ಅಂಕಣಗಳು

Subscribe


 

ನಾಲ್ಕನೇ ಸಂಚಿಕೆಯ ಹೆಜ್ಜೆಯಲ್ಲಿ…

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಪ್ರಿಯರೇ,

ಒಳ ಹುಳುಕುಗಳು, ಶೀತಲ ಸಮರ, ಅನಾರೋಗ್ಯಕರ ಪ್ರತಿಸ್ಪರ್ಧೆ, ಕೆಟ್ಟ ರಾಜಕೀಯ, ಚೌರ್ಯ…ಎಲ್ಲಾ ಕ್ಷೇತ್ರಗಳಲ್ಲೂ ಜನ್ಮಸಿದ್ಧ ಗುಣಗಳೇನೋ! ಈ ಹುಳುಕುಗಳನ್ನು ಮುಚ್ಚಿಹಾಕಲು ಮತ್ತಷ್ಟು ಸುಂದರವೆನಿಸುವ ಸಮಜಾಯಿಷಿಗಳು. ಅಂತಹ ಹುಳುಕುಗಳನ್ನು ಮುಚ್ಚಿಹಾಕಿ ಮುಖವಾಡ ಹಾಕಿಕೊಳ್ಳುವುದರಲ್ಲೇ ಜೀವನದ ಅರ್ಧ ಭಾಗದ ಸಾಧನೆಯೇನೋ! ಹಾಗಾಗಿ ‘ಸುಂದರವೆನಿಸಿಕೊಂಡದ್ದರಲ್ಲಿ ಸತ್ಯವಿರುತ್ತದೆ ಎಂಬ ಕವಿಯ ಮಾತು ಎಷ್ಟೋ ಸಂದರ್ಭ ಅವಾಸ್ತವ ಎಂದು ಕಂಡದ್ದಿದೆ. ಪರಿಣಾಮ, ಕ್ಷೇತ್ರಕ್ಕೆ ಅಂಟುವ ಕಳಂಕದ ನಂಟು, ಜೊತೆಗೆ ಅದರ ಮೂಲ ಪವಿತ್ರ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು.

ಪತ್ರಿಕೋದ್ಯಮ, ಮತ್ತು ಪ್ರದರ್ಶನ ಕಲೆಗಳ ಕ್ಷೇತ್ರಗಳೇನೂ ಇವಕ್ಕೆ ಹೊರತಲ್ಲ. ಇವೆರಡೂ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ರಂಜನೆ ಕೊಡುವ, ಸತ್ಯ-ಸೌಂದರ್ಯದ ಹುಡುಕಾಟದಲ್ಲಿ, ಉಪಾಸನೆಯಲ್ಲಿ ತಲ್ಲೀನವಾಗಿರುವಂತವು ಎಂದು ಬಗೆದು ಗೌರವದಿಂದ ಕಾಣಲಾಗುತ್ತಿದ್ದರೂ, ಸಣ್ಣತನಗಳು ಇವುಗಳನ್ನೇನೂ ಬಿಟ್ಟುಹೋಗಿಲ್ಲ.

ಈ ಬಾರಿ ಕಲಾಕ್ಷೇತ್ರ ಶೈಲಿಯ ಹಿರಿಯ ಗುರು ಬೆಂಗಳೂರಿನ ಕಲಾಕ್ಷಿತಿಯ ಕೃಷ್ಣಮೂರ್ತಿ, ಪಂದನಲ್ಲೂರು ಶೈಲಿಯ ಮಂಗಳೂರಿನ ಹಿರಿಯ ನೃತ್ಯ ಗುರು ನಾಟ್ಯನಿಕೇತನದ ಉಳ್ಳಾಲ ಮೋಹನ್ ಕುಮಾರ್, ಹಾಸನದ ನೃತ್ಯ ಗುರು ಅಂಬಳೆ ರಾಜೇಶ್ವರಿ, ಬೆಂಗಳೂರಿನ ವಿಮರ್ಶಕರಾದ ಬಸವರಾಜ್.., ಹೀಗೆ ಹಿರಿಯರಾದಿಯಾಗಿ ಫೋನಾಯಿಸಿ, ಸಂತಸದಿಂದ ಪ್ರತಿಕ್ರಿಯಿಸಿ ಶುಭ ಹಾರೈಸಿದ್ದಾರೆ. ಅದರಲ್ಲೂ ಮೆಚ್ಚುಗೆಯ ಬಹುಪಾಲು ದರ್ಶನ ಭ್ರಮರಿಗೂ, ರಂಗ ಭ್ರಮರಿಗೂ ಸಂದಿದೆ. ಹಲವು ಸ್ನೇಹಿತರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಎಲ್ಲರಿಗೂ ಮನ ತುಂಬಿದ ಕೃತಜ್ಞತೆಗಳು. ತಮ್ಮ ಹರಕೆ-ಹಾರೈಕೆ ನಮ್ಮ ಮೇಲೆ ಸದಾ ಇರಲಿ.

ಪ್ರೀತಿಯಿಂದ ನಿಮ್ಮ,

ಮನೋರಮಾ ಬಿ. ಎನ್

 

Leave a Reply

*

code