ನೃತ್ಯ ಸಂಶೋಧನಾ ಕಮ್ಮಟ / seminars workshops

Posted On: Monday, October 11th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

A one day Karnataka state level dance research workshop/seminar will be organised by Noopura Bhramari Research Foundation (R.) and Bi-Monthly dance magazine in collaboration with Karnataka Research Association and Karnataka Developmental Board in 20th February 2012 reflecting on in depth studies, methodological research, openings and opportunities in the field of dance and its traditions in Karnataka.

Themes: Dance History, Re-construction of olden techniques, Media participation
• Sub themes: Classicality, commentary, educational significance, contemporary scenario, social relevance, music, folk etc., (pertaining to the realm of dance in Karnataka.)

English version- workshop and paper presentation details

ಕಮ್ಮಟದ ಕುರಿತ ವಿವರಣೆಗಳ ಕನ್ನಡ ಪ್ರತಿಗೆ ಕ್ಲಿಕ್ಕಿಸಿ

Thereby a call is made for research paper presentation/publication by interested research scholars/students (PhD., Mphil, MA). The research paper should be written in Kannada, which is never presented or published before in any other occasion. All interested senior scholars/gurus/artistes/authors including the media are welcome for workshop. Those candidates willing to participate in workshop/seminar should enroll their name. Competent senior researchers are welcome as delegates giving prior intimation to the foundation. Participation certificates would be issued to all participants. Last date for the receipt of abstracts is 1st January 2012. Decision of the Expert Committee will be final.

&

For further information and paper preparation details contact:

Noopura Bhramari Foundation

C/o B.K.Vijayendra

No. 64(33), 2nd cross,

Gavipuram Extension,

Basavanagudi, Bangalore

 

Mobile : 9964140927

Mail : editor@noopurabhramari.com

Website : www.noopurabhramari.com

ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆ

ಕರ್ನಾಟಕದ ಕಲಾ ಕ್ಷೇತ್ರದಲ್ಲಿ ಇದು ಮೊದಲನೇ ವಿನೂತನ ಪ್ರಯತ್ನ. ನೂಪುರದ ಹಲವು ಸದಭಿರುಚಿಯ ಪ್ರಾಯೋಗಿಕ ಯೋಚನೆಗಳಿಗೆ ಇದು ಪ್ರಥಮ ಮುನ್ನುಡಿ.

ನೂಪುರ ಭ್ರಮರಿ’ಯು ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಲಿನಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆಯನ್ನು ಆರಂಭಿಸಿದೆ.ಈಗಾಗಲೇ 2010ನೇ ಸಾಲಿನಲ್ಲಿ (ಜನವರಿ-ಡಿಸೆಂಬರ್) ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆಗಳು/ನಿಯತಕಾಲಿಕೆಗಳಲ್ಲಿ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ. ಓರ್ವ ಲೇಖಕ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮರ್ಶೆಯ ವಿವರಗಳನ್ನು ಬರೆದು ಲಗತ್ತಿಸಬೇಕು.
ಈ ಕುರಿತಂತೆ ಕಲಾವಿದರು/ಗುರು-ಶಿಕ್ಷಕರು/ಕಲಾಸಕ್ತ ಬಂಧುಗಳು ಉತ್ತಮರೆನಿಸುವ ವಿಮರ್ಶಕರನ್ನು ಸೂಕ್ತವೆನಿಸುವ ವಿವರಗಳೊಂದಿಗೆ ನಾಮನಿರ್ದೇಶನಗೊಳಿಸಲು(ನಾಮಿನೇಟ್) ಅವಕಾಶವಿದ್ದು ; ಆಯ್ಕೆ ಸಮಿತಿಯ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಈಗಾಗಲೆ ನೃತ್ಯಕ್ಷೇತ್ರದ ಹಿರಿಯ ವಿದ್ವಾಂಸರನ್ನು ಈ ಕುರಿತಾಗಿ ಸಂಪರ್ಕಿಸಿದ್ದು ಅವರು ಈ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ.
ಲೇಖಕರು ತಮ್ಮ ಅತ್ಯುತ್ತಮವೆನಿಸುವ ೩ ವಿಮರ್ಶೆಗಳನ್ನು ಅಥವಾ ಅದರ ಜೆರಾಕ್ಸ್ ಪ್ರತಿಯನ್ನು ಅಥವಾ ನಾಮನಿರ್ದೇಶನಕ್ಕೆ ಕಳಿಸುವವರ ಕುರಿತು ಶಿಫಾರಸ್ಸುಗಳನ್ನು ಅಂಚೆ ಅಥವಾ ಈ ಮೈಲ್ ಮೂಲಕ ಜನವರಿ 15,2011ರ ಒಳಗೆ ತಲುಪುವಂತೆ ಕಳುಹಿಸಬೇಕು. ಜನವರಿ ೫ ಕೊನೆಯ ದಿನವೆಂದಿದ್ದನ್ನು ಈಗ ವಿಸ್ತರಿಸಿ ಜನವರಿ ೧೫ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ..ಸೂಕ್ತವೆನಿಸುವ ಪ್ರವೇಶಗಳು ಬಾರದೇ ಹೋದಲ್ಲಿ ಪ್ರಶಸ್ತಿಯ ಗುಣಮಟ್ಟದ ದೃಷ್ಟಿಯಿಂದ ಸ್ಪರ್ಧೆಯನ್ನು ತಡೆಯಲಾಗುವುದು.
ಅತ್ಯುತ್ತಮನಿಸುವ ವಿಮರ್ಶೆಗೆ ಫೆಬ್ರವರಿ 13, 2011ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸನ್ಮಾನಪತ್ರ, ಫಲಕ, ನಗದು ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.
ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ:
ಮನೋರಮಾ ಬಿ.ಎನ್
ಸಂಪಾದಕರು, ‘ನೂಪುರ ಭ್ರಮರಿ’
ನಂ.104, ಕೌಶಲ್ ರೀಜೆನ್ಸಿ
೧ನೇ‌ಅಡ್ಡರಸ್ತೆ, ಪ್ರಕಾಶ್ ನಗರ, ರಾಜಾಜಿನಗರ,
ಬೆಂಗಳೂರು ೫೬೦೦೮೫
ದೂರವಾಣಿ: 9964140927,9481765544

