Author: Editor
ನೂಪುರ ಭ್ರಮರಿಯ ಆತ್ಯಂತಿಕ ಮಾರ್ಗದರ್ಶಕರೂ, ಪ್ರೀತಿಪಾತ್ರರೂ, ಹಿರಿಯ ಗುರುಗಳೂ ಆದ ಮಂಗಳೂರಿನಲ್ಲಿ ನೆಲೆಸಿರುವ ನಾಟ್ಯಾಚಾರ್ಯ ಮುರಳೀಧರ ರಾವ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಮ್ಮಾನಿಸಿದೆ.
ಅನಾರೋಗ್ಯದ ಕಾರಣದಿಂದಾಗಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅನನುಕೂಲವಾಗಿದ್ದರಿಂದ ಶ್ರೀ ಮುರಳೀಧರ ರಾವ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ಅವರು ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಹಿರಿಯ ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್, ಕರಾವಳಿ ನೃತ್ಯಕಲಾ ಪರಿಷತ್‌ನ ಅಧ್ಯಕ್ಷ ವಿ| ಕಮಲಾಕ್ಷ ಆಚಾರ್, ಪ್ರೊ.ಎ.ವಿ.ನಾವಡ ಮತ್ತಿತರರು ಉಪಸ್ಥಿತರಿದ್ದರು ನೂಪುರ ಭ್ರಮರಿಯ ಪರವಾಗಿ ಹಾರ್ದಿಕ ಅಭಿನಂದನೆಗಳು.