Author: ಮನೋರಮಾ. ಬಿ.ಎನ್
– ಏರ್ಯ ಲಕ್ಷ್ಮೀನಾರಯಣ ಆಳ್ವ
ಮುಗಿಲು ನಾಟ್ಯವಾಡಿತು
ಜಗದ ಬಗೆಯು ಮೂಡಿತು
ಒಂದು ಸಂಜೆ
ಬಾನ ಕರೆಯೊ
ಳಲ್ಲಿ ಮುಗಿಲ
ಮೇಳಾ ಕಲೆತು
ನಲುಮೆಯಾಟ ತೋರಿತು
ಕನಸು ಸೀಮೆ ಮೀರಿತು
ಬಣ್ಣ ಬಣ್ಣ
ದಂಗಿ ತೊಟ್ಟ
ವಿವಿಧ ವೇಷ
ಭಾವವಾಂತು
ಹಿಗ್ಗಿಯೊಗ್ಗಿ ನಲಿಯಿತು
ಮನವು ನಟನೆಗೊಲಿಯಿತು
ಒಮ್ಮೆ ಆನೆ
ಒಮ್ಮೆ ಕುದುರೆ
ಬನವದೊಮ್ಮೆ
ಆನವದೊಮ್ಮೆ
ಹುಟ್ಟಿ ಸತ್ತು ಹುಟ್ಟಿತು
ಎದೆಯ ಕದವ ತಟ್ಟಿತು
ಆನಿಸಿ ಇನಿಸು
ಅಲೆದು ನಲಿದು
ಗಾಳಿ ಬೀಸೆ
ಮರಳಿ ಬೆರೆದು
ಮೂಲ ಬಗೆಗೆ ಮರಳಿತು
ಮನ ಬಗೆಯ ಕೆರಳಿತು
ಮರಳಿ ಮರಳಿ
ಸತ್ತು ಹುಟ್ಟಿ
ತರತರದಲಿ
ಮೆರೆದು ತಿರುಗಿ
ಮುಗಿಲ ಗರ್ಭ ಸೇರಿತು
ಅರಿವಿಗೆನೊ ಉಸುರಿತು
ಒಂದೆ ಮುಗಿಲಿ
ನಿಂದೆ ಜನಿಸಿ
ವಿವಿಧ ವೇಷ
ವಿವಿಧ ಭಾವ
ವಿವಿಧ ನಾಟ್ಯವೇನಿದು
ಇಂದ್ರಜಾಲವಿಂತಿದು ?
ಹೃದಯ ಬಡಿಯೆ
ಮನವು ತುಡಿಯೆ
ಏನೊ ಎಂತೊ
ಅರಿಯದಂತೆ
ಫಳಿವದೊಂದು ಮಿಡಿಯಿತು
ಹೃದಯವದನೆ ನುಡಿಯಿತು
ಮಣ್ಣಿನಿಂದೆ
ಜನಿಸುತಿಲ್ಲೆ
ನಲಿದು ಮರಳು-
ತದನೆ ಬೆರೆವು-
ದಿದುವೆ ಮನುಜ ಜೀವನ
ಮುಗಿಲ ನಾಟ್ಯದರ್ಶನ
ಮಣ್ಣ ವಿವಿಧ
ಮೂರ್ತಿಯೆಲ್ಲ
ವಿವಿಧ ವೇಷ
ಭಾವವಾಂತು
ನಲಿದು ಮಣ್ಣ ಬೆರೆವವು
ಮರಳಿ ಹುಟ್ಟಿ ಬರುವವು
ಮರಳಿ ಹೊಸತೆ
ವೇಷ ಭಾವ
ನಾಟ್ಯವಾಡಿ
ನಡೆಯುತಿಹವು
ಕಾಲಬಂದು ಕರೆಯಲು
ಮಣ್ಣ ಸಂದು ಬೆರೆಯಲು
ಮುಗಿಲೆ ನಿನ್ನ
ಚೆಲುವ ನಲಿವೆ
ವಿವಿಧ ರೂಪ
ನಟನೆಗಳಲಿ
ದಿವದ ಸೊಗಸಿನೊಂದಿಗೆ
ಜಗದ ಸತ್ಯ ತುಂಬಿದೆ
ಪುನರಪಿ ಜನನಂ
ಪುನರಪಿ ಮರಣಂ
ಪುನರಪೀ ಜನನೀ
ಜಠರೇ ಶಯನಂ
ಕಲೆಯ ಬಾಳ್ವೆಗೆ ಮಿಗಿಲ್ ಬಾಳ್ವೆಯ ಕಲೋಲ್ಲಾಸ :
ಕಲೆ ಸಂಸ್ಕೃತಿವಿಲಾಸ ; ಬಾಳ್ ಸೃಷ್ಠಿಗೆ ವಿಕಾಸ
-ಕುವೆಂಪು
ರಾ.ಸು.ಮಣಿ-ಪುಷ್ಪ ವಿಕ್ಷೇಪ- ತಾಯಗೋಳು
ಬಂದು ಮತ್ತೆ ಕೊಂಜಿಕಾಡಿ
ನಿಂದು ಕಾಲ್ಗೆ ತೊಡರಿಪಾಡಿ
ಚೆಲ್ಲಮೆರ್ದು ನಲಿಯಿರೈ
ನವಿಲನಾಟ್ಯ ನಲಿಯಿರೈ
ನವಿಲ ನಾಟ್ಯ ನಲಿದು ಅವಿದ
ನವೆದ ಎದೆಯ ಸೊದೆಯನೆರೆದು
ನಲ್ಲಸುಖವ ನೀಡಿರೈ
ಮೆಲ್ಲನೆಮ್ಮ ನಗಿಸಿರೈ