ನಿಮಗಿದೋ ಆತ್ಮೀಯ ಆಹ್ವಾನ

Posted On: Friday, November 7th, 2008
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್


ಆತ್ಮೀಯರೇ,

ನೂಪುರ ಭ್ರಮರಿಯು ಕಲೆ- ಸಂಸ್ಕೃತಿಗಳ ಪರಿಚಯಕ್ಕೆ, ಪರಸ್ಪರ ಮಿಲನಕ್ಕೆ, ಅದರಲ್ಲಿನ ನಮ್ಮ ಕರ್ತವ್ಯಕ್ಕೆ ಪೂರಕ ವಾತಾವರಣವನ್ನು ಕಲಿಸಿಕೊಡುವುದರೊಂದಿಗೆ ನಮ್ಮನ್ನು ನಾವು ಅರಿಯುವ ಪ್ರಯತ್ನದಲ್ಲಿ ಹೆಜ್ಜೆಯಿಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ಅಂಶ. ಈ ನಿಟ್ಟಿನಲ್ಲಿ ಮತ್ತಷ್ಟು ಸದಭಿರುಚಿಯ ಪ್ರಯತ್ನಗಳಿಗೆ ನಿಮ್ಮ ಸಹಕಾರ ಬೇಕು. ಈಗಾಗಲೇ ಮಿತಿ-ಭೇಧಗಳನ್ನು ದಾಟಿ ಮುನುಗ್ಗುತ್ತಿರುವ ಲಾಭದ ಉದ್ದೇಶವಿಲ್ಲದ ಪತ್ರಿಕೆಗೆ ಗಡಿ, ಭಾಷೆಯ ಎಲ್ಲೆಗಳನ್ನು ದಾಟಿ ಕಲೆಯ ಹರಿವನ್ನು ಹರಡಿಸುವ ಆಸಕ್ತಿಗೆ ಮತ್ತಷ್ಟು ಇಂಬು ನೀಡುವಂತಾಗಬೇಕು. ಆದ್ದರಿಂದ ಪತ್ರಿಕೆಯು ನಿಮ್ಮನ್ನು ತನ್ನ ಬಳಗದವರನ್ನಾಗಿ ಮಾಡಿಕೊಳ್ಳಲು ಸಂತೋಷಪಡುತ್ತದೆ. ತನ್ನ ಕುಟುಂಬಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದೆ.

ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ, ಸಕ್ರಿಯ ಸದಸ್ಯರಾಗಿ ತಾವು ನೂಪುರ ಭ್ರಮರಿಯ ಜೊತೆಗಿರುತ್ತೀರಿ, ನಿರಂತರ ಸಂಪರ್ಕದಲ್ಲಿರುತ್ತೀರಿ ಎಂಬುದು ನಮ್ಮ ಭಾವನೆ.

ನೀವು ಮಾಡಬೇಕಾದದ್ದೇನು?

* ನಿಮ್ಮ ಸದಸ್ಯತ್ವನ್ನು ಪತ್ರದ ಮೂಲಕವೋ, ಅಥವಾ ಇ-ಮೈಲ್ ಮೂಲಕವೋ ಅಥವಾ ಫೋನ್ ಮುಖಾಂತರವೋ ದೃಢಪಡಿಸಿ.

ತಮ್ಮ ಸಂಪರ್ಕ ವಿಳಾಸ, ನಂಬರ್‌ನ್ನು ನೀಡಿದರೆ ಮುಂದಿನ ದಿನಗಳಲ್ಲಿ ಲೇಖನ, ಮಾಹಿತಿ, ಕಾರ್ಯಕ್ರಮಕ್ಕೆ ಮತ್ತು ಅವುಗಳ ಬಗೆಗಿನ ಪರಿಶೀಲನೆಗೆ ಸಹಕಾರಿಯಾಗುತ್ತದೆ. ಸದಸ್ಯತ್ವಕ್ಕೆ ಯಾವುದೇ ಚಂದಾ/ ಅಥವಾ ಫೀಸುಗಳಿಲ್ಲ.

* ನಿಮ್ಮ ಸಂಸ್ಥೆಯ, ಗುರು-ಕಲಾವಿದ, ಸಾಧನೆಗಳ ಕುರಿತಾದ ಪರಿಚಯ ಅಥವಾ ಲೇಖನವನ್ನೋ ಬರೆದು ಕಳಿಸಿ.

ಇದು ಮುಂದಿನ ಸಂಚಿಕೆಗಳಲ್ಲಿ ಬರಲಿರುವ ಪ್ರದೇಶವಾರು/ಶಾಖಾವಾರು ನೂತನ ಪರಿಚಯ ಅಂಕಣಕ್ಕೆ ಬಳಸಿಕೊಂಡು ನಮ್ಮ ನಡುವೆ ಪರಿಚಯದ ಸೇತುವೆಯನ್ನು ಕಲ್ಪಿಸಿಕೊಳ್ಳಬಹುದು. ಇದರಿಂದ ಶಾಸ್ತ್ರೀಯ/ಜನಪದ/ ಯಕ್ಷಗಾನ/ನಾಟಕ ..

