ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆ

Posted On: Thursday, December 30th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

‘ನೂಪುರ ಭ್ರಮರಿ’ಯು ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಲಿನಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆಯನ್ನು ಆಯೋಜಿಸಿದೆ. ಈಗಾಗಲೇ 2010ನೇ ಸಾಲಿನಲ್ಲಿ (ಜನವರಿ-ಡಿಸೆಂಬರ್) ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆಗಳು/ನಿಯತಕಾಲಿಕೆಗಳಲ್ಲಿ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ. ಓರ್ವ ಲೇಖಕ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮರ್ಶೆಯ ವಿವರಗಳನ್ನು ಬರೆದು ಲಗತ್ತಿಸಬೇಕು.
ಈ ಕುರಿತಂತೆ ಕಲಾವಿದರು/ಗುರು-ಶಿಕ್ಷಕರು/ಕಲಾಸಕ್ತ ಬಂಧುಗಳು ಉತ್ತಮರೆನಿಸುವ ವಿಮರ್ಶಕರನ್ನು ಸೂಕ್ತವೆನಿಸುವ ವಿವರಗಳೊಂದಿಗೆ ನಾಮನಿರ್ದೇಶನಗೊಳಿಸಲು(ನಾಮಿನೇಟ್) ಅವಕಾಶವಿದ್ದು ; ಆಯ್ಕೆ ಸಮಿತಿಯ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಈಗಾಗಲೆ ನೃತ್ಯಕ್ಷೇತ್ರದ ಹಿರಿಯ ವಿದ್ವಾಂಸರನ್ನು ಈ ಕುರಿತಾಗಿ ಸಂಪರ್ಕಿಸಿದ್ದು ಅವರು ಈ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ.
ಲೇಖಕರು ತಮ್ಮ ಅತ್ಯುತ್ತಮವೆನಿಸುವ ೩ ವಿಮರ್ಶೆಗಳನ್ನು ಅಥವಾ ಅದರ ಜೆರಾಕ್ಸ್ ಪ್ರತಿಯನ್ನು ಅಥವಾ ನಾಮನಿರ್ದೇಶನಕ್ಕೆ ಕಳಿಸುವವರ ಕುರಿತು ಶಿಫಾರಸ್ಸುಗಳನ್ನು ಅಂಚೆ ಅಥವಾ ಈ ಮೈಲ್ ಮೂಲಕ ಜನವರಿ 15,2011ರ ಒಳಗೆ ತಲುಪುವಂತೆ ಕಳುಹಿಸಬೇಕು. ಜನವರಿ ೫ ಕೊನೆಯ ದಿನವೆಂದಿದ್ದನ್ನು ಈಗ ವಿಸ್ತರಿಸಿ ಜನವರಿ ೧೫ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ..ಸೂಕ್ತವೆನಿಸುವ ಪ್ರವೇಶಗಳು ಬಾರದೇ ಹೋದಲ್ಲಿ ಪ್ರಶಸ್ತಿಯ ಗುಣಮಟ್ಟದ ದೃಷ್ಟಿಯಿಂದ ಸ್ಪರ್ಧೆಯನ್ನು ತಡೆಯಲಾಗುವುದು.
ಅತ್ಯುತ್ತಮನಿಸುವ ವಿಮರ್ಶೆಗೆ ಫೆಬ್ರವರಿ 13, 2011ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸನ್ಮಾನಪತ್ರ, ಫಲಕ, ನಗದು ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.

ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ:
ಮನೋರಮಾ ಬಿ.ಎನ್
ಸಂಪಾದಕರು, ‘ನೂಪುರ ಭ್ರಮರಿ’
ನಂ.104, ಕೌಶಲ್ ರೀಜೆನ್ಸಿ
೧ನೇ‌ಅಡ್ಡರಸ್ತೆ, ಪ್ರಕಾಶ್ ನಗರ, ರಾಜಾಜಿನಗರ,
ಬೆಂಗಳೂರು ೫೬೦೦೮೫
ದೂರವಾಣಿ: 9964140927,9481765544

Leave a Reply

*

code