Author: ಮನೋರಮಾ. ಬಿ.ಎನ್
ವರದಿ: ಮಹೇಶ್ ಚೇವಾರ್
ಮುಖ್ಯ ಅತಿಥಿ -ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಸಾಹಿತಿ, ವಿಮರ್ಶಕ, ನ್ಯಾಯವಾದಿ _ಇವರಿಂದ ವೆಬ್ ಸೈಟ್ ಅನಾವರಣ ನೃತ್ಯ ಕಲೆಯ ಮಾಹಿತಿಯನ್ನೊದಗಿಸುವ ವೆಬ್‌ಸೈಟ್ ಆರಂಭಿಸುವುದು ಸಣ್ಣ ಸಾಧನೆಯೇನಲ್ಲ. ಹಾಗೆಯೇ ಸಿದ್ಧಿಯೂ ಅಲ್ಲ. ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಬಹಳಷ್ಟಿದೆ. ಸಾಧನೆಯ ಮೂಲಕ ಎತ್ತರೆತ್ತರಕ್ಕೆ ಏರಬೇಕು.
ವೈಯಕ್ತಿಕವಾಗಿ ನಮಗೆ ನಮ್ಮ ಆರು ತಲೆಮಾರುಗಳ ಬಗೆಗೆ ಮಾಹಿತಿಯಿದ್ದರೂ ಅವರ ಹಿಂದಿನವರ ಬಗ್ಗೆ ಮಾಹಿತಿಯಿರುವುದಿಲ್ಲ. ಆದರೆ ಶಂಕರಾಚಾರ್ಯರಂತವರು ಕಾಲ ದೇಶಗಳನ್ನು ಮೀರಿದ ಸಾಧನೆಯ ಮೂಲಕ ಇಂದಿಗೂ ನಮ್ಮ ಮನದಳದಲ್ಲಿ ಚಿರಸ್ಠಯಿಯಾಗಿ ಉಳಿದಿದ್ದಾರೆ.
ಪ್ರಸ್ತುತ ನಾವಿರುವ ವ್ಯವಸ್ಥೆಯಲ್ಲಿ ಜ್ಞಾನದ ಕಡೆಯಿಂದ ಮಾಹಿತಿಯ ಕಡೆಗೆ ಹೋಗುತ್ತಿದ್ದೇವೆ. ಇದು ವಿಷಾದನೀಯ. ಯಾವುದೇ ಒಂದು ವಿಷಯದ ಆಳವಾದ ಅಧ್ಯಯನ ಮತ್ತು ಹೆಚ್ಚಿನ ಜ್ಞಾನ ಸಂಪಾದನೆಯ ಹಾದಿಯಲ್ಲಿನ ಸಾಧಕರು ಕಡಿಮೆಯಗುತ್ತಿದ್ದಾರೆ. ಪ್ರಸ್ತುತ ಸಾಧನೆಯ ಹಾದಿಯಲ್ಲಿ ಪ್ರಸಿದ್ಧಿಯನ್ನೇ ಯಶಸ್ಸೆಂದು ತಪ್ಪು ತಿಳಿಯುವ ಸಾಧ್ಯತೆಗಳಿವೆ. ಕಲಾವಿದ ಅಂತಹ ಅಪಾಯಗಳಿಂದ ಪಾರಾಗಬೇಕು. ಪ್ರಸಿದ್ಧಿ ಎನ್ನುವುದು ಹೇಗೆ ಬರುತ್ತದೋ ಎನ್ನುವುದು ತಿಳಿಯಲಾರದು. ಅದು ಆಕಸ್ಮಿಕವಾಗಿಯೂ ದೊರಕಿಬಿಡಬಹುದು. ಆದರೆ ಸಾಧನೆಗೆ ಎಂದಿಗೂ ಆ ರೀತಿಯ ಯಶಸ್ಸು ದೊರಕಲಾರದು. ಗುರಿಯೆಡೆಗಿನ ನಿರಂತರವಾದ ಸಾಧನೆ ಯಶಸ್ಸನ್ನು ತಂದುಕೊಡುತ್ತದೆ. ಕಲೆಯ ಮೂಲಕ ವರ್ತಮಾನದಿಂದ ಭವಿಷ್ಯಕ್ಕೆ ಮುನ್ನಡೆಸುವ ಕಾಯಕ ಆಗಬೇಕು.