ಹೀಗೆ ವಿವಿಧ ಪ್ರದರ್ಶಕ ಕಲೆಗಳ ಕಲಾಸಕ್ತ, ನೃತ್ಯಸಾಕ್ತ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ.

*

ಅಥವಾ ನೀವು ನಿಮ್ಮ ಊರಿನ/ಪ್ರದೇಶದ/ಪಟ್ಟಣದ ಗುರು-ಕಲಾವಿದ-ಸಂಸ್ಥೆಗಳ ಕುರಿತು ಪುಟ್ಟ ಮಾಹಿತಿ ಮತ್ತು ಸಂಪರ್ಕ ವಿಳಾಸ, ಅಥವಾ ಆಯಾಯ ಊರಿನ ಕಲಾ ಪ್ರಗತಿ, ಅಲ್ಲಿನ ಸಾಧನೆಗಳ ಕುರಿತು ಲೇಖನವನ್ನು ಕಳಿಸಬಹುದು,

* ಮಲೆನಾಡು ಶಾಖೆ (ಕೊಡಗು/ಚಿಕ್ಕಮಗಳೂರು/ ಹಾಸನ)

* ಬೆಂಗಳೂರು ಶಾಖೆ

* ದಕ್ಷಿಣ ಕನ್ನಡ( ಉಡುಪಿ/ ಪುತ್ತೂರು-ಸುಳ್ಯ/ಕಾಸರಗೋಡು/ಮಂಗಳೂರು) ಶಾಖೆ

* ಉತ್ತರ ಕನ್ನಡ (ಶಿವಮೊಗ್ಗ/ ಸಾಗರ ಇತ್ಯಾದಿ)ಶಾಖೆ

* ಉತ್ತರ ಕರ್ನಾಟಕ ಶಾಖೆ

* ಮುಂಬೈ ಶಾಖೆ

* ಚೆನ್ನೈ ಶಾಖೆ

* ದೆಹಲಿ ಶಾಖೆ …

ಹೀಗೆ, ವಿವಿಧ ಶಾಖೆಗಳಲ್ಲಿ ನೀವು ಇರುವಿರಾದರೆ ಅಲ್ಲಿನ ಸಕ್ರಿಯ ಸದಸ್ಯರಾಗಿ ಮಾಹಿತಿಗಳನ್ನು ನೀಡಬಹುದು.

*

ಕಲೆಯಲ್ಲಿ ತರಬೇತಿ ಹೊಂದುತ್ತಿರುವ/ಹೊಂದಿರುವ ವಿದ್ಯಾರ್ಥಿಗಳಾದರೆ ಕಲಿಯುವ ದಿಸೆಯಲ್ಲಿ ತಾವು ಎದುರಿಸುವ ಸವಾಲು, ಕಷ್ಟ – ಇಷ್ಟಗಳ ಕುರಿತು ಅನುಭವಗಳನ್ನು ಬರೆದು ಕಳಿಸಬಹುದು. ಪೋಷಕರಾದರೆ ತಮ್ಮ ಕನಸು, ತಮ್ಮ ಮಕ್ಕಳನ್ನು ಕಲಾವಿದರನ್ನಾಗಿ ಮಾಡುವಲ್ಲಿ ಅವರ ಪ್ರಯತ್ನ, ಸವಾಲು ಮುಂತಾದ ವಿಷಯಗಳ ಕುರಿತೂ ಅನುಭವ ಲೇಖನವನ್ನು ಕಳಿಸಬಹುದು. ಇದು ಪ್ರತಿಯೊಬ್ಬ ಕಲಾಸಕ್ತರ ಪತ್ರಿಕೆಯಾಗಿರುವುದರಿಂದ ಇತಿ-ಮಿತಿ-ಬೇಧಗಳಿಗೆ ಇಲ್ಲಿ ಅವಕಾಶವಿಲ್ಲ. ಕಲೆಯನ್ನು ಪ್ರತಿಯೊಬ್ಬ ಆಸಕ್ತರಿಗೂ ಆತ್ಮೀಯವಾಗಿಸಿ ಅವರನ್ನು ಮತ್ತಷ್ಟು ಹತ್ತಿರಕ್ಕೆ ತರುವಂತೆ ಮಾಡುವುದು ನಮ್ಮ ಆಶಯ.

