ್ನು ಬಲಕೈಯ್ಯಲ್ಲಿ ಹಿಡಿದು ಮೇಲಕ್ಕೆತ್ತಿ, ಎಡಗೈಯ್ಯಲ್ಲಿ ಸಂದಂಶ ಹಸ್ತ ಹಿಡಿಯುವುದು ಕೇತು ಹಸ್ತವನ್ನೂ ಮತ್ತು ಎಡ ಮತ್ತು ಬಲ ಕೈಯ್ಯಲ್ಲಿ ಹಿಡಿದ ಮುಕುಲ ಮತ್ತು ಸಂದಂಶಹಸ್ತಗಳನ್ನು ಎಡ ಮತ್ತು ಬಲಭುಜದ ಮೇಲಿಡುವುದು ಭರತಸಾರದ ಪ್ರಕಾರ ಬುಧ(ಸೌಮ್ಯ)ಹಸ್ತವನ್ನು ಸಂಕೇತಿಸುತ್ತದೆ.

ಎಡಗೈ ಅರ್ಧಚಂದ್ರ ಹಿಡಿದು ಬಲಗೈ ಸಂದಂಶ ಹಸ್ತವನ್ನು ಪ್ರದರ್ಶಿಸಿದರೆ ಮಾತೃ ಹಸ್ತ. ಕಂಠದ ಹತ್ತಿರ ಹಂಸಾಸ್ಯ ಹಸ್ತವನ್ನು ಬಲಗೈಯಲ್ಲಿ ಹಿಡಿದು, ನಂತರದಲ್ಲಿ ಸಂದಂಶ ಹಸ್ತಕ್ಕೆ ಬದಲಿಸಿ, ಎಡಗೈ ವರ್ತುಲಾಕಾರವಾಗಿ ಹೊಟ್ಟೆಯ ಮೇಲೆ ಆಡಿಸಿ ನಂತರದಲ್ಲಿ ಸ್ತ್ರೀಹಸ್ತದಲ್ಲಿ ಹಿಡಿಯುವುದು ಶ್ವಶ್ರೂ (ಅತ್ತೆ) ಹಸ್ತ. ಭರತಸಾರ ಹೇಳುವಂತೆ ಎಡದ ಕೈಯಲ್ಲಿ ಸಂದಂಶ ಹಸ್ತವನ್ನು ಎದೆಯ ಬಳಿ ಹಿಡಿದು, ಬಲದ ಕೈಯಲ್ಲಿ ಅರ್ಧಚಂದ್ರ ಹಸ್ತವನ್ನು ಅದರ ಹಿಂದೆ ಹಿಡಿಯುವುದು ಭರ್ತೃಭ್ರಾತೃ (ಗಂಡನ ಸೋದರ) ಹಸ್ತ. ಸಂದಂಶಹಸ್ತವನ್ನು ಹೊಟ್ಟೆಯ ಮೇಲೆ ವರ್ತುಲಾಕಾರವಾಗಿ ಸುತ್ತಿ, ಎಡಗೈ ಶಿಖರ ಹಸ್ತ ಹಿಡಿಯುವುದು ಪುತ್ರ ಹಸ್ತ. ಭರತಾರ್ಣವದ ಪ್ರಕಾರ ಬಲಗೈಯ್ಯಲ್ಲಿ ಹಿಡಿದ ಅರ್ಧಚಂದ್ರ ಹಸ್ತವನ್ನು ಎಡಗೈಯ ಮಣಿಕಟ್ಟಿಗೆ ಹಿಡಿದು, ಎಡಗೈಯ್ಯಲ್ಲಿ ಸಂದಂಶ ಹಸ್ತವನ್ನು ಮಾಡುತ್ತ ಕುತ್ತಿಗೆಯ ಬಳಿ ಇಡುವುದು ಭರ್ತೃ (ಗಂಡ) ಹಸ್ತ.

ಸಮಯಸೂಚಿ ಹಸ್ತಗಳ ಪೈಕಿ ಕಾಲ ಅಂದರೆ ೮ ಸೆಕೆಂಡು(೩೦ ಕಾಷ್ಟ= ೧ ಕಾಲ) ತಿಳಿಸಲು, ಬಕುಲವೃಕ್ಷ ಎಂದು ಹೇಳಲು ಸಂದಂಶ ಹಸ್ತವೇ ಸೂಚಕ. ವ್ಯಾಕರಣ ಸೂಚಕ ಹಸ್ತಗಳ ಪೈಕಿಯ ಕರ್ತರಿ ಪ್ರಯೋಗ ಎಂಬುದಕ್ಕೆ ಸಂದಂಶ ಹಸ್ತವನ್ನು ಕೆಳಮುಖವಾಗಿರಿಸಬೇಕು. ನೀಲಿಬಣ್ಣ ಎನ್ನಲು ಸಂದಂಶ ಅಥವಾ ಅರಾಳ, ತ್ರಿಪತಾಕ, ಹಂಸಪಕ್ಷ, ಚತುರ ಹಸ್ತಗಳನ್ನು ಕೆಳಮುಖ ಮಾಡಬೇಕು. ಭರತಾರ್ಣವ ಹೇಳುವ ವೇದ ಹಸ್ತಗಳಲ್ಲಿ ಸಾಮವೇದಕ್ಕೆ ಸಂದಂಶ ಹಸ್ತವನ್ನು ಮೇಲೆ ಕೆಳಗೆ ಮಾಡಬೇಕು. ಬೆಂಕಿಯನ್ನು ತೋರಿಸಲು ಸಂದಂಶವು ಶರೀರವನ್ನು ಸ್ಪರ್ಶಿಸಿ, ನಂತರ ಚತುರ ಹಸ್ತವಾಗಿ ಮಾಡಿ ಎದೆಯನ್ನು ಮುಟ್ಟಿ, ಹೆಬ್ಬೆರಳ ತುದಿ ತೋರಬೆರಳ ತುದಿಯನ್ನು ಸ್ಪರ್ಶಿಸಬೇಕು.

ಯಕ್ಷಗಾದಲ್ಲಿ ಅಗ್ನಿ, ಭಯಂಕರ ಮಳೆ ಎಂಬ ಅರ್ಥಸೂಚನೆಗೆ ಬಳಸಲಾಗುವುದು.

ನಿತ್ಯಜೀವದಲ್ಲಿ ಈ ಹಸ್ತವನ್ನು ೫ ಎಂದು ಆಗಾಗ ಸೂಚಿಸಲು, ದೀಪಗಳು ಆಗಾಗ ಹೊತ್ತಿಕೊಳ್ಳುವುದು ಮತ್ತು ನಂದುವುದಕ್ಕೂ, ಹುಳ ಎಂಬರ್ಥಕ್ಕೂ, ವಸ್ತುಗಳನ್ನು ಕಲಸಲು, ಇತ್ಯಾದಿಗಳ ಸಂವಹನಕ್ಕೆ ಬಳಸುತ್ತಾರೆ

Leave a Reply

*

code