ಭಾಸ್ಕರ ಹೆಗಡೆ _ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ಅವರಿಂದ ದೀಪ ಪ್ರಜ್ವಾಲನ ಮತ್ತು ನೂಪುರ ಭ್ರಮರಿಯ ವಿಶೇಷ ಸಂಚಿಕೆ ಬಿಡುಗಡೆ
ಪ್ರಸ್ತುತ ಭಾರತೀಯ ಕಲೆಗಳ ಬಗ್ಗೆ ಪಾಶ್ಚಿಮಾತ್ಯರು ಆಸಕ್ತರಾಗಿ ಅದನ್ನು ತಿಳಿದುಕೊಳ್ಳುವ ಪ್ರಯತ್ನಗಳಿಗೆ ಮುಂದಾಗಿದ್ದಾರಾದರೂ ಇದಕ್ಕೇ ಸ್ಥಳೀಯರು ಮಾತ್ರ ಅಪವಾದವೆಂಬಂತೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಮುಂದಾಗುತ್ತಿದ್ದಾರೆ.
ಅಧ್ಯಕ್ಷತೆ- ಸರ್ಪಂಗಳ ಈಶ್ವರ ಭಟ್- ಯಕ್ಷಗಾನ ಕಲಾವಿದರು ಮತ್ತು ಪ್ರಾಂಶುಪಾಲರು, ಕೇಂದ್ರೀಯ ವಿದ್ಯಾಲಯ
ಮಗುವು ಅನ್ನಪ್ರಾಶನ್ನದ ಮೂಲಕ ಧಾರಣಾಶಕ್ತಿಯನ್ನು ಪಡೆದುಕೊಳ್ಳುತ್ತದೆ. ಅಂತೆಯೇ ಪತ್ರಿಕೆಯು ಅಂತರ್ಜಾಲಕ್ಕ್ಕೆ ಪ್ರವೇಶ ಮಾಡುವ ಮೂಲಕ ಧಾರಣಶಕ್ತಿಯನ್ನು ಪಡೆದುಕೊಂಡಿದೆ.
ಜಗತ್ತಿನಲ್ಲಿ ಕೆಲವೊಂದಕ್ಕೆ ಜನರ ಭೇಟಿ ಕಡಿಮೆಯಾಗುತ್ತದೆ ಎಂದ ಮಾತ್ರಕ್ಕೆ ಅದರ ಬೆಲೆ ಕಡಿಮೆಯಾಗೋದಿಲ್ಲ. ಕಲೆ ಎಂದರೇನು ಎಂಬುದನ್ನು ನಾವು ಅರಿತುಕೊಳ್ಳಬೇಕು. ಹಾಗಾದಾಗ ಮಾತ್ರ ಕಲೆಯ ನಿಜವಾದ ಮಹತ್ವ ತಿಳಿಯುತ್ತದೆ. ಅದರಲ್ಲೂ ಕಲೆಯ ಕುರಿತಾದ ಪತ್ರಿಕೆ ನಡೆಸುವುದು ನಿಜವಾಗಿಯೂ ಒಂದು ಸಂಘರ್ಷ. ನೂಪುರ ಭ್ರಮರಿಯು ಸೀಮೋಲ್ಲಂಘನ ಮಾಡಿದೆ, ನಂತರದ ದೃಷ್ಟಿ ಅನಂತದತ್ತಲೇ ಸರಿ!
ದೇವಾಲಯದ ಪುಸ್ತಕದ ಕುರಿತಾಗಿ- ಸ್ಥಳದ ಮಾಹಿತಿಯನ್ನು ತಿಳಿಯದೆ ಕ್ಷೇತ್ರದರ್ಶನ ಪೂರ್ಣಗೊಳ್ಳುವುದಿಲ್ಲ.
ಹೂವಿಗೆ ಬರುವ ದುಂಬಿಯ ಝೇಂಕಾರ ಅದರ ನಾಭಿ ಮೂಲದಿಂದ ಹೊರಡುವ ಓಂಕಾರವೇ ಹೌದು. ಇಂತಹ ಭ್ರಮರಗಳು ನೃತ್ಯವನ್ನು ಸುತ್ತುವರಿಯುತ್ತಾ ಅದರ ಸವಿಯನ್ನು ಪಡೆಯುತ್ತಿವೆ ನೂಪುರ ಭ್ರಮರಿಯ ಮೂಲಕ.! ಇಂತಹ ಭ್ರಮರಗಳ ಭ್ರಮರೀನಾದ ಸದಾ ನಮ್ಮೆಲ್ಲರನ್ನು ತುಂಬುತ್ತಿರಲಿ.