———————

೨೦೧೦ನೇ ಸಾಲಿನಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಗೆ ಮೊದಲು ಭಾಜನರಾಗುತ್ತಿರುವವರು ಶ್ರೀಮತಿ ಪ್ರಿಯಾ ರಾಮನ್. ನವದೆಹಲಿಯ ಸಂಸ್ಕೃತಿ ಫೌಂಡೇಶನ್‌ನ ಕಾರ್ಯಕ್ರಮ ಸಂಯೋಜಕರಾಗಿ, ಟೈಮ್ಸ್ ಆಫ್ ಇಂಡಿಯಾದ ಜೊತೆ ಭಾರತೀಯ ಶಾಸ್ತ್ರೀಯ ನೃತ್ಯಗಳ ಶೈಕ್ಷಣಿಕ ಉದ್ದೇಶಗಳ ಕುರಿತಂತೆ ಕಾರ್ಯ ನಿರ್ವಹಿಸಿದ ಪ್ರಿಯಾರಾಮನ್ ಹಲವು ಶೈಕ್ಷಣಿಕ ಮತ್ತು ಸಂಶೋಧನೆಯ ನೆಲೆಗಟ್ಟಿನ ಕೆಲಸಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಬೆಂಗಳೂರಿನ ಶುಭಾ ಧನಂಜಯ್ ಮತ್ತು ದೆಹಲಿಯ ಪದ್ಮಶ್ರೀ ಗೀತಾ ಚಂದ್ರನ್, ಚೆನ್ನೈನ ಬ್ರಾಘ್ಹಾ ಬೆಸಲ್ಸ್ ಬಳಿಯಲ್ಲಿ ನೃತ್ಯಾಭ್ಯಾಸ ಮಾಡಿದ ಪ್ರಿಯಾ; ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಷ್ಟೇ ಅಲ್ಲದೆ ನಿರೂಪಣೆಯನ್ನೂ ನಿರ್ವಹಿಸಿದವರು. ರಾಷ್ಟ್ರೀಯ ಯುವ ಉತ್ಸವ ಪ್ರಶಸ್ತಿ, ವಿದ್ಯಾರ್ಥಿವೇತನಗಳನ್ನು ಪಡೆದ ಪ್ರಿಯಾರಾಮನ್ ನೃತ್ಯಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಅನನ್ಯ ಕಲಾಸಂಘಟನೆಯ ಸ್ವಯಂಸೇವಕಿಯಾಗಿರುವ ಪ್ರಿಯಾರಾಮನ್; ರೋಟರಿ ಫೌಂಡೇಶನ್‌ನ ರಾಯಭಾರಿಯಾಗಿ, ನೃತ್ಯ ಶಿಕ್ಷಣ ವಕ್ತಾರೆಯಾಗಿ ಯು‌ಎಸ್‌ಎಗೆ ಭೇಟಿಯಿತ್ತಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿ, ಪ್ರಸ್ತುತ ಹೈದರಾಬಾದಿನಲ್ಲಿ ತಮ್ಮ ವಾಸ್ತವ್ಯ ಹೂಡಿದರೂ ನೃತ್ಯಸಂಬಂಧೀ ಕಾರ್ಯಕ್ರಮಗಳಿಗೆ ಆಗಾಗ್ಗೆ ಕರ್ನಾಟಕದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡು ಹವ್ಯಾಸಿ ಪತ್ರಕರ್ತೆಯಾಗಿ ದುಡಿಯುತ್ತಿದ್ದಾರೆ. ಚಂದನ ದೂರದರ್ಶನ ಕಲಾವಿದೆಯಾಗಿರುವ ಪ್ರಿಯಾರಾಮನ್ ಜಯಾ ಟಿವಿ ನಡೆಸಿಕೊಡುವ ತಕಧಿಮಿತಾ ನೃತ್ಯಸ್ಫರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು. ೧೯೯೭ರಲ್ಲಿ ವಿದ್ವತ್ ಮತ್ತು ಅರಂಗೇಟ್ರಂ ಪೂರ್ಣಗೊಳಿಸಿದ್ದು; ಧಾರವಾಡದ ಯುವ ಸೌರವ, ಸಾಗರದ ಕಲೋತ್ಸವ, ಅಂಕುರ ಉತ್ಸವ, ಯವನಿಕಾ ಸಾಂಸ್ಕೃತಿಕ ಸಂಜೆ, ಸಾಯಿ ನೃತ್ಯೋತ್ಸವ, ಅನನ್ಯ ನೃತ್ಯಧಾರೆ, ದೆಹಲಿಯ ಲೋಕ್ ಕಲಾ ಮಂಚ್, ಹೈದರಾಬಾದ್‌ನ ನೃತ್ಯ ನೀರಾಜನ್, ಸಪ್ತಪರ್ಣಿ, ಶಿಲ್ಪರಾಮಂಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದಾರೆ. ಅವರು ಅನನ್ಯ ಕಲಾಸಿಂಚನ, ನರ್ತನಂ ಮತ್ತು ನರ್ತಕಿ ನಿಯತಕಾಲಿಕಗಳಲ್ಲಿ ಬರೆದ ಮೂರು ವಿಮರ್ಶೆಗಳನ್ನಾಧರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

