Author: ಉದಯ ಪೆರುವಾಜೆ, ಜಗದೀಶ ಶರ್ಮ,ಗಣೇಶ್ ಭಟ್ ಮಾಡಾವು,
ಕಳೆದ ಕೆಲವು ಸಮಯದಿಂದ ನೂಪುರವನ್ನು ಓದುತ್ತಿದ್ದೇನೆ. ನನ್ನನ್ನು ಬೆರಗುಗೊಳಿಸಿದ ಒಂದು ಸಂಗತಿ ಎಂದರೆ ಪತ್ರಿಕೆ ಖಾಸಗಿ ಪ್ರಸಾರದ್ದಾದರೂ ಹಗುರವಾಗಿ ತೆಗೆದುಕೊಳ್ಳಲಾಗದ ಪತ್ರಿಕೆಗಳ ಸಾಲಿಗೆ ಸೇರಿರುವುದು. ನೂಪುರದಲ್ಲಿ ಬರುವ ಚಿಂತನ-ಮಂಥನ, ವಾದವಿವಾದಗಳ ವೈಖರಿ, ಅದನ್ನು ಬರೆಯುವವರನ್ನು ಪರಿಗಣಿಸಿದರೆ ಪತ್ರಿಕೆಯ ಪ್ರತೀ ಪುಟವೂ ಮೌಲ್ಯಯುತವಾದದ್ದು. ನೂಪುರ ಭ್ರಮರಿ ಗೆದ್ದಿದೆ; ಮಾತ್ರವಲ್ಲ, ಪೂರ್ಣ ಭ್ರಾಮಕ ನೃತ್ಯವನ್ನು ಮನದಲ್ಲಿ ಮೂಡಿಸಿದೆ.
– ಉದಯ ಪೆರುವಾಜೆ,
ಕಾಂಟಿನೆಂಟಲ್ ಟೆಕ್ನಿಕಲ್ ಸೆಂಟರ್ ಇಂಡಿಯಾ, ಬೊಮ್ಮನಹಳ್ಳಿ, ಬೆಂಗಳೂರು.
ನೂಪುರದ ಶರದ್ ವೈಭವ ಸಂಚಿಕೆ ಬಹಳ ಚೆನ್ನಾಗಿತ್ತು. ‘ಶಾಸ್ತ್ರೀಯ ನೃತ್ಯದ ಮಹತ್ವ ಮರೆಯಾಗುತ್ತಿಹುದೇ?’ ಲೇಖನ ಉತ್ತಮ ಮಾಹಿತಿಯನ್ನೊಳಗೊಂಡಿತ್ತು. ದೀವಟಿಗೆ, ಅಂಗಳದ ಮಾತು ತಿಂಗಳ ಚರ್ಚೆ, ರಂಗಸ್ಥಳ, ಒಳನೋಟ ಎಲ್ಲವೂ ಉಪಯುಕ್ತವಾಗಿದೆ. ರಂಗಸ್ಥಳದಲ್ಲಿ ರಾಕೇಶ್ ಕುಮಾರ್ ಕಮ್ಮಜೆಯವರ ಲೇಖನ ಚಿಟ್ಟಾಣಿಯವರ ಬಗ್ಗೆ ಉತ್ತಮ ಮಾಹಿತಿಯನ್ನೊದಗಿಸಿತು. ಮುಂದಿನ ಸಂಚಿಕೆಗೆ ಕಾಯುವಂತೆ ಮಾಡಿದೆ.
-ವಿನುತಾ. ಡಿ.
ದ್ವಿತೀಯ ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು, ಪುತ್ತೂರು.
ಸೋಲನ್ನು ಮೇಲಿಂದ ಮೇಲೆ ಸೋಲಿಸುವ; ಆ ಮೂಲಕ ಗೆಲುವೇ ನಮ್ಮ ಬದುಕು ಎಂದು ಹೆಮ್ಮೆಯಿಂದ ಹೇಳುವ; ತಮ್ಮ ಸಾಧನೆಯಿಂದಲೇ ಹಲವರ ಆದರ್ಶವಾಗುವ ಹೀರೊಗಳು ನಮ್ಮ ಮಧ್ಯೆಯೇ ಇದ್ದಾರೆ… ಅಂತಹ ಮಹಾನ್ ಕಾರ್ಯ ನೂಪುರ ಭ್ರಮರಿಯಿಂದ ಮತ್ತು ಬಳಗದ ಪ್ರಯತ್ನದಿಂದ ನಡೆಯಲಿ ಎಂದು ನಾನು ಆಶಿಸುತ್ತೇನೆ.
– ಗಣೇಶ್ ಭಟ್ ಮಾಡಾವು, ಬೆಳ್ಳಾರೆ.
ನೂಪುರ ಭ್ರಮರಿ ನಮ್ಮ ಕಾಲದೊಂದು ಅಚ್ಚರಿ.
-ಜಗದೀಶ ಶರ್ಮ, ಬೆಂಗಳೂರು.