ಮುಖ್ಯ ಅತಿಥಿ-ಕೆ.ಎಸ್.ದೇವಯ್ಯ, ಉಪಾಧ್ಯಕ್ಷರು, ಭಾರತೀಯ ವಿದ್ಯಾಭವನ, ಮಡಿಕೇರಿ-ಇವರಿಂದ ಭವ್ಯ ಇತಿಹಾಸದ ಓಂಕಾರೇಶ್ವರ ದೇವಾಲಯ ಎಂಬ ಇತಿಹಾಸ ಪುಸ್ತಕದ ಪರಿಷ್ಕೃತ ಪ್ರತಿ ಬಿಡುಗಡೆ
ಯಕ್ಷಗಾನ ತಾಳಮದ್ದಳೆ- ಪ್ರಸ್ತುತಿ : ಯಕ್ಷಕಲಾ ವೇದಿಕೆ, ಹವ್ಯಾಸಿ ಬಳಗ, ಮಡಿಕೇರಿ
ಹಿಮ್ಮೇಳ
ಭಾಗವತರು – ಹರಿನಾರಾಯಣ ಭಟ್ ಪುಂಡಿಕಾ
ಮದ್ದಳೆ ರಾಘವ ಬಲ್ಲಾಳ್
ಚೆಂಡೆ ರಾಜೇಂದ್ರಪ್ರಸಾದ್ ಪುಂಡಿಕಾ
ಶ್ರುತಿ- ರಾಜೀವ ಪೆರ್ಲ
ಮುಮ್ಮೇಳ
ಅರ್ಜುನ- ಸರ್ಪಂಗಳ ಈಶ್ವರ ಭಟ್
ಹನುಮಂತ- ಗೋಪಾಲಕೃಷ್ಣಯ್ಯ
ವೃದ್ಧ ಬ್ರಾಹ್ಮಣ- ಮಹಾಬಲೇಶ್ವರ ಭಟ್
ಕೃಷ್ಣ- ಮನೋರಮಾ ಬಿ.ಎನ್
ಉಪಸ್ಥಿತ ಗಣ್ಯರು-
ಸಾನಿಧ್ಯ ಪ್ರಕಾಶನದ ಪ್ರಕಾಶಕರಾದ ವೇದಮೂರ್ತಿ ಬಿ. ಜಿ. ನಾರಾಯಣ ಭಟ್, ಕಲಾಪೋಷಕರಾದ ಡಾ| ನಡಿಬೈಲು ಉದಯಶಂಕರ್, ಡಾ| ಎಂ. ಜಿ. ಪಾಟ್ಕರ್, ಶಾರದಾ ಮಂದಪ್ಪ, ಅಸೀಮಾ ಆಂಗ್ಲ ಮಾಸಿಕದ ಕಾರ್ಯ ನಿರ್ವಾಹಕ ಸಂಪಾದಕ ಯು. ಮಹೇಶ್ ಪ್ರಭು, ಬಳಗದ ವಿಷ್ಣುಪ್ರಸಾದ್ ನಿಡ್ಡಾಜೆ, ಪ್ರಿಯಾ. ಎಂ. ಕೆರ್ವಾಶೆ, ರಾಧಿಕಾ ವಿಟ್ಲ, ಮಹೇಶ್ ಚೇವಾರ್ ಮತ್ತಿತರರು
ಪ್ರಾರ್ಥನೆ- ಅಕ್ಷಯರಾಮ ಕೆ.
ನಿರೂಪಣೆ- ಶ್ರೀಲಕ್ಷ್ಮಿ ಎಂ. ಭಟ್
ಪ್ರಾಸ್ತಾವಿಕ ಮತ್ತು ಸ್ವಾಗತ- ಮನೋರಮಾ ಬಿ.ಎನ್, ಸಂಪಾದಕಿ
ವೆಬ್‌ಸೈಟ್‌ನ ಪರಿಚಯ ಭಾಷಣ ಮಹೇಶ್ ಎಲ್ಯಡ್ಕ
ವಂದನಾರ್ಪಣೆ- ಸಿ. ಎಸ್. ರಾಮಚಂದ್ರ ಹೆಗಡೆ