 


ಶ್ರೀಮತಿ ಪ್ರಿಯಾ ರಾಮನ್ ಅವರ ಭಾಷೆ, ಶೈಲಿ ಸೂಕ್ತವಾಗಿ ತೋರಿದ್ದು; ವಿಷಯಕ್ಕೆ ನೇರವಾಗಿ ನವಿರಾದ ಲೇವಡಿ, ಸೂಕ್ತ ಸಲಹೆಗಳ ಜೊತೆಗೆ ವಿಮರ್ಶೆಗಳನ್ನು ಬರೆಯಲಾಗಿದೆ. ನೃತ್ಯ ಕಾರ್ಯಕ್ರಮ, ವಿಚಾರಸಂಕಿರಣ, ಉತ್ಸವ… ಹೀಗೆ ವಿವಿಧ ಆಯಾಮಗಳನ್ನು ಬಳಸಿಕೊಂಡಿದ್ದು; ವರದಿ, ವಿಮರ್ಶೆಗಳ ಎರಡೂ ಚಹರೆ ಮೇಳೈಸಿ ಬಂದಿದೆ. ಒಟ್ಟಾರೆಯಾಗಿ ವಿಮರ್ಶಕರಿಗೆ ಇರಬೇಕಾದ ಲಕ್ಷಣಗಳು ಕಂಡುಬಂದಿವೆ ಎಂಬ ಅಭಿಪ್ರಾಯ ತೀರ್ಪುಗಾರರದ್ದು.

ವಿಮರ್ಶಾಕ್ಷೇತ್ರವನ್ನು ಸಮೃದ್ಧಗೊಳಿಸುವಲ್ಲಿ ಸಹಕರಿಸುತ್ತಾ, ಈ ಸ್ಫರ್ಧೆಯಲ್ಲಿ ಹೃತ್ಪೂರ್ವಕವಾಗಿ ಭಾಗವಹಿಸಿದ ನಾಡಿನ ಎಲ್ಲಾ ಗಣ್ಯ ವಿಮರ್ಶಕರಿಗೂ ಮತ್ತು ಹೆಸರನ್ನು ಸೂಚಿಸಿ; ನಾಮನಿರ್ದೇಶನಗೊಳಿಸಿದ ಸಕಲ ಆದರಣೀಯರಿಗೂ, ವಿದ್ವಾಂಸರಿಗೂ, ಪತ್ರಕರ್ತ ಮಿತ್ರರಿಗೂ, ತೀರ್ಪುಗಾರರಿಗೂ ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಭವಿಷ್ಯದಲ್ಲೂ ನಮ್ಮೊಂದಿಗಿದ್ದು; ನೃತ್ಯ/ನಾಟ್ಯ ಕ್ಷೇತ್ರದ ಹಲವು ಆಯಾಮಗಳನ್ನು ಸ್ಪರ್ಶಿಸುವಲ್ಲಿ ಸದಭಿರುಚಿಯ ಪ್ರಯತ್ನಗಳೊಂದಿಗೆ ಜೊತೆಯಾಗಿ ಮುನ್ನಡೆಯೋಣ ಎಂಬ ಬಯಕೆ ನೂಪುರ ಭ್ರಮರಿಯದ್ದು.

 

Leave a Reply

*

code