ಅಂಕಣಗಳು

Subscribe


 

ಮನಮುಟ್ಟುವ ಸರಳ ಶೈಲಿಯ ನೂಪುರ ಭ್ರಮರಿ

Posted On: Wednesday, December 15th, 2010
1 Star2 Stars3 Stars4 Stars5 Stars (No Ratings Yet)
Loading...

Author: -ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ

 ಶತಾವಧಾನಿ ಡಾ. ಆರ್. ಗಣೇಶ್ ಮತ್ತು ಮಂಗಳೂರಿನ ಕಲಾಸಹೃದಯಿ ಶ್ರೀನಿವಾಸ ದೇಶಪಾಂಡೆ, ಕಾಸರಗೋಡಿನ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ವಿದ್ವಾನ್ ಜಗದೀಶ ಶರ್ಮ-ಇವರು ಮಂಜೀರ ಮತ್ತು ಲೇಖನಗಳ ಶೈಲಿಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ನೂಪುರದಲ್ಲಿ ಬರುವ ಲೇಖನಗಳು ಮನಮುಟ್ಟುವ ಸರಳ ಶೈಲಿಯಲ್ಲಿವೆ. ಲಲಿತ ಲಹರಿಯಲ್ಲಿ ಉದ್ಯಾವರ ಮಾಧವ ಆಚಾರ್ಯರ ಸೀತೆಯ ಸ್ವಗತ- ಪರಿಕಲ್ಪನೆ, ಸಾಹಿತ್ಯ-ಸಂಯೋಜನೆಯು ತುಂಬಾ ಸಂತೋಷ ಕೊಟ್ಟಿತು. ರಂಗಸ್ಥಳದಲ್ಲಿ ಅಳಿಕೆ ರಾಮಯ್ಯರ ನೆನಪು ಒಳ್ಳೆಯದಿತ್ತು. ಅವರ ವೇಷಗಳನ್ನು ನೋಡಿರುವ ನನಗೆ ಯಕ್ಷಗಾನ ತೆಂಕುತಿಟ್ಟಿನ ಗತಕಾಲದ ವೈಭವ ಮತ್ತೆ ಮತ್ತೆ ನೆನಪಾಯಿತು. ನಿಮ್ಮ ಸಂಪಾದಕ ಮಂಡಳಿಗೆ ಕೃತಜ್ಞತೆಗಳು.
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಹಿರಿಯ ಯಕ್ಷಗಾನ ಅರ್ಥಧಾರಿಗಳು, ಬೆಳ್ತಂಗಡಿ.

ಉತ್ತಮ ನೃತ್ಯ ಕಾರ್ಯಕ್ರಮ ಯಾವುದು, ಹೇಗಿರಬೇಕೆಂಬುದು ಸಂಪಾದಕೀಯದಲ್ಲಿ ಪ್ರೀತಿಪೂರ್ವಕವಾಗಿ ತಿಳಿಸಿದ್ದೀರಿ. ಎಲ್ಲಾ ಅಂಕಣಗಳು ಉತ್ತಮವಾಗಿವೆ. ಕಲೆ, ಸಾಹಿತ್ಯ, ಭರತ ಸಂಸ್ಕೃತಿಯ ವಿವಿಧ ಮಜಲುಗಳ ವಿವರ ಹೀಗೆಯೇ ಚೆನ್ನಾಗಿ ಮೂಡಿಬರುತ್ತಿರಲಿ. ಭಾರತಮಾತೆಯ ಸರ್ವಾಂಗಸುಂದರಿಯಾಗಿ ನೂಪುರ ಸುಶೋಭಿಸಲಿ.
ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ‘ವಿಶ್ವಕಲಾನಿಕೇತನ’, ಪುತ್ತೂರು

Leave a Reply

*

code