*

ಯಾವುದೇ ಶಾಸ್ತ್ರೀಯ/ಜನಪದ/ನೂತನ/ಯಕ್ಷಗಾನ/ನಾಟಕ/ನೃತ್ಯ ಹೀಗೆ.., ವಿವಿಧ ಪ್ರದರ್ಶಕ ಕಲೆಗಳ ಕುರಿತಂತೆ ಪರಿಚಯ ನೀಡುವ ನಿಟ್ಟಿನ ಅಥವಾ ವಿಮರ್ಶಾತ್ಮಕವಾದ, ವಿವೇಚನೆಗೆ ಹಚ್ಚಬಲ್ಲಂಥಹ ಲೇಖನ, ಬರಹ, ಕವನ , ಚಿಂತನೆಯನ್ನು ಕಳಿಸಬಹುದು. ಪ್ರದರ್ಶಕ ಕಲೆಗಳಲ್ಲೂ ಗುರುತರವಾದ ಸಾಧನೆ ಮಾಡಿದ, ನಿಃಸ್ವಾರ್ಥ ರೀತಿಯಲ್ಲಿ ಕಲಾಸೇವೆಯನ್ನು ಮುಂದುವರೆಸುವ, ಕೊಡುಗೆ ನೀಡುವ ವ್ಯಕ್ತಿಗಳನ್ನು ತಾವು ದರ್ಶಿಸಿ-ಸಂದರ್ಶಿಸಿ ಅವರ ಅನುಭವ-ವಿಚಾರಗಳನ್ನು ಸಂದರ್ಶನ ಲೇಖನವಾಗಿ ಬರೆದು ಕಳಿಸಬಹುದು.

*

ಯಾವುದೇ ಪ್ರದೇಶದಲ್ಲಿ ನಡೆದ ಯಾವುದೇ ಸಂಸ್ಥೆಯ ವಿಶಿಷ್ಟವೆನಿಸುವ ರಂಗಪ್ರಯೋಗ, ಕಾರ್ಯಗಾರ, ಪ್ರದರ್ಶನದ ಬಗೆಗೆ ಮಾಹಿತಿ, ವಿಮರ್ಶೆ, ಸಂದರ್ಶನ, ಲೇಖನಕ್ಕೂ ಆದ್ಯತೆಯಿದೆ. ಅದರೆ ಈ ನಿಟ್ಟಿನಲ್ಲಿ ಮಾಮೂಲಿಯೆನಿಸುವ ವಾರ್ಷಿಕೋತ್ಸವ, ರಂಗಪ್ರವೇಶದ ವಿವರಗಳಿದ್ದರೆ ಅವು ಬೇಡ.

* ಮುಂದಿನ ದಿನಗಳಲ್ಲಿ ಪತ್ರಿಕೆಯ ಸ್ವರೂಪ-ಸಾಧ್ಯತೆಗಳ ವಿಸ್ತರಣೆಯ ದೃಷ್ಟಿಯಿಂದ ಮತ್ತು ಗುರು-ಕಲಾವಿದ-ಪೋಷಕ-ವಿದ್ಯಾರ್ಥಿ ಮತ್ತು ಪ್ರೇಕ್ಷಕರ ಮೌಲಿಕ, ಗುಣಾತ್ಮಕ ಪರಿಚಯ ಮತ್ತು ಒಟ್ಟುಗೂಡಿಸುವಿಕೆಯ ಹಿನ್ನಲೆಯಲ್ಲಿ ಅನೇಕ ಪ್ರದೇಶವಾರು ಸದಭಿರುಚಿಯ ಕಾರ್ಯಕ್ರಮ-ಸ್ಪರ್ಧೆ-ಪ್ರಶಸ್ತಿ-ಕಾರ್ಯಾಗಾರಗಳನ್ನು ಏರ್ಪಡಿಸುವ ಆಲೋಚನೆಗಳಿವೆ. ಈ ಹಿನ್ನಲೆಯಲ್ಲಿ ಸಂಪರ್ಕ ಸಾಧಿಸುವಿಕೆಗೆ, ಪ್ರಾಯೋಜಕತ್ವಕ್ಕೆ ತಮ್ಮ ಸಲಹೆ-ಸಹಕಾರ ಅಗತ್ಯವಿದೆ.

ನೂಪುರ ಭ್ರಮರಿ ನಮ್ಮ, ನಿಮ್ಮ, ನಮ್ಮೆಲ್ಲರ ಪತ್ರಿಕೆ

ನರ್ತನ ಜಗತ್ತಿನಲ್ಲೊಂದು ಪರಿಭ್ರಮಣಕ್ಕೆ ನಾವೆಲ್ಲರೂ ಒಟ್ಟಾಗಿ ಮುಂದಾಗೋಣವೇ?

ಸಂಪರ್ಕಿಸಬೇಕಾದ ವಿಳಾಸ :

ನೂಪುರ ಭ್ರಮರಿ,

ಸಾನಿಧ್ಯ, ದೇಚೂರು ರಸ್ತೆ, ಅಶ್ವತ್ಥಕಟ್ಟೆ ಸಮೀಪ,

ಮಡಿಕೇರಿ, ಕೊಡಗು, ೫೭೧೨೦೧

ಮೊಬೈಲ್ ನಂಬರ್ : ೯೯೬೪೧೪೦೯೨೭, ೯೮೮೦೫೯೨೯೮೬ (ಮನೋರಮಾ ಬಿ.ಎನ್-ಸಂಪಾದಕಿ)

ವೆಬ್‌ಸೈಟ್ :www.noopurabhramari.com

ಇ-ಮೈಲ್ : feedback@noopurabhramari.com

~ಧನ್ಯವಾದಗಳು~

-ಸಂಪಾದಕರು ಮತ್ತು ಬಳಗ

ನೂಪುರ ಭ್ರಮರಿ

Leave a Reply

*

code